newsfirstkannada.com

Narendra modi: ಮೇರೆ ಪ್ಯಾರೆ ಪರಿವಾರ್‌ಜನೋ.. ಮೋದಿ ಮಾತಿನ ವರಸೆ ಬದಲಾಗಲು ಕಾರಣವೇನು?

Share :

15-08-2023

    ಮಿತ್ರೋ, ಭಾಯಿಯೋ ಔರ್ ಬೆಹನೋ ಎನ್ನುತ್ತಿದ್ದ ನರೇಂದ್ರ ಮೋದಿ

    2014ರಲ್ಲಿ ಮೊಟ್ಟ ಮೊದಲು ಕೆಂಪುಕೋಟೆ ಮೇಲೆ ಧ್ವಜಾರೋಹಣ

    10ನೇ ಬಾರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಹೊಸ ಶೈಲಿ

ನವದೆಹಲಿ: ಭಾಯಿಯೋ ಔರ್ ಬೆಹನೋ.. ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸುವಾಗ ಕೇಳುತ್ತಿದ್ದ ಮೊಟ್ಟ ಮೊದಲ ಸಾಲುಗಳಿವು. ಪ್ರತಿ ಬಾರಿ ನೆರೆದಿದ್ದ ಜನಸಾಗರವನ್ನ ನರೇಂದ್ರ ಮೋದಿ ಹೀಗೆ ಹೇಳುತ್ತಾ ಹುರಿದುಂಬಿಸುತ್ತಿದ್ದರು. ಆದ್ರೀಗ ಪ್ರಧಾನಿ ಮೋದಿ ಅವರ ಭಾಷಣದ ಶೈಲಿ ಬದಲಾಗಿದೆ. 77ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಕೆಂಪುಕೋಟೆ ಮೇಲೆ ಭಾಷಣ ಮಾಡಿದ ನರೇಂದ್ರ ಮೋದಿ ಅವರು ಮೇರೆ ಪ್ಯಾರೆ ಪರಿವಾರ್‌ಜನೋ ಎಂದು ತಮ್ಮ ಮಾತು ಆರಂಭಿಸಿದ್ದಾರೆ.

2014ರಲ್ಲಿ ಮೊಟ್ಟ ಮೊದಲು ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ ಅವರು ಸತತ 10 ಬಾರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. 2014ರಿಂದಲೂ ಮಿತ್ರೋ, ಭಾಯಿಯೋ ಔರ್ ಬೆಹನೋ ಎಂದು ಭಾಷಣ ಮಾಡುತ್ತಿದ್ದ ಮೋದಿ ಅವರು 2023ರಲ್ಲಿ ಮೇರೆ ಪ್ಯಾರೆ ಪರಿವಾರ್‌ಜನೋ ಎಂದು ತಮ್ಮ ಭಾಷಣ ಮಾಡಿದ್ದಾರೆ. ಅಂದಹಾಗೆ ಪರಿವಾರ್‌ಜನೋ ಅಂದ್ರೆ ಪರಿವಾರದವರೇ ಎಂದರ್ಥ. ಅರ್ಥ ಸಿಂಪಲ್ ಆಗಿದ್ರೂ ಇದರ ಹಿಂದೆ ಬಹಳ ದೊಡ್ಡ ಉದ್ದೇಶವಿದೆ ಎನ್ನಲಾಗುತ್ತಿದೆ.

2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರು ಭಾಯಿಯೋ ಔರ್ ಬೆಹನೋ ಅಂತಾನೇ ತಮ್ಮ ಭಾಷಣ ಆರಂಭಿಸುತ್ತಿದ್ದರು. ಭಾಷಣದ ಮಧ್ಯೆ ಹತ್ತಾರು ಬಾರಿ ಭಾಯಿಯೋ ಔರ್ ಬೆಹನೋ ಎನ್ನುತ್ತಿದ್ದರು. ಆದ್ರೆ, ಇದೀಗ ಆ ಮಾತಿಗೆ ಬ್ರೇಕ್ ಹಾಕಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ತಿಂಗಳು ಬಾಕಿ ಇದೆ. ಇದು ಲೋಕಸಭಾ ಚುನಾವಣೆಗೂ ಮುನ್ನ ಇರೋ ಸ್ವಾತಂತ್ರ್ಯ ದಿನಾಚರಣೆಯಾಗಿದೆ. ಮುಂದಿನ ವರ್ಷವೇ ತಾವೇ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಹಿನ್ನೆಲೆ ತಮ್ಮ ಹಿಂದಿನ ಸಂಪ್ರದಾಯವನ್ನು ಬಿಟ್ಟಿರುವ ನರೇಂದ್ರ ಮೋದಿ ಅವರು ಮೇರೆ ಪ್ಯಾರೆ ಪರಿವಾರ್‌ಜನೋ ಎಂದು ಭಾಷಣ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Narendra modi: ಮೇರೆ ಪ್ಯಾರೆ ಪರಿವಾರ್‌ಜನೋ.. ಮೋದಿ ಮಾತಿನ ವರಸೆ ಬದಲಾಗಲು ಕಾರಣವೇನು?

https://newsfirstlive.com/wp-content/uploads/2023/08/PM-Modi-Speech-date.jpg

Load More