newsfirstkannada.com

ಮೆಟ್ರೋಕಾಸ್ಟ್​ ನೆಟ್​ವರ್ಕ್​ ಸಂಸ್ಥೆ ನಿರ್ದೇಶಕಿ ನಿಶಾ ಛಾಬ್ರಿಯಾ ನಿಧನ; ಕಂಬನಿ ಮಿಡಿದ ಕುಟುಂಬ

Share :

05-09-2023

  ಮೆಟ್ರೋಕಾಸ್ಟ್​ ನೆಟ್​ವರ್ಕ್​ ಸಂಸ್ಥೆಯ ನಿರ್ದೇಶಕಿ ನಿಶಾ ಛಾಬ್ರಿಯಾ

  ಅಕಾಲಿಕ ಮರಣಕ್ಕೆ ತುತ್ತಾದ ನಿಶಾ ಛಾಬ್ರಿಯಾ, ದುಃಖದಲ್ಲಿ ಕುಟುಂಬ!

  52 ವರ್ಷದ ವಯೋಮಾನದ ಇವರು ಅನಾರೋಗ್ಯಕ್ಕೀಡಾಗಿದ್ದರು..!

ಬೆಂಗಳೂರು: ಮೆಟ್ರೋಕಾಸ್ಟ್​ ನೆಟ್​ವರ್ಕ್​ ಸಂಸ್ಥೆಯ ನಿರ್ದೇಶಕಿ ನಿಶಾ ಛಾಬ್ರಿಯಾ ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. 52 ವರ್ಷದ ವಯೋಮಾನದವರಾಗಿದ್ದ ಅವರು ಆರೋಗ್ಯ ಸಮಸ್ಯೆಯ ಕಾರಣ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ನಾಳೆ ಬೆಳಗ್ಗೆ 10.30ಕ್ಕೆ ಮುಂಬೈನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಹಾಗೂ ಬೆಳಗಾವಿ ಭಾಗದಲ್ಲಿ ಮೆಟ್ರೋಕಾಸ್ಟ್​ ಸಂಸ್ಥೆ ಅತ್ಯುತ್ತಮ ಕೇಬಲ್​ ನೆಟ್​ವರ್ಕ್​ ಹೊಂದಿದೆ. ಇದಲ್ಲದೇ ಗೋವಾ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲೂ ಸಹ ಕೇಬಲ್​ ನೆಟ್​ವರ್ಕ್​ ಹೊಂದಿದೆ.

ಮೆಟ್ರೋಕಾಸ್ಟ್​​​ ನೆಟ್​ವರ್ಕ್​ ಸಂಸ್ಥೆ ಬೆಳೆಸುವಲ್ಲಿ ನಿಶಾ ಛಾಬ್ರಿಯ ಅವರು ಅವಿರತ ಶ್ರಮ ವಹಿಸಿದ್ದರು. ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಾಧ್ಯಮ ವರ್ಗದಲ್ಲಿ ಅವರು ಚಿರಪರಿಚಿತರಾಗಿದ್ದರು.

ದುಃಖದಲ್ಲಿ ಇಡೀ ಕುಟುಂಬ

ನಿಶಾ ಛಾಬ್ರಿಯ ಹಲವರಿಗೆ ಮಾದರಿಯಾಗಿದ್ದರು. ಇವರ ನಿಧನದಿಂದ ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ. ನಾಳೆ ಮುಂಬೈನಲ್ಲೇ ಅಂತ್ಯಕ್ರಿಯೆ ನಡೆಯಲಿದ್ದು, ಮೆಟ್ರೋಕಾಸ್ಟ್​​ ಸಿಬ್ಬಂದಿ ಮತ್ತಿಡೀ ಕುಟುಂಬ ಕಣ್ಣೀರು ಹಾಕುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಟ್ರೋಕಾಸ್ಟ್​ ನೆಟ್​ವರ್ಕ್​ ಸಂಸ್ಥೆ ನಿರ್ದೇಶಕಿ ನಿಶಾ ಛಾಬ್ರಿಯಾ ನಿಧನ; ಕಂಬನಿ ಮಿಡಿದ ಕುಟುಂಬ

https://newsfirstlive.com/wp-content/uploads/2023/09/death-42.jpg

Load More