newsfirstkannada.com

ಕಂದಕಕ್ಕೆ ಉರುಳಿದ ಬಸ್​.. 1 ವರ್ಷದ ಮಗು ಸೇರಿ 27 ಪ್ರಯಾಣಿಕರು ಸಾವು.. 17 ಮಂದಿ ಗಂಭೀರ

Share :

Published July 6, 2023 at 8:51am

    ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಕಾದು ಕುಳಿತ್ತಿದ್ದ ಯಮರಾಯ

    1 ವರ್ಷದ ಮಗು ಸೇರಿ 13 ಮಹಿಳೆಯರು, 13 ಪುರುಷರು ಸಾವು

    ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳು ಆಸ್ಪತ್ರೆಗೆ ದಾಖಲು

ಬಸ್​ವೊಂದು ಕಂದಕ್ಕಕ್ಕೆ ಬಿದ್ದು ಒಂದು ವರ್ಷದ ಮಗು ಸೇರಿ 27 ಪ್ರಯಾಣಿಕರು ಸಾವನ್ನಪ್ಪಿ, 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೆಕ್ಸಿಕೋ ನಗರದ ಮ್ಯಾಗ್ಡಲೀನಾ ಪೆನಾಸ್ಕೋ ನಗರದ ಬಳಿ ನಡೆದಿದೆ.

ಬಸ್​ ಮೆಕ್ಸಿಕೋದಿಂದ ಯೊಸೊಂಡುವಾ ನಗರಕ್ಕೆ ತೆರಳುತ್ತಿತ್ತು. ಈ ವೇಳೆ ವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ​ ರಸ್ತೆಯಿಂದ ಕಂದಕ್ಕಕ್ಕೆ ಉರುಳಿದೆ. ಪರಿಣಾಮ 1 ವರ್ಷದ ಮಗು ಸೇರಿದಂತೆ 27 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮ್ಯಾಗ್ಡಲೇನಾ ಪೆನಾಸ್ಕೋ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಘಟನೆಯು ಬೆಳಗ್ಗೆ 6:30ರ ಸಮಯಕ್ಕೆ ನಡೆದಿದೆ ಎನ್ನಲಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ರಕ್ಷಣೆ ಕಾರ್ಯದಲ್ಲಿ ತೊಡಗಿ ಆಂಬುಲೆನ್ಸ್​ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಾವನ್ನಪ್ಪಿದವರ ಪೈಕಿ 1 ವರ್ಷದ ಮಗು ಸೇರಿ 13 ಮಂದಿ ಮಹಿಳೆಯರು, 13 ಜನ ಪುರುಷರು ಸೇರಿದ್ದಾರೆ ಎಂದು ತಿಳಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂದಕಕ್ಕೆ ಉರುಳಿದ ಬಸ್​.. 1 ವರ್ಷದ ಮಗು ಸೇರಿ 27 ಪ್ರಯಾಣಿಕರು ಸಾವು.. 17 ಮಂದಿ ಗಂಭೀರ

https://newsfirstlive.com/wp-content/uploads/2023/07/BUS-3.jpg

Load More