ಲಕ್ನೋ ಮತ್ತು ನವೀನ್ ಉಲ್ ಹಕ್ ಅನ್ನು ಗೇಲಿ ಮಾಡಿದ ಮುಂಬೈ ಆಟಗಾರರು
ಆರ್ಸಿಬಿ ಕೆಣಕಿದ್ದಕ್ಕೆ ನವೀನ್ಗೆ ಮುಂಬೈ ಆಟಗಾರರಿಂದ ಉತ್ತರ
ಪೋಸ್ಟ್ ಡಿಲೀಟ್ ಮಾಡಿದ ಮುಂಬೈ ಇಂಡಿಯನ್ಸ್
ನಿನ್ನೆ ನಡೆದ ಎಲಿಮಿನೀಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಲಕ್ನೋ ತಂಡವನ್ನ ಸೋಲಿಸಿದೆ. 81 ರನ್ಗಳ ಭರ್ಜರಿ ಜಯದೊಂದಿಗೆ ರೋಹಿತ್ ಪಡೆ ಲಕ್ನೋ ತಂಡವನ್ನು ಹಿಮ್ಮೆಟ್ಟಿಸಿದೆ. ಪಂದ್ಯ ಗೆದ್ದ ಬಳಿಕ ಮುಂಬೈ ಆಟಗಾರರು ಸಿಹಿ ಮಾವಿನ ಹಣ್ಣಿನ ಜೊತೆಗೆ ಗಾಂಧೀ ತತ್ವದಂತೆ ಸಾರುವ ಫೋಟೋ ಕ್ಲಿಕ್ಕಿಸಿಕೊಂಡು ಹಂಚಿದ್ದಾರೆ. ಆದರೆ ಈ ಫೋಟೋ ನಿಮಿಷಾರ್ಧದಲ್ಲೇ ವೈರಲ್ ಆಗಿದ್ದು ಟ್ರೋಲಿಗೂ ಕಾರಣವಾಗಿದೆ.

ಮುಂಬೈ ಪ್ಲೇಯರ್ಸ್ ಲಕ್ನೋ ತಂಡವನ್ನ ಸೋಲಿನ ಹೆಡೆಮುರಿ ಕಟ್ಟಿಸಿದೆ. ಭರ್ಜರಿ 81 ರನ್ಗಳ ಭರ್ಜರಿ ಜಯದೊಂದಿಗಿದೆ ರೋಹಿತ್ ಪಡೆ ಫೈನಲ್ಗೆ ಪ್ರವೇಶಿಸಿದೆ. ಆದರೆ ಈ ಸಂತಸದ ಜೊತೆಗೆ ಮುಂಬೈ ಆಟಗಾರರಾದ ಸಂದೀಪ್ ವಾರಿಯರ್, ವಿಷ್ಣು ವಿನೋದ್ ಮತ್ತು ಕುಮಾರ್ ಕಾರ್ತಿಕೇಯ ಮುಂಭಾಗದ ಟೇಬಲ್ನಲ್ಲಿ ಮಾವಿನ ಹಣ್ಣು ಇಟ್ಟುಕೊಂಡು ಗಾಂಧಿ ತತ್ವ ಸಾರುವಂತೆ ಫೋಟೋ ಹಂಚಿಕೊಂಡಿದ್ದಾರೆ. ಅಂದಹಾಗೆಯೇ ಫೋಟೋದಲ್ಲಿ ಈ ಮೂವರು ಕೆಟ್ಟದ್ದನ್ನು ಕೇಳಲಾರೆ, ಕೆಟ್ಟದ್ದನ್ನು ನೋಡಲಾರೆ, ಕೆಟ್ಟದ್ದನ್ನು ಮಾತನಾಡಲಾರೆ ಎಂಬಂತೆಯೇ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಈ ಫೋಟೋವನ್ನ ಮುಂಬೈ ಇಂಡಿಯನ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
The sweet mangoes! pic.twitter.com/BM0VCHULXV
— Mufaddal Vohra (@mufaddal_vohra) May 24, 2023

ಆರ್ಸಿಬಿ ಮತ್ತು ಲಕ್ನೋ ಪಂದ್ಯದ ವೇಳೆ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಪಂದ್ಯ ಮುಗಿದ ಬಳಿಕವೂ ನವೀನ್ ಮತ್ತು ಕೊಹ್ಲಿ ನಡುವೆ ಮಾತುಕತೆ ಉಂಟಾಯಿತು. ಈ ವೇಳೆ ಗಂಭೀರ್ ಎಂಟ್ರಿ ಕೊಟ್ಟಿರುವುದು ಕೂಡ ಟ್ರೋಲ್ ಆಗಿತ್ತು.
ನಂತರ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ಪಂದ್ಯದ ವೇಳೆ ನವೀನ್ ಉಲ್ ಹಕ್ ಮ್ಯಾಂಗೋ ಹಣ್ಣ ಸೇವಿಸುತ್ತಾ ಮುಂಬೈ ಬೌಲರ್ ಪಿಯುಷ್ ಚಾವ್ಲಾರನ್ನು ಹೊಗಳಿದ್ದರು. ಮಾತ್ರವಲ್ಲದೆ ಸ್ವೀಟ್ ಮ್ಯಾಂಗೋ ಹಣ್ಣಿನ ಫೋಟೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಈ ವಿಚಾರ ಆರ್ಸಿಬಿ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿತ್ತು. ಆದರೀಗ ಮುಂಬೈ ಆಟಗಾರರೇ ಲಕ್ನೋ ಆಟಗಾರರನ್ನು ಅದೇ ಮಾವಿನ ಹಣ್ಣು ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.
View this post on Instagram
ಆರ್ಸಿಬಿ ಫ್ಯಾನ್ಸ್ಗೆ ಇದು ಸಿಹಿ ಸುದ್ದಿ
ಮುಂಬೈ ತಂಡದ ಆಟಗಾರರು ನವೀನ್ ಉಲ್ ಹಕ್ ಅನ್ನು ಟ್ರೋಲ್ ಮಾಡಿರುವುದು ಆರ್ಸಿಬಿ ಮತ್ತು ಕೊಹ್ಲಿ ಫ್ಯಾನ್ಸ್ಗೆ ಸಂತಸದ ಸಂಗತಿಯಾಗಿದೆ. ಅನೇಕರು ಈ ವಿಚಾರವನ್ನು ಮತ್ತೆ ಟ್ರೋಲ್ ಮಾಡುತ್ತಿದ್ದಾರೆ. ಯಾರನ್ನು ಬೇಕಾದರೂ ಕೆಣಕಿ ಆದರೆ ಕೊಹ್ಲಿಯನ್ನು ಕೆಣಕಬೇಡಿ ಎಂದು ನವೀನ್ ಉಲ್ ಹಕ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.
ಪೋಸ್ಟ್ ಡಿಲೀಟ್ ಮಾಡಿದ ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ಟ್ವಿಟ್ಟರ್ನಲ್ಲಿ ಸ್ವೀಟ್ ಮ್ಯಾಂಗೋ ಪೋಸ್ಟ್ ಹಂಚಿಕೊಂಡ ಬಳಿಕ ನಿಮಿಷಾರ್ಧದಲ್ಲೇ ಸಖತ್ ಟ್ರೋಲ್ ಆಗಿದೆ. ಕೂಡಲೇ ಈ ವಿಚಾರ ಬೆಳಕಿಗೆ ಬಂದಂತೆ ಪೋಸ್ಟ್ ಅನ್ನು ಮುಂಬೈ ಇಂಡಿಯನ್ಸ್ ತಂಡ ಡಿಲೀಟ್ ಮಾಡಿದ್ದಾರೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ