ಸುಖಾ ಸುಮ್ಮನೆ ಭಾರತೀಯರ ಕೆಣಕಿದ ಮೈಕಲ್ ವಾನ್
ಇಂಗ್ಲೆಂಡ್ ಮಾಜಿ ಕ್ರಿಕೆಟಿಗನಿಗೆ ಡಿಸೈನ್ ಡಿಸೈನ್ ಕ್ಲಾಸ್..!
ಎಲ್ಲಿಯ ಕೊಹ್ಲಿ, ಎಲ್ಲಿಯ ರೂಟ್, ಹೇಗೆ ಹೋಲಿಕೆ..?
ಕ್ರಿಕೆಟ್ ಕಾಶಿ ಲಾರ್ಡ್ನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವೆ ಟೆಸ್ಟ್ ಫೈಟ್ ನಡೀತಾಯಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರೋ ಆಂಗ್ಲ ಪಡೆ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಇದೇ ಟೆಸ್ಟ್ ಫೈಟ್ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್, ಕ್ಲಾಸಿಕ್ ಸೆಂಚುರಿ ಸಿಡಿಸಿ ಗಮನ ಸೆಳೆದಿದ್ದಾರೆ. ಈ ಪಂದ್ಯದ ನಡುವೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕಿಂಗ್ ಕೊಹ್ಲಿ ಕಾಲೆಳೆಲು ಹೋಗಿ ತಾವೇ ದುಪ್ಪೆಂದು ಬಿದ್ದಿದ್ದಾರೆ.
33ನೇ ಟೆಸ್ಟ್ ಸೆಂಚುರಿ ಸಿಡಿಸಿದ ಜೋ ರೂಟ್.!
ಪಂದ್ಯದಲ್ಲಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಸಾಲಿಡ್ ಇನ್ನಿಂಗ್ಸ್ ಕಟ್ಟಿದ ಜೋ ರೂಟ್, 206 ಎಸೆತಗಳನ್ನ ಎದುರಿಸಿದ್ರು. ಎಚ್ಚರಿಕೆಯ, ತಾಳ್ಮೆಯ ಆಟದಿಂದ ಗಮನ ಸೆಳೆದ ರೂಟ್, 18 ಬೌಂಡರಿಗಳನ್ನ ಸಹಿತ 143 ರನ್ ಸಿಡಿಸಿದ್ರು. ಈ ಮೂಲಕ ಟೆಸ್ಟ್ ಕ್ರಿಕೆಟ್ನ 33ನೇ ಸೆಂಚುರಿ ಸಿಡಿಸಿದ್ರು.
ಇದನ್ನೂ ಓದಿ:ಗಾಯಕ್ವಾಡ್ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!
ಸುಖಾ ಸುಮ್ಮನೆ ಭಾರತೀಯರ ಕೆಣಕಿದ ಮೈಕಲ್ ವಾನ್
ಪಂದ್ಯ ನಡೀತಿರೋದು ಶ್ರೀಲಂಕಾ-ಇಂಗ್ಲೆಂಡ್ ನಡ್ವೆ. ಸೆಂಚುರಿ ಹೊಡೆದಿದ್ದು ಇಂಗ್ಲೆಂಡ್ನ ಜೋ ರೂಟ್. ಈ ಸೆಂಚುರಿ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗನಿಗೆ ನೆನಪಾಗಿರೋದು ಮಾತ್ರ ಇಂಡಿಯನ್ಸ್ ಹಾಗೂ ಟೀಮ್ ಇಂಡಿಯಾದ ಕಿಂಗ್ ವಿರಾಟ್ ಕೊಹ್ಲಿ. ಟೆಸ್ಟ್ನಲ್ಲಿ ರೂಟ್ ಮತ್ತು ಕೊಹ್ಲಿಯ ಬ್ಯಾಟಿಂಗ್ ರೆಕಾರ್ಡ್ಸ್ನ ಹೋಲಿಕೆ ಮಾಡಿರೋ ಈ ವಾನ್, ಮಾರ್ನಿಂಗ್ ಇಂಡಿಯಾ ಟ್ವೀಟ್ ಮಾಡಿದ್ದಾರೆ.
ಕಾಲೆಳೆಯಲು ಹೋಗಿ ತಾನೇ ಜಾರಿ ಬಿದ್ದ ವಾನ್
ಮೈಕಲ್ ವಾನ್ ಅನ್ನೋ ಈ ಮಹಾಶಯ ಹಾಕಿದ ಪೋಸ್ಟ್ ಹಿಂದಿನ ಉದ್ದೇಶ ಇಂಡಿಯನ್ ಫ್ಯಾನ್ಸ್ನ ಕಾಲೆಳೆಯೋದಾಗಿತ್ತು. ಆಗಿದ್ದು ಉಲ್ಟಾ. ಕಾಲೆಳೆಯಲು ಹೋದ ಮೈಕಲ್ ವಾನ್ ತಾವೇ ಜಾರಿ ಬಿದ್ದಿದ್ದಾರೆ. ರೊಚ್ಚಿಗೆದ್ದ ಇಂಡಿಯನ್ ಫ್ಯಾನ್ಸ್, ಕಮೆಂಟ್ ಬಾಕ್ಸ್ನಲ್ಲಿ ಸರಿಯಾಗಿ ರುಬ್ಬಿದ್ದಾರೆ.
ಎಲ್ಲಿಯ ಕೊಹ್ಲಿ, ಎಲ್ಲಿಯ ರೂಟ್, ಹೇಗೆ ಹೋಲಿಕೆ?
ಇಂಗ್ಲೆಂಡ್ ಪರ 82 ಟೆಸ್ಟ್, 86 ಏಕದಿನ ಪಂದ್ಯವನ್ನಾಡಿರೋ ಮೈಕಲ್ ವಾನ್ ತಂಡದ ಕ್ಯಾಪ್ಟನ್ ಕೂಡ ಆಗಿದ್ರು. ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 191 ಇನ್ನಿಂಗ್ಸ್ಗಳನ್ನಾಡಿರುವ ಕೊಹ್ಲಿ, 49.15ರ ಸರಾಸರಿಯಲ್ಲಿ, 8848 ರನ್ಗಳಿಸಿದ್ದಾರೆ. 29 ಸೆಂಚುರಿ, 30 ಅರ್ಧಶತಕ ಸಿಡಿಸಿದ್ದಾರೆ. 263 ಇನ್ನಿಂಗ್ಸ್ ಆಡಿರುವ ಜೋ ರೂಟ್, 50.33ರ ಸರಾಸರಿ ಹೊಂದಿದ್ದು, 12,131 ರನ್ಗಳಿಸಿದ್ದಾರೆ. 32 ಶತಕ, 64 ಅರ್ಧಶತಕ ಸಿಡಿಸಿದ್ದಾರೆ. ಮೇಲ್ನೋಟಕ್ಕೆ ನೋಡಿದ್ರೆ ರನ್, ಸರಾಸರಿ, ಸೆಂಚುರಿ, ಹಾಫ್ ಸೆಂಚುರಿ ವಿಚಾರದಲ್ಲಿ ರೂಟ್ ಮೇಲಿದ್ದಾರೆ. ಜೊತೆಗೆ 72 ಇನ್ನಿಂಗ್ಸ್ಗಳನ್ನೂ ಹೆಚ್ಚುವರಿಯಾಗಿ ಆಡಿದ್ದಾರೆ.
ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್..!
Morning India 🇮🇳 pic.twitter.com/Ax5g75yLyS
— Michael Vaughan (@MichaelVaughan) August 30, 2024
ಅಂದ್ಹಾಗೆ ರೂಟ್ ಗ್ರೇಟ್ ಬ್ಯಾಟ್ಸ್ಮನ್ ಅನ್ನುವ ಮೈಕಲ್ ವಾನ್ ಇನ್ನೊಂದು ಸತ್ಯ ಗೊತ್ತಿಲ್ಲ ಅನ್ಸುತ್ತೆ. ಇಂಗ್ಲೆಂಡ್ ಬದ್ಧವೈರಿಗಳಾದ ಆಸ್ಟ್ರೇಲಿಯಾ ವಿರುದ್ಧ ರೂಟ್ ಬ್ಯಾಟ್ ಸೈಲೆಂಟ್ ಆಗುತ್ತೆ. ಕಾಂಗರೂಗಳ ನಾಡಲ್ಲಂತೂ ಇದುವರೆಗೂ ಒಂದೂ ಶತಕವನ್ನ ಸಿಡಿಸೋಕೆ ರೂಟ್ರಿಂದ ಆಗಿಲ್ಲ. ಆದ್ರೆ, ವಿರಾಟ್ ಕೊಹ್ಲಿ 5 ಟೆಸ್ಟ್ ಶತಕಗಳನ್ನ ಕಾಂಗೂರುಗಳ ನಾಡಲ್ಲೇ ಸೆಂಚುರಿ ಸಿಡಿಸಿದ್ದಾರೆ.
ಕೊಹ್ಲಿ VS ರೂಟ್ ರನ್ಗಳಿಕೆಯನ್ನ ಹೋಲಿಕೆ ಮಾಡಲು ಹೋದ ಮೈಕಲ್ ವಾನ್ ಭಾರತೀಯರನ್ನ ಕೆಣಕಿ ಪಜೀತಿಗೆ ಸಿಲುಕಿದ್ದಾರೆ. ಇಂಡಿಯನ್ಸ್ ಫ್ಯಾನ್ಸ್ ನೀಡ್ತಿರೋ ಡಿಸೈನ್ ಡಿಸೈನ್ ಉತ್ತರಗಳಿಗೆ ಸೈಲೆಂಟ್ ಮೂಡ್ಗೆ ಜಾರಿದ್ದಾರೆ. ಒಂತರಾ ಇರಲಾರದೆ ಇರುವೆ ಬಿಟ್ಟುಕೊಳ್ಳೋ ಕೆಲಸ ಮಾಡಿದಂತಾಗಿದೆ ನೋಡಿ ಸದ್ಯದ ವಾನ್ ಪರಿಸ್ಥಿತಿ.
ಇದನ್ನೂ ಓದಿ:ಮೂವರು ಸ್ಟಾರ್ ಆಲ್ರೌಂಡರ್ ಖರೀದಿಗೆ RCB ಬಿಗ್ ಟಾರ್ಗೆಟ್; ಇವರು ಬಂದ್ರೆ ಕಪ್ ಪಕ್ಕಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ