newsfirstkannada.com

ಆರ್​ಸಿಬಿ ತಂಡದಿಂದ ಕೊಕ್​​: ಕೊನೆಗೂ ಮೌನಮುರಿದ ಮೈಕ್​ ಹೆಸನ್​​​ ಹೇಳಿದ್ದೇನು?

Share :

07-08-2023

    ಇಂಡಿಯನ್​ ಪ್ರೀಮಿಯರ್​ ಲೀಗ್​​

    ಆರ್​ಸಿಬಿಯಿಂದ ಇಬ್ಬರಿಗೆ ಕೊಕ್​​

    ಕೊನೆಗೂ ಮೌನಮುರಿದ ಹೆಸನ್​​

ಇತ್ತೀಚೆಗೆ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಆರ್​ಸಿಬಿ ಡೈರೆಕ್ಟರ್​​​​ ಮೈಕ್​ ಹೆಸನ್​​​, ಹೆಡ್​​ ಕೋಚ್​​ ಸಂಜಯ್​ ಬಂಗಾರ್​​​ಗೆ ಕೊಕ್​ ನೀಡಿದ್ರು. ಈ ಬೆನ್ನಲ್ಲೇ ವಿಶ್ವಕಪ್​​ ವಿನ್ನಿಂಗ್​​ ಕ್ಯಾಪ್ಟನ್​​ ಆ್ಯಂಡಿ ಫ್ಲವರ್​​ ಅವರನ್ನು ಆರ್​ಸಿಬಿ ತಂಡದ ಹೆಡ್​​ ಕೋಚ್​ ಆಗಿ ನೇಮಿಸಿದ್ದಾರೆ. ಈ ಬಗ್ಗೆ ಮೊದಲ ಬಾರಿಗೆ ಮೈಕ ಹೆಸನ್​​ ಮೌನಮುರಿದಿದ್ದಾರೆ.

ಈ ಸಂಬಂಧ ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಹಾಕಿರುವ ಮೈಕ್​ ಹೆಸನ್​​, ನಾವು ಕಳೆದ 4 ಸೀಸನ್​​ಗಳಲ್ಲಿ ಮೂರು ಬಾರಿ ಪ್ಲೇ ಆಫ್​​ ಪ್ರವೇಶಿಸಿದ್ರೂ ಒಮ್ಮೆಯೂ ಟ್ರೋಫಿ ಗೆಲ್ಲಲು ಆಗಲಿಲ್ಲ. ಟ್ರೋಫಿ ಗೆಲ್ಲಲೇಬೇಕು ಎಂಬುದು ಆರ್​ಸಿಬಿ ತಂಡದ ಡ್ರೀಮ್​ ಆಗಿತ್ತು. ಟ್ರೋಫಿ ಗೆಲ್ಲಿಸದಿದ್ದಕ್ಕೆ ಕ್ಷಮೆ ಕೇಳುತ್ತಾ ನನಗೆ ಆರ್​ಸಿಬಿ ತೊರೆಯಲು ಬಹಳ ಬೇಸರ ಆಗುತ್ತಿದೆ. ಆರ್​ಸಿಬಿ ತಂಡದೊಂದಿಗೆ ನನಗೆ ಬಹಳ ನೆನಪುಗಳಿವೆ. ನನಗೆ ತಂಡದ ಡೈರೆಕ್ಟರ್​​​ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಆರ್​ಸಿಬಿ ಮ್ಯಾನೇಜ್ಮೆಂಟ್​​​ಗೆ ಧನ್ಯವಾದಗಳು. ಕೊನೆಯದಾಗಿ ನಾನು ಆರ್​ಸಿಬಿ ಅಭಿಮಾನಿಗಳನ್ನು ಮರೆಯಲು ಸಾಧ್ಯವೇ ಇಲ್ಲ. ನೀವು ನೀಡಿದ ಪ್ರೀತಿಗೆ ನಾನು ಸದಾ ಚಿರಋಣಿ. ಆರ್​ಸಿಬಿ ನನ್ನ ತವರಾಗಿತ್ತು ಎಂದು ಎಮೋಷನಲ್​ ಆಗಿ ಬರೆದುಕೊಂಡಿದ್ದಾರೆ.

ಕಳೆದ 15 ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​​ಗಳಿಂದ ಆಡುತ್ತಿರೋ ರಾಯಲ್​​​​ ಚಾಲೆಂಜರ್ಸ್​ ಬೆಂಗಳೂರು ತಂಡ ಒಮ್ಮೆಯೂ ಕಪ್​ ಗೆದ್ದಿಲ್ಲ. ಈ ಬಾರಿಯಾದ್ರೂ ಕಪ್​ ಗೆಲ್ಲುತ್ತಾ ಎಂದು ಕಾದು ನೋಡಬೇಕು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಆರ್​ಸಿಬಿ ತಂಡದಿಂದ ಕೊಕ್​​: ಕೊನೆಗೂ ಮೌನಮುರಿದ ಮೈಕ್​ ಹೆಸನ್​​​ ಹೇಳಿದ್ದೇನು?

https://newsfirstlive.com/wp-content/uploads/2023/08/Kohli_Hesson-1.jpg

Load More