newsfirstkannada.com

ಈತನಿಗೆ ಕನಸುಗಳ ಬಗ್ಗೆ ಕೌತುಕ.. ತನ್ನ ತಲೆಗೆ ತಾನೇ ಡ್ರಿಲ್ ಮಾಡಿಕೊಂಡು ಚಿಪ್ ಅಳವಡಿಸಿಕೊಂಡ ಭಲೇ ಕಿಲಾಡಿ..! ಮುಂದೇನಾಯಿತು ಗೊತ್ತಾ..?

Share :

22-07-2023

    ಈ ಜಗತ್ತಿನಲ್ಲಿ ಎಂತೆಂಥ ಜನ ಇರ್ತಾರೋ..!

    Youtube ನೋಡ್ದ.. ತಲೆಗೆ ಹೋಲ್ ಹೋಡ್ದ..!

    ಚಿಪ್​​ನಲ್ಲಿ ಕನಸುಗಳು ರೆಕಾರ್ಡ್​ ಆದ್ವಾ..?

ಮನುಷ್ಯ ತಾನು ಹುಟ್ಟುವಾಗಲೇ ಕೆಲವೊಂದನ್ನು ಸ್ವಯಂಕೃತವಾಗಿ ಪಡೆದುಕೊಂಡಿರುತ್ತಾನೆ. ಅವುಗಳನ್ನು ಬದಲಾವಣೆ ಮಾಡೋದು ಅಸಾಧ್ಯದ ಮಾತು. ಯಾಕೆಂದರೆ ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡರೆ ಜೀವನವೇ ಕೊನೆ ಆಗುತ್ತದೆ.  ಕಂಪ್ಯೂಟರ್​ ನಮಗಿಂತ ಹೆಚ್ಚು ವೇಗವಾಗಿ ಕೆಲಸ ಮಾಡಿದರೂ ನಮ್ಮಂತೆ ಕೆಲ ಸಂಜ್ಞೆ, ಸ್ಪರ್ಶ, ಆಲೋಚನೆ ಹೊಂದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತನಗೆ ಕನಸುಗಳು ಬೀಳುವಾಗ ಮೆದುಳಿನಲ್ಲಿ ಏನಾಗುತ್ತದೆ. ಇದನ್ನು ತಿಳಿದುಕೊಂಡು ಕನಸುಗಳನ್ನು ನಿಯಂತ್ರಿಸಬೇಕು ಎಂದು ತನ್ನ ತಲೆಗೆ ತಾನೇ ಡ್ರಿಲ್ ಮಾಡಿ ಚಿಪ್​ ಅಳವಡಿಸಿಕೊಳ್ಳಲು ಹೋಗಿ ಆಸ್ಪತ್ರೆ ಸೇರಿದ್ದಾನೆ.

ಕನಸು ನಿಯಂತ್ರಿಸೋ ಹುಚ್ಚು

ಈ ಘಟನೆ ನಡೆದಿರುವುದು ರಷ್ಯಾದಲ್ಲಿ. ಎರಡು ವರ್ಷಗಳಿಂದ ಉಕ್ರೇನ್​ ಜೊತೆ ರಷ್ಯಾ ಯುದ್ಧ ಮಾಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಈ ಯೋಚನೆ ಬಂದಿರುವುದೇ ಆಶ್ಚರ್ಯಕರ. 40 ವಯಸ್ಸಿನ ಆಸುಪಾಸಿನಲ್ಲಿರುವ ಮಿಖಾಯಿಲ್ ರಾಡುಗ್​, ತಲೆಗೆ ಡ್ರಿಲ್​ ಮಾಡಿಕೊಂಡ ವ್ಯಕ್ತಿ. ನಾನು ಹೇಗಾದ್ರೂ ಮಾಡಿ ಕನಸುಗಳನ್ನು ನಿಯಂತ್ರಿಸಬೇಕು. ಹೇಗಾದರು ಮಾಡಿ ಕಂಡುಕೊಳ್ಳಬೇಕೆಂದು ಚಿಪ್​ ಅಳವಡಿಸಿಕೊಳ್ಳುವುದಕ್ಕೆ ಒಂದು ವರ್ಷದ ಹಿಂದೆಯೇ ನಿರ್ಧಾರ ಮಾಡಿದ್ದ.

ತಲೆಯ ಕಾರ್ಟೆಕ್ಸ್​ ಭಾಗದಲ್ಲಿ ಚಿಪ್ ಅಳವಡಿಕೆ

ವೈದ್ಯರ ಬಳಿ ಹೋಗಿ ಮಾಹಿತಿ ನೀಡಿ ಚಿಪ್​ ಅಳವಡಿಸಿಕೊಂಡರೆ ದೇಶದ ಕಾನೂನು ಪ್ರಕಾರ ಅವರಿಗೆ ಸಮಸ್ಯೆ ಆಗಬಹುದು. ಹೀಗಾಗಿ ನನಗೆ ನಾನೇ ಆಫರೇಷನ್ ಮಾಡಿಕೊಂಡರೇ ಹೇಗೆ ಎಂಬ ಆಲೋಚನೆ ಆತನಿಗೆ ಬಂದಿದೆ. ಈ ಆಲೋಚನೆಯನ್ನು ಮುಂದುವರೆಸಿದ ಆತ, ಸರ್ಜರಿಗಳನ್ನು, ಆಫರೇಷನ್​ಗಳನ್ನು ಹೇಗೆ ಮಾಡುವುದು ಎಂದು ಯೂ-ಟ್ಯೂಬ್​ನಲ್ಲಿ ಕೆಲವು ವಿಡಿಯೋಗಳನ್ನು ನೋಡಿ ತಿಳಿದುಕೊಂಡಿದ್ದಾನೆ. ಅದರಂತೆ ಮನೆಯಲ್ಲಿಯೇ ಡ್ರಿಲ್ಲಿಂಗ್​ ಮೆಷಿನ್​ನಿಂದ ತನ್ನ ತಲೆಗೆ ತಾನೇ ಡ್ರಿಲ್ ಮಾಡಿಕೊಂಡು ತಲೆಯ ಕಾರ್ಟೆಕ್ಸ್​ ಭಾಗದಲ್ಲಿ ಎಲೆಕ್ಟ್ರೋಡ್​ ಚಿಪ್ (Electrode) ಅಳವಡಿಸಿಕೊಂಡಿದ್ದಾನೆ.

ಇದರಿಂದ ವಿಪರೀತ ರಕ್ತಸ್ರಾವವಾಗಿದೆ. ಡ್ರಿಲ್ಲಿಂಗ್​ ವೇಳೆ 1 ಲೀಟರ್​ಗೂ ಅಧಿಕ ರಕ್ತಸ್ರಾವವಾಗಿತ್ತು. ಈ ವೇಳೆ ಸಾವಿನ ಸಮೀಪ ಹೋಗಿ ಬದುಕುಳಿದಿದ್ದು, ಹೇಗೋ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನು ಡ್ರಿಲ್ ಮಾಡಿಕೊಳ್ಳುವುದನ್ನೂ ವಿಡಿಯೋ ಮಾಡಿಕೊಂಡಿದ್ದಾನೆ. ಈತ ಡ್ರಿಲ್ಲಿಂಗ್ ಮಾಡಿಕೊಂಡ ವಿಡಿಯೋ ಭಯಾನಕವಾಗಿದೆ. ಇನ್ನು ವಿಡಿಯೋವನ್ನು ಎಲ್ಲಿಯೂ ಶೇರ್ ಮಾಡಿಲ್ಲ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಿಖಾಯಿಲ್ ರಾಡುಗಾ ಚೇತರಿಸಿಕೊಂಡಿದ್ದಾನೆ.

ಈ ಬಗ್ಗೆ ಭರವಸೆ ಹೊಂದಿರುವ ಮಿಖಾಯಿಲ್

ತನ್ನ ಪ್ರಯೋಗದ ಬಗ್ಗೆ ಟ್ವೀಟ್ ಮಾಡಿರುವ ಮಿಖಾಯಿಲ್, ನನಗೆ ಕನಸು ಬೀಳುವಾಗ ಮೆದುಳಿನಲ್ಲಿ ಏನಾಗುತ್ತದೆಂದು ತಿಳಿದುಕೊಳ್ಳಬೇಕಿತ್ತು. ಯಾರಿಗೆ ಕನಸು ಬೀಳುತ್ತವೋ ಅವರೇ ಅವುಗಳನ್ನು ನಿಯಂತ್ರಿಸಬೇಕು. ಅಂತಹವುದನ್ನು ಶೋಧನೆ ಮಾಡಲು ಹೋಗಿದ್ದೆ. ಇದಕ್ಕಾಗಿ ಡ್ರಿಲ್ಲಿಂಗ್ ಮಷಿನ್ ತೆಗೆದುಕೊಂಡು ನನ್ನ ತಲೆಗೆ ರಂಧ್ರ ಮಾಡಿ ಚಿಪ್ ಅಳವಡಿಸಿಕೊಂಡೆ. ಕನಸು ನಿಯಂತ್ರಿಸುವ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈತನಿಗೆ ಕನಸುಗಳ ಬಗ್ಗೆ ಕೌತುಕ.. ತನ್ನ ತಲೆಗೆ ತಾನೇ ಡ್ರಿಲ್ ಮಾಡಿಕೊಂಡು ಚಿಪ್ ಅಳವಡಿಸಿಕೊಂಡ ಭಲೇ ಕಿಲಾಡಿ..! ಮುಂದೇನಾಯಿತು ಗೊತ್ತಾ..?

https://newsfirstlive.com/wp-content/uploads/2023/07/Mikhail_Raduga.jpg

Load More