ಹಾಲಿನ ದರ ಏರಿಕೆ ಸಂಬಂಧ ಇಂದು ಮಹತ್ವದ ಸಭೆ
ಹಾಲು ಒಕ್ಕೂಟಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ
ಸಭೆಗೂ ಮುನ್ನವೇ ದರ ಏರಿಕೆ ಬಗ್ಗೆ ಮಾತಾಡಿದ ಸಚಿವ
ಬೆಂಗಳೂರು: ಹಾಲಿನ ದರ ಏರಿಕೆ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಜುಲೈ 5ರಂದು ಕೆಎಂಎಫ್ ಬೋರ್ಡ್ ಮೀಟಿಂಗ್ನಲ್ಲಿ ಹಾಲಿನ ದರ ಏರಿಕೆಗೆ ಒಮ್ಮತದ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಇವತ್ತು ಸಂಜೆ ನಡೆಯುವ ಸಭೆ ಬಳಿಕ ಹಾಲಿನ ದರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಇನ್ನು ಪ್ರತಿ ಲೀಟರ್ಗೆ 5ರೂ ಹೆಚ್ಚಳ ಮಾಡುವಂತೆ ಒಕ್ಕೂಟಗಳಿಂದ ಕೆಎಂಎಫ್ಗೆ ಮನವಿ ಮಾಡಲಾಗಿದೆ. ಹೀಗಾಗಿ ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರ ಏರಿಕೆಗೆ ಕೆಎಂಎಫ್ ಬೋರ್ಡ್ ಸಮ್ಮತಿ ನೀಡಿತ್ತು. ಈ ಬಗ್ಗೆ ಸಿಎಂ ಜೊತೆ ಸಭೆ ನಡೆಸಲು ಕೆಎಂಎಫ್ ಸಮಯ ಕೇಳಿತ್ತು. ಹಾಲಿನ ದರ ಏರಿಕೆ ಸಂಬಂಧ ಇಂದು ಕೆಎಂಎಫ್ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಹಾಲು ಒಕ್ಕೂಟವು 5 ರೂಪಾಯಿ ಹೆಚ್ಚಳಕ್ಕೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ನಾವು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಅವರ ಡಿಮ್ಯಾಂಡ್ ಮಾಡಿದ್ದು 5 ರೂಪಾಯಿ ಹೆಚ್ಚಳಕ್ಕೆ. ನಾವು ಉತ್ಪಾದಕರ ಹಿತವನ್ನು ಕಾಪಾಡಬೇಕಾಗಿದೆ. ಬೇರೆಬೇರೆ ರಾಜ್ಯದ ಉದಾಹರಣೆ ತೆಗೆದುಕೊಂಡರೆ ನಮ್ಮಲ್ಲಿಯೇ ಕಡಿಮೆ ಇರೋದು. ಹೀಗಾಗಿ ಸರ್ಕಾರ ಇನ್ನೂ ಡಿಸೈಡ್ ಮಾಡಿಲ್ಲ. ಇಂದು ಸಂಜೆ ಸಭೆ ನಡೆಸಿ ಹಾಲಿನ ದರವನ್ನು ಹೆಚ್ಚಳ ಮಾಡಬೇಕಾ? ಬೇಡವಾ ಎಂಬುವುದು ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ