ಅಮೆರಿಕ ಫಸ್ಟ್ ಕಪಲ್ನಿಂದ State Dinner ಆಯೋಜನೆ
ಡಿನ್ನರ್ ಪಾರ್ಟಿ ಮುಗಿದ ಬಳಿಕ ಭಾರತೀಯ ಸಂಗೀತ ಕಾರ್ಯಕ್ರಮ
ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು (ಜೂನ್ 22) ಶ್ವೇತಭವನದಲ್ಲಿ ಆಯೋಜಿಸಲಾದ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಶೇಷ ಔತಣಕೂಟವನ್ನು US ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ (US First Lady) ಜಿಲ್ ಬಿಡೆನ್ ಆಯೋಜಿಸಿದ್ದಾರೆ.
ಮೋದಿಗೆ ಬೈಡನ್ ಆಯೋಜಿಸಿರುವ ಈ State Dinner ಭಾರೀ ಮಹತ್ವ ಪಡೆದುಕೊಂಡಿದೆ. ಜೊತೆಗೆ ಔತಣಕೂಟದಲ್ಲಿ ಏನೆಲ್ಲ ಇರಲಿದೆ ಎಂಬ ಕುತೂಹಲಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಶ್ವೇತಭವನವು ವಿಶೇಷ ಪದಾರ್ಥಗಳ ಮೆನುವನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದೆ. ಭಾರತದ ಪ್ರಧಾನಿಗಾಗಿ ವಿಶೇಷವಾಗಿ ಏನೆಲ್ಲ ಸೇರಿಸಲಾಗಿದೆ ಅನ್ನೋದನ್ನು ತಿಳಿಸಿದೆ. ಮಾತ್ರವಲ್ಲ ಅಮೆರಿಕದ ಫಸ್ಟ್ ಲೇಡಿ ಜಿಲ್ ಬಿಡೆನ್ ಖುದ್ದು ಔತಣಕೂಟದ ವಿಶೇಷತೆಯೊಂದಿಗೆ ವಿವಿಧ ಖಾದ್ಯಗಳ ಬಗ್ಗೆ ತಿಳಿಸಿದ್ದಾರೆ. ಈ ಭೋಜನಕ್ಕೆ ಒಂದು ಥೀಮ್ ಸಹ ಇರಿಸಲಾಗಿದೆ. ಕೂತು ಊಟ ಮಾಡುವ ಟೇಬಲ್ ಮೇಲೆ ಕೇಸರಿ, ಹಸಿರು ಹೂವುಗಳಿಂದ ಅಲಂಕರಿಸಲಾಗಿದೆ. ಇದು ಭಾರತದ ರಾಷ್ಟ್ರಧ್ವಜದ ಬಣ್ಣವನ್ನು ಹೋಲುತ್ತಿದೆ.
ಮೆನುವಿನಲ್ಲಿ ಏನು ಸೇರಿಸಲಾಗಿದೆ?
ಫಸ್ಟ್ ಲೇಡಿ ಜಿಲ್ ಬಿಡೆನ್, ಮೊದಲು ಬಾಣಸಿಗ ನೀನಾ ಕರ್ಟಿಸ್ ಅವರನ್ನು ಪರಿಚಯಿಸಿದರು. ಪ್ರಧಾನಿ ಮೋದಿ ಸಸ್ಯಾಹಾರಿ. ಹಾಗಾಗಿ ಅವರ ಪ್ರಕಾರವೇ ಆಹಾರದ ಮೆನು ಇರಿಸಲಾಗಿದೆ ಎಂದು ಜಿಲ್ ಬಿಡೆನ್ ತಿಳಿಸಿದ್ದಾರೆ.
ಮೆನುವಿನಲ್ಲಿ ಲೆಮನ್ ಡಿಲ್ ಮೊಸರು ಸಾಸ್ (lemon-dill yogurt sauce), ಕ್ರಿಸ್ಪ್ಡ್ ಮಿಲೆಟ್ ಕೇಕ್ ( crisped millet cakes), ಸಮ್ಮರ್ ಸ್ಕ್ವ್ಯಾಷ್‌ಗಳು (summer squashes), ಮ್ಯಾರಿನೇಡ್ ಮಿಲೆಟ್ (summer squashes), ಗ್ರಿಲ್ಡ್ ಕಾರ್ನ್ ಕರ್ನಲ್ ಸಲಾಡ್ (summer squashes), ಕಂಪ್ರೆಸ್ಡ್ ಕಲ್ಲಂಗಡಿ (compressed watermelon), ಟ್ಯಾಂಗಿ ಆವಕಾಡೊ ಸಾಸ್ ( tangy avocado sauce), ಸ್ಟಫ್ಡ್ ಪೋರ್ಟೊಬೆಲ್ಲೊ ಮಶ್ರೂಮ್‌ಗಳು (stuffed portobello mushrooms), ಕೆನೆ ಕೇಸರಿ ತುಂಬಿದ ರಿಸೊಟ್ಟೊ (creamy saffron-infused risotto) ಮತ್ತು infused risotto ಇರಲಿದೆ ಎಂದು ತಿಳಿಸಿದ್ದಾರೆ.
ಸಂಗೀತ ಕಾರ್ಯಕ್ರಮ
ಪ್ರಧಾನಿ ಮೋದಿಯವರ ಭೋಜನದ ನಂತರ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಜೋಶುವಾ ಬೆಲ್ ಅವರಿಂದ ಕಾರ್ಯಕ್ರಮ ನಡೆಯಲಿದೆ. ನಂತರ ಭಾರತದಿಂದ ಪ್ರೇರಿತವಾದ ಸಂಗೀತವನ್ನು ಸಹ ನುಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ