newsfirstkannada.com

ಪ್ರತಿಮಾ ಹತ್ಯೆ ಪ್ರಕರಣದ ಆರೋಪಿ ಹಿಸ್ಟರಿ ಭಯಾನಕ.. 2017ರಲ್ಲಿಯೇ ಅರೆಸ್ಟ್ ಆಗಿದ್ದ ರಾಕ್ಷಸ..!

Share :

07-11-2023

    ರಾಜ್ಯವನ್ನೇ ಬೆಚ್ಚಿಬೀಳಿಸಿದ ಅಧಿಕಾರಿ ಪ್ರತಿಮಾ ಕೊಲೆ ಕೇಸ್​​

    2017ರಲ್ಲಿ ಅರೆಸ್ಟ್ ಮಾಡಿದ್ದ ಕೋಣನಕುಂಟೆ ಪೊಲೀಸರು!

    ಹತ್ಯೆಗೈದು ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಆರೋಪಿ

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಯಾರೂ ಇಲ್ಲದ ಹೊತ್ತಲ್ಲಿ ಒಂಟಿ ಮಹಿಳೆ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಕೊಲೆಯ ಬಳಿಕ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಇದೀಗ ಪ್ರತಿಮಾರನ್ನು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದೀಗ ಹತ್ಯೆಯ ಹಿಂದಿನ ಅಸಲಿ ಕಾರಣಗಳು ಬಯಲಾಗುತ್ತಿವೆ.

ಗಂಡೆದೆ ಸುಂದರಿ. ದಿಟ್ಟ ಗುರಿ. ಕೊಟ್ಟ ಕೆಲಸ ತಪ್ಪಲ್ಲ. ಆಗೋಲ್ಲ ಅನ್ನೋ ಮಾತೇ ಇಲ್ಲ. ನೇರ ನುಡಿ. ನೇರ ನಡೆಯ ಅಧಿಕಾರಿ. ಒಂದು ಮಗುವಿನ ತಾಯಿ. ಪ್ರತಿಮಾ ಸತ್ಯನಾರಾಯಣ್​​ ತಾನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಹೀಗೆ ಗುರುತಿಸಿಕೊಂಡಿದ್ದರು. ಪ್ರತಿಮಾರನ್ನ ಹತ್ಯೆ ಮಾಡಿ ಪೊಲೀಸರ ಕಣ್ತಪ್ಪಿಕೊಂಡು ಮಾದೇಶ್ವರನ ಆರಾಧನೆಗೆ ಹೋಗಿದ್ದ ಕಿರಣ್​ ಎಂಬಾತನನ್ನ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಪ್ರತಿಮಾ ಬಳಿ ಕೆಲಸ ಮಾಡ್ತಿದ್ದ ಮಾಜಿ ಕಾರು ಚಾಲಕ. ಇದೀಗ ಈತನ ಹಿನ್ನೆಲೆ ಒಂದೊಂದಾಗಿ ಹೊರಬೀಳುತ್ತಿದೆ.

ಈ ಹಿಂದೆ ಡಕಾಯಿತಿ ಕೇಸ್‌ನಲ್ಲಿ ಜೈಲು ಸೇರಿದ್ದ ಕಿರಣ್

ಪ್ರತಿಮಾ ಕಾರು ಚಾಲಕನಾಗಿದ್ದ ಕಿರಣ್‌ನ 10 ದಿನದ ಹಿಂದೆ ಕೆಲಸದಿಂದ ವಜಾ ಮಾಡಲಾಗಿತ್ತು. ರೇಡ್‌ಗೆ ಹೋಗುವ ವಿಚಾರವನ್ನ ಲೀಕ್ ಮಾಡುತ್ತಿದ್ದ ಅನ್ನೋ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಿದ್ರು. ಇದರಿಂದ ಕುಪಿತನಾಗಿದ್ದ ಕಿರಣ್ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಅವರ ಮುಂದೆ ಗೊಗರೆದಿದ್ದ. ಇದಕ್ಕೆ ಪ್ರತಿಮಾ ಸೊಪ್ಪು ಹಾಕದಿದ್ದಕ್ಕೆ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಇದೀಗ ಈತನ ಕರಾಳ ಇತಿಹಾಸ ಒಂದೊಂದಾಗಿ ತೆರೆದುಕೊಳ್ಳುತ್ತಿದೆ.

ಈ ಹಿಂದೆ ಆರೋಪಿ ಕಿರಣ್ ಡಕಾಯಿತಿ ಕೇಸ್‌ನಲ್ಲಿ ಭಾಗಿಯಾಗಿದ್ದ. ಮಾರಕಾಸ್ತ್ರ ಹಿಡಿದು ದರೋಡೆಗೆ ಸ್ಕೆಚ್ ಹಾಕಿದ್ದ ಎಂಬ ಅಂಶ ಬಯಲಾಗಿದೆ. ಜೊತೆಗೆ ಮನೆಗಳ್ಳತನಕ್ಕೂ ಕಿರಣ್ ಅಂಡ್ ಟೀಂ ಪ್ಲಾನ್ ಮಾಡಿತ್ತಂತೆ. ಶ್ರೀಮಂತರ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ. ಕದ್ದ ದುಡ್ಡಲ್ಲಿ ಲೈಫ್ ಸೆಟಲ್ ಆಗಲು ಕಿರಣ್ ಪ್ಲಾನ್ ಮಾಡಿದ್ದನಂತೆ. ಈ ಆರೋಪದಲ್ಲಿ 2017ರಲ್ಲಿ ಕಿರಣ್‌ನನ್ನ ಕೋಣನಕುಂಟೆ ಪೊಲೀಸರು ಅರೆಸ್ಟ್‌ ಮಾಡಿದ್ದರು. ಆದ್ರೀಗ ಈ ಕೇಸ್ ಮುಚ್ಚಿಟ್ಟು ಪ್ರತಿಮಾ ಬಳಿ ಕಿರಣ್ ಕೆಲಸಕ್ಕೆ ಸೇರಿದ್ದ ಅನ್ನೋದು ತಿಳಿದುಬಂದಿದೆ. ಸದ್ಯ ಪ್ರತಿಮಾ ಕೊಲೆ ಕೇಸ್​ನಲ್ಲಿ ಹಂತಕ ಕಿರಣ್ ಮತ್ತೊಮ್ಮೆ ಅರೆಸ್ಟ್ ಆಗಿದ್ದಾನೆ.

ಪ್ರತಿಮಾ ಹತ್ಯೆಗೈದು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಹಂತಕ

ಕಳೆದ ಶನಿವಾರ ರಾತ್ರಿ ಪ್ರತಿಮಾರನ್ನ ಕೊಲೆ ಮಾಡಿದ್ದ ಹಂತಕ ಕಿರಣ್‌, ಬಳಿಕ ಆಕೆಯ ಪರ್ಸ್‌ನಲ್ಲಿದ್ದ ಹದಿನೈದು ಸಾವಿರ ಹಣವನ್ನು ಎಗರಿಸಿದ್ದ. ಆ ಹಣದೊಂದಿಗೆ ಇಬ್ಬರು ಸ್ನೇಹಿತರನ್ನ ಮಲೆ ಮಹದೇಶ್ವರ ಬೆಟ್ಟಕ್ಕೆ ಕರೆದೊಯ್ದಿದ್ದ. ಕೊಲೆ ಮಾಡಿರುವ ಬಗ್ಗೆ ಸ್ನೇಹಿತರಿಗೆ ಯಾವುದೇ ರೀತಿಯ ಮಾಹಿತಿಯನ್ನ ಕಿರಣ್ ನೀಡಿರಲಿಲ್ವಂತೆ. ಹೀಗೆ ಪ್ರತಿಮಾ ಜೊತೆ ಸಂಪರ್ಕದಲ್ಲಿದ್ದವರ ಸಿಡಿಆರ್‌ ಕಲೆಹಾಕಿದ್ದ ಪೊಲೀಸರಿಗೆ ಈತನ ಜಾಡು ಸಿಕ್ಕಿತ್ತು.

ಮೊದಲಿಗೆ ಪ್ರತಿಮಾ ಪತಿ, ಕುಟುಂಬಸ್ಥರು, ಸ್ನೇಹಿತರು, ಡ್ರೈವರ್‌ಗಳ ಮೊಬೈಲ್ ಸಿಡಿಆರ್‌ನ ತೆಗೆದಿದ್ದರು. ಈ ವೇಳೆ ಎಲ್ಲಾರ ಮೊಬೈಲ್​ಗಳು ಆನ್ ಇದ್ದು. ಕಿರಣ್‌ ಮೊಬೈಲ್ ಮಾತ್ರ ಸ್ವಿಚ್ ಆಫ್ ಆಗಿತ್ತು. ಈ ಶಂಕೆಯ ಮೇಲೆ ಕಿರಣ್‌ನ ಪೊಲೀಸರು ಬಲೆಗೆ ಬೀಳಿಸಿದ್ದಾರೆ. ಒಟ್ಟಾರೆ, ತನ್ನ ಕೆಲಸ ಆಯ್ತು ಅಂತ ಇದ್ದ ದಿಟ್ಟ ಅಧಿಕಾರಿಯನ್ನ ಕೇವಲ ಕೆಲಸದಿಂದ ತೆಗೆದು ಹಾಕಿದ್ರು ಅನ್ನೋ ಕಾರಣಕ್ಕೆ ಕೊಲೆ ಮಾಡಿದ್ದು ಮಾತ್ರ ಶಿಕ್ಷಾರ್ಹ ಅಪರಾಧವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಿಮಾ ಹತ್ಯೆ ಪ್ರಕರಣದ ಆರೋಪಿ ಹಿಸ್ಟರಿ ಭಯಾನಕ.. 2017ರಲ್ಲಿಯೇ ಅರೆಸ್ಟ್ ಆಗಿದ್ದ ರಾಕ್ಷಸ..!

https://newsfirstlive.com/wp-content/uploads/2023/11/KiraN-1.jpg

Load More