newsfirstkannada.com

ಗಣಿಗಾರಿಕೆ ದಂಧೆಕೋರರ ಅಟ್ಟಹಾಸ.. ರೈತನ ಮೇಲೆ ಲಾರಿ ಹತ್ತಿಸಿ ಕೊಲೆ

Share :

20-06-2023

    ಕಲಬುರಗಿಯಂತೆಯೇ ನಡೆಯಿತು ಮತ್ತೊಂದು ಘಟನೆ

    ರೈತನ ಮೇಲೆ ಗಣಿಗಾರಿಕೆಯ ಲಾರಿ ಹತ್ತಿಸಿ ಕೊಲೆಗೆ ಯತ್ನ

    ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ರೈತ ಸಾವು, ಕುಟುಂಬಸ್ಥರ ಆಕ್ರಂದನ

ಚಿಕ್ಕಬಳ್ಳಾಪುರ: ಗಣಿಗಾರಿಕೆ ದಂಧೆಕೋರರ ಅಟ್ಟಹಾಸ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪೊಲೀಸ್​ ಹೆಡ್​ ಕಾನ್ಸ್​​ಟೇಬಲ್ ಮೇಲೆ ಟ್ರ್ಯಾಕ್ಟರ್​ ಹತ್ತಿಸಿ ಕೊಲೆ ಮಾಡಿದ್ದರು. ಆದರಂತೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ರೈತನ ಮೇಲೆ ಗಣಿಗಾರಿಕೆ ಲಾರಿ ಹತ್ತಿಸಿದ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಮ್ಮಲಾಪುರ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಆದರೆ ಈ ಪ್ರಕರಣದಲ್ಲಿ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ರೈತನ ಹತ್ಯೆಗೆ ಯತ್ನ

ರೈತ ತನ್ನ ಜಮೀನಿನಲ್ಲಿ ಗಣಿಗಾರಿಕೆ ಲಾರಿ ಹೋಗಬಾರದೆಂದು ತಡೆದಿದ್ದನು. ಆದರೆ ಆತ ಅಡ್ಡಿಪಡಿಸಿದ್ದಕ್ಕೆ ಲಾರಿ ಹತ್ತಿಸಿ ಹತ್ಯೆಗೆ ಯತ್ನಿಸಲಾಗಿದೆ. ಆದರೆ ಈ ಘಟನೆಯಿಂದ ಅಡ್ಡಗಲ್ಲು ಗ್ರಾಮದ ಎಬಿ ರಾಘವೇಂದ್ರ ಎಂಬ ರೈತ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದ ಸಾವನ್ನಪ್ಪಿದ್ದಾರೆ.

ಕೊನೆಯುಸಿರೆಳೆದ ರೈತ

ಜೂನ್ 17 ರಂದು ಸಂಜೆ ವೇಳೆಗೆ ಈ ಘಟನೆ ನಡೆದಿದೆ. ಘಟನೆಯಿಂದಾಗಿ ತೀವ್ರ ಗಾಯಗೊಂಡಿದ್ದರು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣಿಗಾರಿಕೆ ದಂಧೆಕೋರರ ಅಟ್ಟಹಾಸ.. ರೈತನ ಮೇಲೆ ಲಾರಿ ಹತ್ತಿಸಿ ಕೊಲೆ

https://newsfirstlive.com/wp-content/uploads/2023/06/Raghavendra.jpg

Load More