newsfirstkannada.com

10 ರಿಂದ15 ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ -ಚಲುವರಾಯಸ್ವಾಮಿ ಸ್ಫೋಟಕ ಹೇಳಿಕೆ

Share :

18-08-2023

    ‘ಬಿಜೆಪಿಯಲ್ಲಿ ಬೋನಿನಲ್ಲಿ ಹಾಕಿದಂತೆ ಇರುತ್ತದೆ’

    ‘ಅವರೆಲ್ಲ ಕಾಂಗ್ರೆಸ್ ಗೆ ಬರ್ತಾರೆ ಅಂದ್ರೆ ಸ್ವಾಗತ’

    ‘ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ’

ಮೈಸೂರು: ಸುಮಾರು 10 ರಿಂದ15 ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ. ಈ ಬಗ್ಗೆ ಎಲ್ಲರ ಜೊತೆಗೂ ಮಾತುಕತೆ ನಡೆಯುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಚಲುವರಾಯಸ್ವಾಮಿ.. ಕೆಲವೇ ದಿನಗಳಲ್ಲಿ ಎಲ್ಲವೂ ಕೂಡ ಅಂತಿಮವಾಗಲಿದೆ. ಬಿಜೆಪಿ, ಜೆಡಿಎಸ್​ನಿಂದ ನಮ್ಮ ಪಕ್ಷಕ್ಕೆ ಬರುವುದು ಖಚಿತ. ಯಾರು ಬರ್ತಾರೆಂದು ಈಗ ಹೆಸರು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ವಿಚಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ.. ಕಾಲ ಬದಲಾವಣೆ ಆದಂತೆ ನಿರ್ಧಾರ ಬದಲಾಗುತ್ತೆ. ಅಂದು ಸಿದ್ದರಾಮಯ್ಯ ಬಾಂಬೆ ಬಾಯ್ಸ್ ಬೇಡ ಅಂದಿದ್ದರು. ಅವತ್ತಿನ ಸಂದರ್ಭಕ್ಕೆ ಸೇರಿಸಿಕೊಳ್ಳೋದಿಲ್ಲ ಅಂದಿದ್ರು. ಆದರೆ ಇವತ್ತಿನ ಕಾಲಕ್ಕೆ ನಿರ್ಧಾರ ಬದಲಾಗಿದೆ. ತಪ್ಪು ತಿಳುವಳಿಕೆಯಿಂದ ಬಿಜೆಪಿಗೆ ಹೋಗಿದ್ದರು. ಆದರೆ ಕಾಂಗ್ರೆಸ್ ಪಕ್ಷವೇ ಸರಿ ಅಂತ ಅನ್ನಿಸಿದೆ. ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ಬಿಜೆಪಿಯಲ್ಲಿ ಬೋನಿನಲ್ಲಿ ಹಾಕಿದಂತೆ ಇರುತ್ತದೆ. ಅವರೆಲ್ಲ ಕಾಂಗ್ರೆಸ್ ಗೆ ಬರ್ತಾರೆ ಅಂದ್ರೆ ಸ್ವಾಗತ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ರಿಂದ15 ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ -ಚಲುವರಾಯಸ್ವಾಮಿ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2023/08/CHALUVARAYSWAMY.jpg

Load More