ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ ಮಂಡ್ಯದ ಬಿರುಗಾಳಿ
ಪತ್ರವ್ಯೂಹದಲ್ಲಿ ಸಿಲುಕಿದ ಸಚಿವ ಚಲುವರಾಯಸ್ವಾಮಿ
‘ಇದು ಫೇಕ್ ಲೆಟರ್’ ತನಿಖೆಗೆ ಕೃಷಿ ಸಚಿವರ ಒತ್ತಾಯ
ಬೆಂಗಳೂರು: ಸಚಿವ ಚಲುವರಾಯಸ್ವಾಮಿ ಪತ್ರವ್ಯೂಹದಲ್ಲಿ ಸಿಲುಕಿದ್ದಾರೆ. ಮಂಡ್ಯದಲ್ಲಿ ಎದ್ದ ಈ ಬಿರುಗಾಳಿ ಸಿದ್ದು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಇದು ಫೇಕ್ ಲೆಟರ್ ಅಂತ ಕೃಷಿ ಸಚಿವರ ಸಹಜ ಪ್ರತಿಕ್ರಿಯೆವಾದ್ರೆ, ಚಲುವರಾಯಸ್ವಾಮಿ ಪರ ಇಡೀ ಸಿದ್ದು ಸರ್ಕಾರವೇ ನಿಂತಿದೆ. ಪರೋಕ್ಷವಾಗಿ ನಕಲಿ ಪತ್ರ ಅಂತ ಸರ್ಟಿಫಿಕೇಟ್ ನೀಡಿದ್ದು, ತನಿಖೆಯ ಅಗತ್ಯತೆ, ಸೂಕ್ಷ್ಮತೆಯ ಅಂಶವನ್ನೆ ಗೌಣವಾಗಿಸಿದೆ.
ಮಂಡ್ಯ ಅಂದ್ರೆ ಸಕ್ಕರೆ ಸಿಹಿ. ಕಬ್ಬಿನ ರೈತರ ಕಿಚ್ಚು. ಇದೇ ಕಬ್ಬಿನಷ್ಟೇ ಜಿದ್ದಿನ ರಾಜಕಾರಣ, ಈ ಕಾವೇರಿ ಒಡಲಿನ ಮಕ್ಕಳ ಕಣಕಣದಲ್ಲೂ ತುಂಬಿದೆ. ದಳವನ್ನ ಧೂಳೀಪಟ ಮಾಡಿದ ಕೈಪಡೆ, ಕೃಷ್ಣ ಪಾಂಚಜನ್ಯ ಬಳಿಕ ಮಂಡ್ಯ ರಾಜಕಾರಣವನ್ನ ತನ್ನ ಕಪಿಮುಷ್ಠಿಗೆ ಪಡೆದಿದೆ. ಮಂಡ್ಯ ಒಕ್ಕಲಿಗರ ಪಾರುಪತ್ಯದ ಮಹಾಕೋಟೆ ಅನ್ನೋದು ಎಲ್ಲರಿಗೂ ಗೊತ್ತು. ಈಗ ಇದೇ ಮಹಾಕೋಟೆಯಲ್ಲ ಮತ್ತೆ ಜಿದ್ದು ಜನ್ಮತಾಳಿದೆ.. ಪತ್ರವೊಂದು ರಾಜಕೀಯ ಕಿಡಿಹೊತ್ತಿಸಿದೆ.
ತನಿಖೆಗೂ ಮುನ್ನವೇ ನಕಲಿ ಎಂದು ಸರ್ಕಾರದ ಲೆಟರ್ ಹೆಡ್!
ಕೈಪಡೆ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳ ಹೊತ್ತಲ್ಲೇ ಮತ್ತೊಂದು ಪತ್ರ ತಳಮಳ ಜೊತೆ ಸಂಚಲನ ಸೃಷ್ಟಿಸಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಗಂಭೀರ ದೂರು ಹೊತ್ತ ಈ ಪತ್ರ, ರಾಜಭವನದ ದ್ವಾರ ತಲುಪಿದೆ. ಜಿಲ್ಲೆಯ ಪ್ರತಿ ಕೃಷಿ ಸಹಾಯಕ ನಿರ್ದೇಶಕರಿಂದ 8 ಲಕ್ಷ ಕಮಿಷನ್ಗೆ ಬೇಡಿಕೆ ಇಡಲಾಗಿದೆ ಎಂಬ ಒಕ್ಕಣಿಕೆ ಹೊಂದಿದ ಪತ್ರ, ಹಸ್ತಪಡೆಯ ಹೊಕ್ಕಳಿಗೆ ತಿವಿದಿದೆ. ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಸಮರಕ್ಕೆ ಸ್ವತಃ ಸಿಎಂ ಅಖಾಡಕ್ಕೆ ಇಳಿದು ಬೆಂಬಲಕ್ಕೆ ನಿಂತಿದ್ದಾರೆ.
ಪತ್ರದಲ್ಲಿರುವ ಜಾಯಿಂಟ್ ಡೈರೆಕ್ಟರ್‌ಗಳೇ ಇಲ್ಲ!
ರಾಜ್ಯಪಾಲರಿಗೆ ತಲುಪಿದ ಪತ್ರ ಫೇಕ್ ಅಂತ ಚಲುವರಾಯಸ್ವಾಮಿ ಹೇಳಿಕೆ. ಇದೇ ಮಾತನ್ನೇ ಸಿಎಂ ಸಮರ್ಥಿಸಿದ್ದಾರೆ. ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚಿಸಿದ್ದಾಗಿ ಹೇಳಿದ್ದಾರೆ. ಅಚ್ಚರಿ ಎಂದ್ರೆ, ಪತ್ರದಲ್ಲಿರುವ ಜಾಯಿಂಟ್ ಡೈರೆಕ್ಟರ್‌ಗಳೇ ಇಲ್ಲ ಅನ್ನೋದು ಸಿಎಂ ವಾದವಾಗಿದೆ.
‘ಸಮರ್ಥನೆ ಸಿದ್ದಕಲೆ, ಲಜ್ಜೆಗೇಡಿ ಸಿಎಂ’
‘ಮಂತ್ರಿಗಳ ಮಾನಗೇಡಿ ಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಲಜ್ಜೆಗೇಡಿ ಮುಖ್ಯಮಂತ್ರಿ ಈ ರಾಜ್ಯಕ್ಕೆ ವಕ್ಕರಿಸಿದ್ದಾರೆ. ಸಚಿವರ ಸುಲಿಗೆಯನ್ನೇ ಸಿಗ್ಗಿಲ್ಲದೆ ಸಮರ್ಥನೆ ಮಾಡಿಕೊಳ್ಳುವ ‘ಸಿದ್ದಕಲೆ’ ಅಸಹ್ಯ ಮತ್ತು ವಾಕರಿಕೆ ತರಿಸುತ್ತಿದೆ. ನಕಲಿ ಪತ್ರ ಎಂದಾದರೆ ರಾಜ್ಯಪಾಲರ ಕಾರ್ಯಾಲಯ ನಕಲಿ ಪತ್ರದ ಮೇರೆಗೆ ಕ್ರಮ ಜರುಗಿಸಿ ಎಂದು ಷರಾ ಬರೆದಿದೆಯೇ? ಸುಳ್ಳಿನ ಪತ್ರಕ್ಕೆ ಮಾನ್ಯ ರಾಜ್ಯಪಾಲರು ಸ್ಪಂದಿಸಿದ್ದಾರೆಯೇ? ರಾಜಧರ್ಮದ ಪ್ರವಚನಕಾರರೇ ರಾಜಭವನದ ಪಾವಿತ್ರ್ಯವನ್ನೇ ಶಂಕಿಸುವುದು ತರವೇ? ಸ್ವಯಂ ಘೋಷಿತ ನಕಲಿ ಸಂವಿಧಾನ ತಜ್ಞನಿಗೆ ಇದು ಭೂಷಣವಲ್ಲ. ಕಂಡೋರ ಭುಜದ ಮೇಲೆ ಬಂದೂಕಿಟ್ಟು ಇನ್ನೊಬ್ಬರ ರಾಜಕೀಯ ಜೀವನ ಎತ್ತಿಬಿಡುವ ನಿಮ್ಮಂಥ ‘ಎತ್ತುವಳಿ ಗಿರಾಕಿ’ಗೆ ನಕಲಿಪತ್ರಗಳ ಸೃಷ್ಟಿ ಬೆಣ್ಣೆ ಕಡಿದಷ್ಟೇ ಸಲೀಸು. ಮತ್ತೊಬ್ಬರ ಶ್ರಮದ ಬೆವರೇ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹವಿಸ್ಸು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಅಗೋಚರ ಪತ್ರ ಸಮರಕ್ಕೆ ಹೆಚ್ಡಿಕೆ ಆಗಮನವೇ ಕಾಯ್ತಿದ್ದ ಸಚಿವ ಚಲುವರಾಯಸ್ವಾಮಿ, ಪತ್ರವನ್ನ ತನಿಖೆ ನಡೆಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವರು, ಹೆಚ್ಡಿಕೆ ನಾನೇ ಪತ್ರ ಮಾಡಿ, ಸಹಿ ಹಾಕಿದ್ದು ಅಂತೇಳಲಿ ಅಂತ ಟಾಂಗ್ ಕೊಟ್ಟಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ ಬೆಂಬಲಕ್ಕೆ ನಿಂತ ಕಾಂಗ್ರೆಸ್!
ಪತ್ರ ರಾಜ್ಯಪಾಲರಿಗೆ ತಲುಪಿದೆ. ತನಿಖೆಗೆ ಸಿಎಂ ಸೂಚಿಸಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ಪತ್ರ ನಕಲಿ ಅಂತ ಸ್ವತಃ ಗೃಹ ಸಚಿವ ಪರಮೇಶ್ವರ್ ಸರ್ಟಿಫಿಕೇಟ್ ನೀಡಿದ್ದಾರೆ. ಎಸ್ಪಿ ಬಳಿ ವರದಿ ತರೆಸಿಕೊಳ್ತೇನಿ ಅಂತ ಹೇಳಿದ್ದಾರೆ.
ಇತ್ತ, ಮಂಡ್ಯದಲ್ಲಿ ಈ ಪತ್ರವೇ ಹಲ್ಚಲ್ ಎಬ್ಬಿಸಿದೆ. ಸಚಿವರ ವಿರುದ್ಧ ದಳಪತಿಗಳ ಷಡ್ಯಂತ್ರ ಇದೆ ಅಂತ ಕೈ ಶಾಸಕರು, ಕಾರ್ಯಕರ್ತರು ದೂರಿದ್ದಾರೆ. ಪತ್ರದಲ್ಲಿನ ಕೆಲ ಅಂಶಗಳ ಬಗ್ಗೆ ಅನುಮಾನ ಇದೆ. ಹೀಗಾಗಿ ತನಿಖೆ ನಡೆಸಬೇಕು ಅಂತ ಮಂಡ್ಯ ಎಸ್ಪಿಗೆ ದೂರು ನೀಡಿದ್ದಾರೆ.
ಒಟ್ಟಾರೆ, ಪತ್ರ ಅಸಲಿಯೋ ನಕಲಿಯೋ ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಆದ್ರೆ, ಅದಕ್ಕೂ ಮುನ್ನ ನಕಲಿ ಅಂತ ಸರ್ಕಾರ ಸಾಬೀತು ಪಡಿಸಲು ನಿಂತಂತಿದೆ. ಒಂದು ಪತ್ರ ಮಾತ್ರ ಸರ್ಕಾರವನ್ನ ಮುಜುಗರಕ್ಕೆ ತಳ್ಳಿದ್ದಂತು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ