newsfirstkannada.com

ನಾಲಿಗೆ ಹರಿಬಿಟ್ಟ ಸಚಿವ ಡಿ. ಸುಧಾಕರ್‌; ವಿವಾದಾತ್ಮಕ ಹೇಳಿಕೆ ನೀಡಿದ ಮತ್ತೊಂದು ವಿಡಿಯೋ ಬಹಿರಂಗ

Share :

12-09-2023

  ಈಗ ಬ್ರಾಹ್ಮಣರಿಗೆ ಯಾಕೆ ಹೆದರಿಕೊಳ್ತಾರೆ ಗೊತ್ತಾ ಎಂದ ಡಿ.ಸುಧಾಕರ್‌

  ನೊಂದ ಕುಟುಂಬಸ್ಥರು ಮಾತುಕತೆಗೆ ಹೋದಾಗ ಸಚಿವರ ಹೇಳಿಕೆ

  ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರೋ ವಿಡಿಯೋ ಬಹಿರಂಗ

ನ್ಯಾಯ ಕೇಳಲು ಹೋದವರಿಗೆ ಧಮ್ಕಿ ಹಾಕಿದ ಆರೋಪದಲ್ಲಿ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಚಿವ ಡಿ.ಸುಧಾಕರ್ ಧಮ್ಕಿ ಹಾಕಿದ ವಿಡಿಯೋ ಬಹಿರಂಗವಾದ ಮೇಲೆ ಪ್ರತಿಪಕ್ಷ ಬಿಜೆಪಿ ನಾಯಕರು ಬಂಧಿಸಲು ಆಗ್ರಹಿಸುತ್ತಿದ್ದಾರೆ. ದಲಿತರ ಮೇಲೆ ಸಚಿವರ ದೌರ್ಜನ್ಯದ ಈ ಕೇಸ್‌ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಕರಣ ಸಚಿವರ ಸುತ್ತಾ ಸುತ್ತಿಕೊಳ್ಳುತ್ತಿದ್ದಂತೆ ಸುಧಾಕರ್ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರೋ ವಿಡಿಯೋ ಬಹಿರಂಗವಾಗಿದೆ.

ಸಚಿವ ಡಿ. ಸುಧಾಕರ್ ಅವರ ಬಳಿ ನೊಂದ ಸುಬ್ಬಮ್ಮ ಕುಟುಂಬಸ್ಥರು ಮಾತುಕತೆಗೆ ಹೋದಾಗ ಅವಹೇಳನಕಾರಿಯಾದ ಪದಗಳನ್ನು ಬಳಸಿದ್ದಾರೆ. ನಾವು ಈಗ ಬ್ರಾಹ್ಮಣರಿಗೆ ಹೆದರಿಕೊಳ್ಳೊದಾ? ಅವರು ಪೆನ್ನಲ್ಲಿ ಕಟ್ಟಿ ಹಾಕ್ತಾರೆ ಎಂದು ಮಾತನಾಡುವಾಗ ನಾಲಿಗೆ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: ಹಲ್ಲೆ, ಜಾತಿ ನಿಂದನೆ ಆರೋಪ; ಸಚಿವ ಡಿ. ಸುಧಾಕರ್‌ ವಿರುದ್ಧ ಕೇಸ್​; ಏನಿದು ಪ್ರಕರಣ?

ಸಚಿವ ಡಿ.ಸುಧಾಕರ್ ಮಾತಾಡಿದ್ದೇನು?

ಡಿ ಸುಧಾಕರ್: ಕೇಳೋ ಇಲ್ಲಿ.. ಈಗ ಬ್ರಾಹ್ಮಣರಿಗೆ ಯಾಕೆ ಹೆದರಿಕೊಳ್ತಾರೆ.
ನೊಂದ ಕುಟುಂಬ : ಹ್ಹಾ

ಡಿ ಸುಧಾಕರ್: ಸೂ… ಮಕ್ಕಳು ಬ್ರಾಹ್ಮಣರಿಗೆ ಯಾಕೆ ಹೆದರಿಕೊಳ್ತೀವಿ ಗೊತ್ತಾ ನಾವು.?
ನೊಂದ ಕುಟುಂಬ : ಹ್ಹಾ

ಡಿ ಸುಧಾಕರ್ : ನೀವೆ ಹಗ್ಗದಲ್ಲಿ ಕಟ್ಟು, ಆ ಸೂ… ಮಕ್ಕಳು ಪೆನ್ನಲ್ಲಿ ಕಟ್ಟಿ ಹಾಕ್ತಾರೆ
ನೊಂದ ಕುಟುಂಬ : ಸತ್ಯ

ಡಿ ಸುಧಾಕರ್ : ಇದ ಇದತಲ್ಲಾ.. ಯಾವ್ದು.? ಅಟ್ ದೊಡ್ಡ ಹಗ್ಗ ಕಟ್ಟು, ಚೈನ್ ನಲ್ಲಿ ಕಟ್ ಹಾಕು.. ಅವರು ಇದರಲ್ಲಿ ಕಟ್ ಹಾಕ್ತಾರೆ.. ಅವರು ಇದರಲ್ಲಿ ನೇಣು ಹಾಕ್ತಾರೆ.
ನೊಂದ ಕುಟುಂಬ : ಈವಾಗ ಏನ್ ಸರ್ ಈಗ.

ಡಿ ಸುಧಾಕರ್ : ಸೇಲ್ ಮಾಡ್ಬಿಡ್ರಿ
ನೊಂದ ಕುಟುಂಬ: ಈವಾಗ ಏನ್ ಮಾಡಬೇಕು ಅಂತಾ ಹೇಳಿ ಸರ್

ಡಿ ಸುಧಾಕರ್ : ನನಗೆ ಕೊಡ್ಬೇಕು ಅಷ್ಟೆ.
ನೊಂದ ಕುಟುಂಬ : ಸರ್ ಹೆಣ್ಣು ಮಕ್ಕಳು ನಾವು ಎಲ್ಲಾ ಒಂದೇ ಅಂತಾ ಈವಾಗ ಹೇಳಿದ್ರಿ.

ಡಿ ಸುಧಾಕರ್ : ನಾನು ನಿಂತಾ ಒಂದಾಗಲ್ಲ ಕಣಯ್ಯ.. ಏನು. ಹೋಗ್ ನೀನು ಹೆಣ್ಣು ಮಕ್ಕಳ ಕಡೆ ಮಾಡ್ಕೋ ಹೋಗು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನಾಲಿಗೆ ಹರಿಬಿಟ್ಟ ಸಚಿವ ಡಿ. ಸುಧಾಕರ್‌; ವಿವಾದಾತ್ಮಕ ಹೇಳಿಕೆ ನೀಡಿದ ಮತ್ತೊಂದು ವಿಡಿಯೋ ಬಹಿರಂಗ

https://newsfirstlive.com/wp-content/uploads/2023/09/Minister-D-Sudhakar.jpg

Load More