ಸಚಿವ ಡಿ. ಸುಧಾಕರ್ ಮೇಲೆ ಅಟ್ರಾಸಿಟಿ ಕೇಸ್ ದಾಖಲು!
ಮಹಿಳೆಯರ ಎರಡು ಗುಂಪುಗಳ ನಡುವೆ ದೊಡ್ಡ ಸಂಘರ್ಷ!
ಮೋಸದಿಂದ ದಲಿತರ ಆಸ್ತಿ ಕಬಳಿಸೋಕೆ ಮುಂದಾದ್ರಾ ಸಚಿವರು?
ಬೆಂಗಳೂರು: ಸಚಿವ ಡಿ.ಸುಧಾಕರ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಜೊತೆಗೆ ಸಚಿವರೇ ಮೇಲೇ ಅಟ್ರಾಸಿಟಿ ಕೇಸ್ ದಾಖಲಾಗಿದೆ. ದಲಿತರ ಭೂಮಿ ಕಬಳಿಸೋ ಆರೋಪ ಎದುರಿಸ್ತಿರೋ ಸಚಿವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಲಹಂಕ ಗ್ರಾಮದಲ್ಲಿ ನಡೆದ ಘಟನೆ ಇದು. ಜೆಸಿಬಿಗಳು ಒಂದು ಕಡೆ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಮಹಿಳೆಯರ ಎರಡು ಗುಂಪುಗಳ ನಡುವೆ ದೊಡ್ಡ ಸಂಘರ್ಷ ನಡೆದಿದೆ. ಒಂದು ಗುಂಪಿನ ಮಹಿಳೆಯರಂತೂ ಚಪ್ಪಲಿಯಿಂದ ಹಲ್ಲೆ ಮಾಡಿಬಿಟ್ಟರು. ಪರಸ್ಪರ ಹೊಡೆದಾಡಿಕೊಂಡು ಘಟನೆಯೂ ಜರುಗಿತು. ಇನ್ನೊಂದೆಡೆ ಪುರುಷರ ಮೇಲೂ ದಬ್ಬಾಳಿಕೆಗಳು ನಡೆದವು. ಯಲಹಂಕ ಗ್ರಾಮದಲ್ಲಿರೋ ಜಮೀನಿನ ವಿಚಾರವಾಗಿ ಸ್ಥಳೀಯರು ಮತ್ತು ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ನಡುವೆ ನಡೆದ ದೊಡ್ಡ ಸಂಘರ್ಷ ಉಂಟಾಗಿದೆ.
ಇದೇ ಪ್ರಕರಣದಲ್ಲಿಯೇ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ.ಸುಧಾಕರ್ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಜೊತೆಗೆ ದೌರ್ಜನ್ಯ, ವಂಚನೆ & ಹಲ್ಲೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಇವರ ಜೊತೆಗೆ ಶ್ರೀನಿವಾಸ್, ಭಾಗ್ಯಮ್ಮ ಮೇಲೆ ಕೂಡ FIR ದಾಖಲಾಗಿದ್ದು, ಪ್ರಕರಣದಲ್ಲಿ ಸಚಿವರು ಎ2 ಆರೋಪಿಗಳಾಗಿದ್ದಾರೆ. ಸುಬ್ಬಮ್ಮ ಎಂಬುವರು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೋಸದಿಂದ ದಲಿತರ ಆಸ್ತಿ ಕಬಳಿಸೋಕೆ ಬಂದಿದ್ದಾರೆ ಅಂತಾ ಆರೋಪಿಸಿದ್ದಾರೆ. ಸೆವೆನ್ ಹಿಲ್ಸ್ ಡೆವಲಪರ್ಸ್ & ಟ್ರೇಡರ್ಸ್, ಇದರ ಪಾಲುದಾರ ಸುಧಾಕರ್ ಮೇಲೆ ಸುಬ್ಬಮ್ಮ ಕಂಪ್ಲೇಂಟ್ ಕೊಟ್ಟಿದ್ದಾರೆ. ಸಚಿವರು ಸೇರಿದಂತೆ ಈ ಕಂಪನಿಯ ಪ್ರಮುಖರು, ತನ್ನ ಕುಟುಂಬದವರಿಂದ ಮೋಸ ಮಾಡಿಸಿಕೊಂಡಿದ್ದಾರೆ.
ಏನಿದು ಪ್ರಕರಣ..?
ಯಲಹಂಕ ಗ್ರಾಮದ ಸರ್ವೆ ನಂ108/1 ರ ಜಮೀನು ಕೇಸ್, ಕೋರ್ಟ್ನಲ್ಲಿ ಇರುವಾಗಲೇ ಜನರನ್ನು ಕಟ್ಟಿಕೊಂಡು ಬಂದು ದೌರ್ಜನ್ಯವೆಸಗಿದ್ದಾರೆ. 35ರಿಂದ 40 ಜನರನ್ನ ಕರೆದುಕೊಂಡು ಬಂದು ಗೂಂಡಾಗಿರಿ ಮಾಡಿದ್ದಾರೆ. ಜೊತೆಗೆ ಮಹಿಳೆಯರನ್ನು ಕರೆದೊಯ್ದು ಜೆಸಿಬಿ ಮೂಲಕ ಮನೆ ಧ್ವಂಸ ಮಾಡಿದ್ದು, ಮನೆಯಲ್ಲಿದ್ದ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಜಾತಿನಿಂದನೆ ಕೂಡ ಮಾಡಿದ್ದಾರೆ ಅಂತಾ ದೂರುದಾರರು ಆರೋಪಿಸಿದ್ದಾರೆ. ಇನ್ನೂ, ನ್ಯೂಸ್‌ಫಸ್ಟ್ ಈ ಬಗ್ಗೆ ನಿರಂತರವಾಗಿ ವರದಿ ಪ್ರಸಾರ ಮಾಡಿದ ನಂತರ, ಸಚಿವರು ನಮ್ಮ ಪ್ರತಿನಿಧಿ ಜೊತೆ ಮಾತನಾಡಿದರು. ಈ ಘಟನೆಯ ಹಿಂದೆ ಷಡ್ಯಂತ್ರವಿದೆ ಅಂತಾ ಆರೋಪಿಸಿದರು. ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಕಾನೂನಿನ ಸಮರ ಏನೇ ಇರಬಹುದು. ಆದ್ರೆ, ಯಲಹಂಕ ಗ್ರಾಮದಲ್ಲಿ ನಡೆದ ಘರ್ಷಣೆ ಮತ್ತು ದೌರ್ಜನ್ಯ ಮಾತ್ರ ಖಂಡನೀಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ