ಕಾನೂನು ಕ್ರಮ ಕೈಗೊಳ್ಳಲು ವಿಪ್ರ ಯುವ ವೇದಿಕೆ ಒತ್ತಾಯ
ಸಚಿವರು ಬ್ರಾಹ್ಮಣ ಸಮುದಾಯದ ಬಗ್ಗೆ ನಿಂದನೆ ಆರೋಪ!
ಡಿ.ಸುಧಾಕರ್ ವಿರುದ್ಧ ಬಸವನಗುಡಿ ಠಾಣೆಯಲ್ಲಿ ದೂರು ದಾಖಲು
ಬೆಂಗಳೂರು: ನ್ಯಾಯ ಕೇಳಲು ಬಂದ ದಲಿತರ ಮೇಲಿನ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ಸಚಿವ ಡಿ.ಸುಧಾಕರ್ ಅವರು ಆರೋಪ ಎದುರಿಸುತ್ತಿದ್ದಾರೆ. ಇವರ ಭೂ ವ್ಯವಹಾರದ ಸಂದರ್ಭದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸುವಂತೆ ವಿಪ್ರ ಯುವ ವೇದಿಕೆ ಆಗ್ರಹಿಸಿದೆ.
ಇದನ್ನು ಓದಿ: ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಮತ್ತೆ ಶಾಕ್; ಇಂದು ತುರ್ತು ಸರ್ವಪಕ್ಷ ಸಭೆ
ಸಚಿವ ಡಿ. ಸುಧಾಕರ್ ಮೇಲಿನ ಆರೋಪವೇನು..?
ದಲಿತರ ಭೂಮಿ ಗಲಾಟೆಯ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ಸಚಿವ ಡಿ. ಸುಧಾಕರ್ ಅವರು ಅವಹೇಳನಕಾರಿಯಾಗಿ ಮಾತಾಡಿದ್ದರು. ಅವರು ಮಾತಾಡುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಬ್ರಾಹ್ಮಣ ಸಮುದಾಯದವರು ಡಿ. ಸುಧಾಕಾರ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬ್ರಾಹ್ಮಣ ಸಮುದಾಯವಷ್ಟೇ ಅಲ್ಲದೇ ಯಾವುದೇ ಸಮುದಾಯದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಬಾರದು. ಸಚಿವರ ಬ್ರಾಹ್ಮಣ ಸಮುದಾಯದ ನಿಂದನೆಯನ್ನು ವಿಪ್ರ ಯುವ ವೇದಿಕೆ ಖಂಡಿಸುತ್ತದೆ. ಹೀಗಾಗಿ ಕೂಡಲೇ ಸಚಿವರು ಸಮುದಾಯದ ಕ್ಷಮೆ ಕೋರಬೇಕು. ಇಲ್ಲದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ವಿಪ್ರ ಯುವ ವೇದಿಕೆಯ ಪದಾಧಿಕಾರಿಗಳು ಹಾಗೂ ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರು ಸಚಿವ ಡಿ.ಸುಧಾಕರ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟು ಎಚ್ಚರಿಕೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ