ಹಳೆ ಕೇಸ್ಗೆ ಮರುಜೀವ, ಕೇಂದ್ರದ ಕೈಗಾರಿಕೆಗಳ ಸಚಿವಗೆ ಸಂಕಷ್ಟ
ಬಿಜೆಪಿ ವಿಪಕ್ಷವಾದ್ರೂ ರಾಜ್ಯದಲ್ಲಿ ಅಸಲೀ ವಿಪಕ್ಷ ನಾಯಕ HDKನಾ?
ಕುಮಾರಸ್ವಾಮಿ ವೇಗಕ್ಕೆ ಬ್ರೇಕ್ ಹಾಕಿದ ಲೋಕಾ ಪ್ರಾಸಿಕ್ಯೂಷನ್
ಈ ಮುಡಾ ಗದ್ದಲ ಸಿಎಂಗೆ ಸಂಕಷ್ಟ ಏನೋ ನಿಜ. ಆದ್ರೆ, ಹೆಚ್.ಡಿ ಕುಮಾರಸ್ವಾಮಿಯೂ ಟಾರ್ಗೆಟ್ ಆಗ್ತಿದ್ದಾರೆ. 2007ರ ಹಳೆ ಗಣಿ ಕೇಸ್ಗೆ ಮರುಜೀವ ಸಿಕ್ಕಿದ್ದು ಸಂಕಟಕ್ಕೆ ಬೀಳಿಸಿದೆ. ಕೇಂದ್ರದ ಬೃಹತ್ ಕೈಗಾರಿಕೆಗಳ ಸಚಿವ ಹೆಚ್.ಡಿ ಕುಮಾರಸ್ವಾಮಿ ಅಶ್ವಮೇಧ ಯಾಗಕ್ಕೆ ಬ್ರೇಕ್ ಹಾಕಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಿಂದ ಕೈದಿಗಳಿಗೆ ಗುಡ್ನ್ಯೂಸ್.. 2 ತಿಂಗಳಲ್ಲಿ ಬಿಡುಗಡೆ ಭಾಗ್ಯ
ಒಬ್ಬರ ವಿರುದ್ಧ ಮತ್ತೊಬ್ಬರ ಕೌಂಟರ್ ಕುಸ್ತಿ. ಅತ್ತ ಸಿಎಂ ಸಿದ್ದರಾಮಯ್ಯ. ಇನ್ನೊಂದ್ಕಡೆ ಡಿ.ಕೆ ಶಿವಕುಮಾರ್. ಈ ಇಬ್ಬರು ಅತಿರಥರ ಜೊತೆ ಏಕಕಾಲಕ್ಕೆ ಬ್ಯಾಲೆನ್ಸಿಂಗ್ ಫೈಟ್ ಮಾಡೋದು ಮಹಾರಥಿ ಈ ದಳಪತಿ. ಬಿಜೆಪಿ ವಿಪಕ್ಷವಾದ್ರೂ ರಾಜ್ಯದಲ್ಲಿ ಅಸಲೀ ವಿಪಕ್ಷ ನಾಯಕ ಅದು ಹೆಚ್.ಡಿ ಕುಮಾರಸ್ವಾಮಿ ಅನ್ನೋ ವಾತಾವರಣ ಇದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತಲೆದಂಡಕ್ಕೆ ದಂಡೆತ್ತಿ ಬಂದ ಪಾದಯಾತ್ರೆಗೆ ಸಾರಥ್ಯ ಕೊಟ್ಟ ಹೆಚ್ಡಿಕೆಗೆ, ಗಣಿ ಅಕ್ರಮ ದಿಢೀರ್ ಹೆಗಲೇರಿದೆ.
ಇದನ್ನೂ ಓದಿ: ರಜನಿಕಾಂತ್ಗೆ ಠಕ್ಕರ್ ಕೊಡ್ತಾರಾ ಉಪೇಂದ್ರ..? ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಪಾತ್ರವೇನು?
ದೆಹಲಿ ಮಟ್ಟದಲ್ಲಿ ಹೈಕಮಾಂಡ್ ಅಬ್ಸರ್ವೇಷನ್ನಲ್ಲಿ ಹೆಚ್ಡಿಕೆ?
ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಮೇನ್ ಹೈಲೈಟ್ ಆಗಿರೋದೇ ಮಾಜಿ ಸಿಎಂ, ಹಾಲಿ ಸೆಂಟ್ರಲ್ ಮಿನಿಸ್ಟರ್ ಕುಮಾರಸ್ವಾಮಿ. ಮಾತಿನ ಡಿಚ್ಚಿ, ಡೈಲಾಗ್ಗಳ ಗುನ್ನ, ಹಸ್ತ-ದಳಪತಿ ನಡುವೆ ಟೀಕೆ ಟಿಪ್ಪಣಿಗಳ ಕದನ ತಾರಕಕ್ಕೇರಿಸಿತ್ತು.. ಆದ್ರೆ, ರಾಷ್ಟ್ರಮಟ್ಟದಲ್ಲಿ ಇಬ್ಬರ ನಡುವಿನ ಜಗಳ, ಕೂಸು ಬಡವಾಯ್ತು ಅನ್ನೋ ಹಾಗೇ ಹೆಚ್ಡಿಕೆ ಬಲಿ ಆಗ್ತಾರಾ ಅನ್ನೋ ಚರ್ಚೆ ಇದೆ. ಈ ಚರ್ಚೆಗೆ ಕಾರಣ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ್ದ ಹೇಳಿಕೆ.
ಹೆಚ್.ಡಿ ಕುಮಾರಸ್ವಾಮಿಯವರು ತಲೆದಂಡವಾಗುವಂತದ್ದು ರಾಜ್ಯಪಾಲರ ತೀರ್ಮಾನದ ಮೇಲೆ ನಿಂತಿದೆ. ಬಿಜೆಪಿಯವರು ಕುಮಾರಸ್ವಾಮಿಯವರನ್ನ ತೆಗೆಯಬೇಕೆಂದು ಈ ರೀತಿ ಮಾಡಿದ್ದಾರೆಂದು ನನಗೆ ಅನಿಸುತ್ತೆ. ಮೊದಲೇ ಬಿಜೆಪಿಯವರು ಜೆಡಿಎಸ್ ಅನ್ನು ಮುಗಿಸಬೇಕೆಂದು ಇದ್ದರು. ಈಗ ಈ ದಾರಿಯನ್ನು ಹುಡುಕಿ ಕುಮಾರಸ್ವಾಮಿಯವರನ್ನ ತೆಗೆಸುತ್ತಿದ್ದಾರೆ. ಬಿಜೆಪಿಯವರೇ ಇದನ್ನು ತಗೊಂಡು ಬರ್ತಿದ್ದಾರೆ.
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಹೆಚ್.ಡಿ.ಕುಮಾರಸ್ವಾಮಿ ಅಶ್ವಮೇಧ ಯಾಗಕ್ಕೆ ಬಿತ್ತಾ ಬ್ರೇಕ್?
ಅಂದ್ಹಾಗೆ ದಾಖಲೆಗಳ ಶೂರ ಹೆಚ್.ಡಿ ಕುಮಾರಸ್ವಾಮಿಗೆ ಅಕ್ರಮ ಗಣಿಗಾರಿಕೆ ಅನುಮತಿ ಆತಂಕ ಹೆಚ್ಚಿಸಿದೆ. ಪ್ರಧಾನಿ ಸಂಪುಟದಲ್ಲಿ ಪ್ರಬಲ ಖಾತೆ ಗಿಟ್ಟಿಸಿಕೊಂಡು ಪ್ರಭಾವಿಯಾಗಿದ್ದ ಕುಮಾರಸ್ವಾಮಿ ವೇಗಕ್ಕೆ ಲೋಕಾಯುಕ್ತ ಎಸ್ಐಟಿ ಬಿಟ್ಟ ಪ್ರಾಸಿಕ್ಯೂಷನ್ ಅಸ್ತ್ರ ಬ್ರೇಕ್ ಹಾಕಿಸಿದೆ. ಸದ್ಯ ದೆಹಲಿ ಮಟ್ಟದಲ್ಲಿ ಹೆಚ್ಡಿಕೆ ಕೊಂಚ ಅಬ್ಸರ್ವೇಷನ್ನಲ್ಲಿದ್ದಾರೆ. ಆರೋಪ ಮುಕ್ತವಾಗೋವರೆಗೆ ಕೇಂದ್ರದಲ್ಲಿ ಹೆಚ್ಡಿಕೆ ಮೌನಾಗ್ನಿ ಆಗಲಿದ್ದಾರೆ. ಅಷ್ಟಕ್ಕೂ ಹೆಚ್ಡಿಕೆ ಸೈಲೆಂಟ್ಗೆ ಹಲವು ಕಾರಣಗಳೂ ಇವೆ.
ದಳಪತಿಗೆ ಢವ ಢವ!
ಇದನ್ನೂ ಓದಿ: ಮೈಸೂರು ನೋಟು ಮುದ್ರಣ ಸಂಸ್ಥೆಯಲ್ಲಿ ಉದ್ಯೋಗಗಳು.. ಸ್ಯಾಲರಿ ಎಷ್ಟು, ಕೊನೆ ದಿನಾಂಕ?
ಈಗಾಗ್ಲೇ ರಾಜ್ಯ ಬಿಜೆಪಿ ನಾಯಕರಿಂದ ಹೈಕಮಾಂಡ್ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನ ಪರಿಶೀಲಿಸಿದೆ. ಈ ಮಧ್ಯೆ ಆತಂಕಗಳನ್ನೇ ಹೊತ್ತಿರುವ ಕುಮಾರಸ್ವಾಮಿ ಇವತ್ತು ಹೆಚ್.ಡಿ ದೇವೇಗೌಡರ ಜೊತೆ ಡೆಲ್ಲಿ ಫ್ಲೈಟ್ ಹತ್ತಿದ್ದು ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದೆ ಅಂತ ಗೊತ್ತಾಗಿದೆ. ಪ್ರಕರಣದ ಕ್ಲೀನ್ ಚಿಟ್ ಪಡೆಯುವ ತನಕ ಮೋದಿ ಸರ್ಕಾರದಲ್ಲಿ ಹೆಚ್ಡಿಕೆ ವನವಾಸಕ್ಕೆ ತೆರಳ್ತಾರಾ ಅನ್ನೋ ಚರ್ಚೆಗಳು ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ