ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಘಟನೆ
14 ಪುಟಗಳ ಸುದೀರ್ಘ ಭಾಷಣ ಮಾಡಿದ ಎಚ್.ಸಿ ಮಹದೇವಪ್ಪ
ಬಿಸಿಲಿನ ಬೇಗೆಗೆ ಸುಸ್ತಾಗಿ ಕುರ್ಚಿ ತರಿಸಿಕೊಂಡ ಸಚಿವ
ಮೈಸೂರು: ಬಿಸಿಲಿನ ತಾಪಕ್ಕೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಕುಸಿದು ಕುಳಿತ ಘಟನೆ ಮೈಸೂರಿನ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದಿದೆ. ಸುದೀರ್ಘ ಭಾಷಣ ಮಾಡಿ ಬಸವಳಿದು ಧ್ವಜಸ್ತಂಭದ ಬಳಿಯೇ ಕುರ್ಚಿಯಲ್ಲಿ ಕುಳಿತಿದ್ದಾರೆ.
ಸಚಿವ ಎಚ್.ಸಿ ಮಹದೇವಪ್ಪ 14 ಪುಟಗಳ ಸುದೀರ್ಘ ಭಾಷಣ ಮಾಡಿದ್ದರು. ನೀರು ಕುಡಿದು ಆಯಾಸ ನೀಗಿಸುತ್ತಾ ಭಾಷಣ ಮಾಡಿದ್ದರು. ಕಡೆ ಗಳಿಗೆಯಲ್ಲಿ ಆತುರದಿಂದ ಭಾಷಣ ಓದಿ ಮುಗಿಸಿದರು. ಬಳಿಕ ಬಿಸಿಲಿನ ಬೇಗೆಗೆ ಸುಸ್ತಾಗಿ ಕುರ್ಚಿ ತರಿಸಿಕೊಂಡು ದಣಿವಾರಿಸಿಕೊಂಡರು.
ಆದರೆ ಸಚಿವರು ಸುತ್ತಾಗಿರೊದನ್ನ ಕಂಡು ಕೆಲ ಸಮಯ ಸ್ಥಳದಲ್ಲಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು, ಜನತೆಯಲ್ಲಿ ಆತಂಕ ಮನೆಮಾಡಿತು. ನಂತರ ಸಚಿವ ಮಹದೇವಪ್ಪ ಆಯಾಸ ನಿವಾರಿಸಿಕೊಂಡು ಸುಧಾರಿಸಿಕೊಂಡಿದ್ದಾರೆ. ನಂತರ ಮುಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಹೆಚ್.ಸಿ.ಮಹದೇವಪ್ಪ ಕುಸಿದ್ರು. ಮೈಸೂರಿನಲ್ಲಿ ಬನ್ನಿ ಮಂಟಪದ ಮೈದಾನದಲ್ಲಿ ಸುದೀರ್ಘ ಭಾಷಣ ಮಾಡಿದ್ರು. ಈ ವೇಳೆ ಬಿಸಿಲು ಹೆಚ್ಚಿದ್ದ ಕಾರಣ ಹೆಚ್.ಸಿ ಮಹದೇವಪ್ಪ ಸುಸ್ತಾಗಿ ಕುಳಿತರು, ಸ್ಥಳದಲ್ಲಿದ್ದ ಅಧಿಕಾರಿಗಳು ಸಚಿವರಿಗೆ ನೀರು ಕುಡಿಸಿದ್ರು. #HCMahadevappa #77thIndependenceDay… pic.twitter.com/tL7q2geoUE
— NewsFirst Kannada (@NewsFirstKan) August 15, 2023