newsfirstkannada.com

‘ಬೆವರು ಸುರಿಸದ ಜೀವನ’- ಸ್ವಾಮೀಜಿಗಳ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ಕೆ.ಎನ್‌ ರಾಜಣ್ಣ; ಹೇಳಿದ್ದೇನು?

Share :

Published June 28, 2024 at 12:38pm

Update June 28, 2024 at 12:39pm

    ಚಂದ್ರಶೇಖರನಾಥ ಸ್ವಾಮೀಜಿಗೆ ಕೆ.ಎನ್‌ ರಾಜಣ್ಣ ಕೌಂಟರ್‌

    ‘ಬೆವರು ಸುರಿಸದೆ ಜೀವನ ಮಾಡೋವಂತಹದ್ದನ್ನ ಹೇಳಿದ್ದಾರೆ’

    ಸಿಎಂ ಕುರ್ಚಿ ಬಿಟ್ಟು ಕೊಡಿ ಸಿದ್ದರಾಮಯ್ಯನವ್ರೇ ಎಂದಿದ್ದ ಸ್ವಾಮೀಜಿ

ತುಮಕೂರು: ಡಿ.ಕೆ ಶಿವಕುಮಾರ್‌ ಅವರಿಗೆ ಸಿಎಂ ಕುರ್ಚಿ ಬಿಟ್ಟು ಕೊಡಿ ಸಿದ್ದರಾಮಯ್ಯನವ್ರೇ.. ಕೆಂಪೇಗೌಡ ಜಯಂತಿಯಲ್ಲಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನೀಡಿದ ಹೇಳಿಕೆಗೆ ಸಚಿವ ಕೆ.ಎನ್ ರಾಜಣ್ಣ ಸಿಡಿಮಿಡಿಯಾಗಿದ್ದಾರೆ. ಸ್ವಾಮೀಜಿ ಮಾತಿಗೆ ತಿರುಗೇಟು ಕೊಡುವ ಭರದಲ್ಲಿ ಸಚಿವರು ನಾಲಿಗೆ ಹರಿಬಿಟ್ಟಿದ್ದು ಹೊಸ ವಿವಾದ ಸೃಷ್ಟಿಸಿದೆ.

ಇದನ್ನೂ ಓದಿ: ‘ಸಿಎಂ ಕುರ್ಚಿ ಬಿಟ್ಟು ಕೊಡಿ’- ಆಗಲ್ಲ ಎಂದ ರಾಜಣ್ಣಗೆ ಚಂದ್ರಶೇಖರನಾಥ ಸ್ವಾಮೀಜಿ ಹಿಗ್ಗಾಮುಗ್ಗ ವಾಗ್ದಾಳಿ; ಹೇಳಿದ್ದೇನು?

ಸ್ವಾಮೀಜಿಗೆ ರಾಜಣ್ಣ ಕೌಂಟರ್!
ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆ.ಎನ್ ರಾಜಣ್ಣ, ಯಾವ ಸ್ವಾಮೀಜಿ ರೀ. ದೇಶದಲ್ಲಿ ಬಹಳ ಜನ ಇದ್ದಾರೆ ಸ್ವಾಮೀಗಳು. ನನಗೆ ಮಠ ಮಾಡಿಕೊಡ್ತೀನಿ ಅನ್ನೋ ಒಳ್ಳೆಯ ಸಲಹೆ ನೀಡಿದ್ದಾರೆ. ಆ ಸಲಹೆಯನ್ನು ನಾನು ಪರಿಶೀಲನೆ ಮಾಡ್ತೀನಿ. ಬೆವರು ಸುರಿಸದೆ ಜೀವನ ಮಾಡೋವಂತಹದ್ದನ್ನ ಸ್ವಾಮೀಜಿಗಳು ಸಲಹೆ ಮಾಡಿದ್ದಾರೆ. ಅದನ್ನು ನಾನು ಪರಿಶೀಲನೆ ಮಾಡ್ತೀನಿ.

ಸ್ವಾಮೀಜಿ ಸುಲಭವಾಗಿ ಜೀವನ ನಡೆಸುವ ಮಾರ್ಗ ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ನಾವು ನೋಡಿದ ಸ್ವಾಮೀಜಿ ಸಮಾಜಕ್ಕೆ ಒಳಿತು ಬಯಸೋರು. ಆದ್ರೆ ಹೀಗೆ ಬಹಿರಂಗವಾಗಿ ಇವರು ಹೇಳಿಕೆ ನೀಡಿದ್ದು ಸರಿಯಲ್ಲ. ಮಠ ಮಾಡಿಕೊಡ್ತೀನಿ ಎಂದ ಸ್ವಾಮೀಜಿಗೆ ಸಚಿವ ಕೆ.ಎನ್‌ ರಾಜಣ್ಣ ಅವರು ಅಭಿನಂದನೆ ತಿಳಿಸಿದ್ದಾರೆ.

ರಾಜಣ್ಣಗೆ ಸ್ವಾಮೀಜಿ ಹೇಳಿದ್ದೇನು?
ಕೆ.ಎನ್ ರಾಜಣ್ಣ ಅವರ ಬಗ್ಗೆ ಮಾತನಾಡಿದ್ದ ಚಂದ್ರಶೇಖರನಾಥ ಸ್ವಾಮೀಜಿ, ರಾಜಣ್ಣ ಆತ್ಮ ಪೂರ್ತಿಯಾಗಿ ಹೆಂಡತಿ, ಮಕ್ಕಳು ಮನೆ ಮಠ ಎಲ್ಲ ಬಿಟ್ಟು ಬಂದರೆ ಅವರಿಗೊಂದು ಮಠ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಆಯ್ತು ಅದನ್ನ ಪೀಠವನ್ನು ಕೊಡ್ತೀನಿ. ಅವರು ರಾಜ ತರ್ಲೆ, ಅವನ ಮಾತಲ್ಲಿ ತೂಕ ಇಲ್ಲ ಏನಿಲ್ಲ. ಅವನಿಗೆ ಯೋಗ್ಯತೆನೇ ಇಲ್ಲ ಮಾತಾಡೋಕೆ. ಅವನ್ನ ನಾನು ನೋಡಿಲ್ಲ, ಅವನು ಯಾರು ಗೊತ್ತಿಲ್ಲ. ಚಪಲವಾದ ಬಾಯಿ ಏನಾದ್ರು ಹೊಂದಿರಬೇಕು ಹೊದರ್ತಾನೆ. ಹೌದು ನಾನು ಪೀಠ ಮಾಡಿಕೊಡ್ತೀನಿ. 10 ಎಕರೆ ಕಾವೇರಿ ಹೊಳೆ ದಡದಲ್ಲಿ ಮಠ ಮಾಡಿಕೊಡ್ತೀನಿ ಎಂದು ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: VIDEO: ‘ಸಿಎಂ ಸೀಟ್‌ ಡಿಕೆಶಿಗೆ ಬಿಟ್ಟು ಕೊಡಿ’- ಕೆಂಪೇಗೌಡ ಜಯಂತಿಯಲ್ಲಿ ಶಾಕ್ ಆದ ಸಿದ್ದು; ಏನಂದ್ರು? 

ಸಚಿವ ರಾಜಣ್ಣನವರಿಗೆ ಸಿದ್ದರಾಮಯ್ಯನವರ ಮೇಲೆ ಪ್ರೀತಿ ಜಾಸ್ತಿ. ಪ್ರೀತಿಗೋಸ್ಕರ ಹೇಳಿರಬಹುದು ಅಷ್ಟೇ. ಡಿ.ಕೆ ಶಿವಕುಮಾರ್ ಒಬ್ಬ ಒಕ್ಕಲಿಗ ಅನ್ನುವ ಕಾರಣಕ್ಕೆ ನಾನು ಹೇಳಿಲ್ಲ. ತೂಕವಾದ ಮನುಷ್ಯರು. ಈಗ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆಗೆ ಇದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಒಂದು ಸಲ ಸಿಎಂ ಸ್ಥಾನ ಸಿಕ್ಕರೆ ಅವರಿಗೆ ಸಂತೋಷ, ಎಲ್ಲರಿಗೂ ಸಂತೋಷ. ರಾಜ್ಯದ ಜನತೆಗೆ ಸಂತೋಷ ಎಂಬುದು ನಮ್ಮ ದೃಷ್ಟಿಯಾಗಿದೆ. ಬಹಳ ದಿನಗಳಿಂದ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅಂತ ಅವರ ಮನದಾಳದಲ್ಲಿ ಇದೆ. ಬೇಗ ಅವರನ್ನ ಮುಖ್ಯಮಂತ್ರಿ ಮಾಡಿದ್ರೆ ಅವರ ಇಚ್ಛೆ ಈಡೇರುತ್ತೆ. ಆಮೇಲೆ ಬೇರೆಯವರ ಆಗಬಹುದು ಅಂತ ಹೇಳಿದ್ದೀನಿ ಎಂದು ಸ್ವಾಮೀಜಿ ತಿಳಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬೆವರು ಸುರಿಸದ ಜೀವನ’- ಸ್ವಾಮೀಜಿಗಳ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ಕೆ.ಎನ್‌ ರಾಜಣ್ಣ; ಹೇಳಿದ್ದೇನು?

https://newsfirstlive.com/wp-content/uploads/2024/06/Minister-KN-Rajanna-On-Swamiji.jpg

Load More