newsfirstkannada.com

10 ಕೆಜಿ ಅಕ್ಕಿ ಕೋಡೋದು ಖಚಿತ; ಮತ್ತೊಂದು ಗ್ಯಾರಂಟಿ ಜಾರಿ ಬಗ್ಗೆ ಸಚಿವ ಮುನಿಯಪ್ಪ ಹೇಳಿದ್ದೇನು?

Share :

Published May 30, 2023 at 10:17am

Update May 30, 2023 at 10:18am

    10 ಕೆಜಿ ಅಕ್ಕಿ ಗ್ಯಾರಂಟಿ ಜಾರಿ ಯಾವಾಗ?

    ಮೋದಿ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಾ?

    ಸಿದ್ದು ಸರ್ಕಾರದ ಗ್ಯಾರಂಟಿ ಪ್ಲಾನ್‌ ಏನು?

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ರೆಡಿಯಾಗ್ತಿದೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಎಂದು ಘೋಷಿಸಿದ ಬೆನ್ನಲ್ಲೇ 10 ಕೆಜಿ ಅಕ್ಕಿ ಕೊಡೋದು ಖಚಿತ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಚಿವ ಕೆ.ಹೆಚ್‌ ಮುನಿಯಪ್ಪ ನೇತೃತ್ವದಲ್ಲಿ ಆಹಾರ ಇಲಾಖಾಧಿಕಾರಿಗಳ ಸಭೆ ನಡೆಸಲಾಯ್ತು. ಬಳಿಕ ಮಾತನಾಡಿದ ಸಚಿವರು, ನಾವು ಈಗಾಗಲೇ ಅನ್ನಭಾಗ್ಯ ಯೋಜನೆ ಘೋಷಿಸಿದ್ದೇವೆ. ಹತ್ತು ಕೆಜಿ ಅಕ್ಕಿ‌ ಕೋಡೋದು ಖಚಿತ. ಆದರೆ ಎಂದಿನಿಂದ ಯೋಜನೆ ಜಾರಿ ಎಂಬ ಬಗ್ಗೆ ತೀರ್ಮಾನ ಮಾಡಿಲ್ಲ. ಯಾವ ರೀತಿ ಹತ್ತು ಕೆಜಿ ಅಕ್ಕಿ ಕೊಡಬೇಕೇಂಬುದರ ಬಗ್ಗೆ ಚರ್ಚಿಸಿದ್ದೇನೆ ಎಂದರು.

ನಾಳೆ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಸಭೆ ಕರೆದಿದ್ದಾರೆ. ಅಲ್ಲಿ ಇದರ ಬಗ್ಗೆ ಚರ್ಚೆ ನಡೆಯಲಿದೆ. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಉಚಿತವಾಗಿ ನೀಡುವ ಯೋಜನೆ ಘೋಷಣೆ ಮಾಡುತ್ತಾರೆ. 10 ಕೆಜಿ ಅಕ್ಕಿ ಯಾವ ರೀತಿಯಲ್ಲಿ ಕೊಡಬೇಕು. ಆಹಾರ ಇಲಾಖೆಗೆ ಹೆಚ್ಚುವರಿ ಆರ್ಥಿಕ ಹೊಡೆತ ಬೀಳಲಿದೆ. ಅದನ್ನು ಹೇಗೆ ಸರಿದೂಗಿಸಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

ಕೇಂದ್ರಕ್ಕೆ 5 ಕೆಜಿ ಅಕ್ಕಿ ಕೊಡಲು ಮನವಿ
10 ಕೆಜಿ ಅಕ್ಕಿ ಉಚಿತವಾಗಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲು ನಿರ್ಧರಿಸಿದೆ. ಸದ್ಯ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 34 ರೂಪಾಯಿ ಅಂತೆ 5 ಕೆಜಿ ಅಕ್ಕಿ ನೀಡುತ್ತಿದೆ. ಅದೇ ಮಾದರಿಯಲ್ಲೇ ಅಕ್ಕಿ ಪೂರೈಕೆ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಲಿದೆ. ಕೇಂದ್ರ ಸರ್ಕಾರವೇ ಕೆಜಿಗೆ 34 ರೂಪಾಯಿ ಅಂತೆ ಅಕ್ಕಿ ಒದಗಿಸಿದರೆ ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ. ಮೊದಲು ಕೇಂದ್ರ ಸರ್ಕಾರದ ಬಳಿ ಈಗ ಯಾವ ದರದಲ್ಲಿ ಕೊಡ್ತಿದೆಯೋ ಅದೇ ದರದಲ್ಲಿ ಅಕ್ಕಿ ಕೊಡುವಂತೆ ಮನವಿ ಮಾಡುತ್ತೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಹೊದ್ರೆ ಟೆಂಡರ್‌ಗೆ ಆಹ್ವಾನ ನೀಡಬೇಕಾಗುತ್ತೆ ಎಂದು ಆಹಾರ ಸಚಿವ ಕೆ.ಹೆಚ್‌ ಮುನಿಯಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಇನ್ನು, ಅಕ್ಕಿ ಎಷ್ಟು ಬೇಕು, ಯಾವ ದಿನಾಂಕದಿಂದ 10 ಅಕ್ಕಿ ಯೋಜನೆ ಜಾರಿ ಎಂಬುದನ್ನ ಸಿಎಂ ಹೇಳುತ್ತಾರೆ ಎಂದಿದ್ದಾರೆ. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡದಿದ್ರೆ ಟೆಂಡರ್ ಕರೆಯುತ್ತೇವೆ. ಪ್ರತಿ ತಿಂಗಳು 2 ಲಕ್ಷ 18 ಸಾವಿರ ಮೆಟ್ರಿಕ್ ಟನ್ ಅಕ್ಕಿ ಖರೀದಿ ಮಾಡಬೇಕು. ಪ್ರತಿ ತಿಂಗಳು ಅಕ್ಕಿ ಖರೀದಿಗೆ 742 ಕೋಟಿ ರೂಪಾಯಿ ಬೇಕಾಗುತ್ತೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

10 ಕೆಜಿ ಅಕ್ಕಿ ಕೋಡೋದು ಖಚಿತ; ಮತ್ತೊಂದು ಗ್ಯಾರಂಟಿ ಜಾರಿ ಬಗ್ಗೆ ಸಚಿವ ಮುನಿಯಪ್ಪ ಹೇಳಿದ್ದೇನು?

https://newsfirstlive.com/wp-content/uploads/2023/05/K-H-Muniyappa-1.jpg

Load More