ಇನ್ನೂ ಮೂರು ಡಿಸಿಎಂ ಸ್ಥಾನಕ್ಕೆ ಸಚಿವರ ಬೇಡಿಕೆ
3 ಡಿಸಿಎಂ ಸೃಷ್ಟಿ ಹಿಂದಿನ ಕಾರಣ ತಿಳಿಸಿದ ಸಚಿವ
ರಾಜ್ಯ ಕಾಂಗ್ರೆಸ್ನಲ್ಲಿ ಸೃಷ್ಟಿಯಾಗುತ್ತಾ ಬಿರುಗಾಳಿ
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಆಡಳಿತದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ಮತ್ತೆ ಮೂರು ಡಿಸಿಎಂ ಹುದ್ದೆ ಸೃಷ್ಟಿಯಾಗುವ ವಿಚಾರ ಸಂಚಲನ ಮೂಡಿಸಿದೆ.
ಡಿ.ಕೆ. ಶಿವಕುಮಾರ್ ಜೊತೆ ಮತ್ತೆ 3 ಡಿಸಿಎಂ ಸ್ಥಾನ ಬೇಕು ಎಂದು ಹೈಕಮಾಂಡ್ ಬಳಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬೇಡಿಕೆ ಇಟ್ಟಿದ್ದಾರಂತೆ. ಅದರ ಮುಂದುವರಿದ ಭಾಗವಾಗಿ ಹೈಕಮಾಂಡ್ ಪತ್ರ ಬರೆಯಲು ರಾಜಣ್ಣ ಮುಂದಾಗಿದ್ದಾರೆ ಎನ್ನಲಾಗಿದೆ. ಸಚಿವರ ನಡೆ ರಾಜ್ಯ ಕಾಂಗ್ರೆಸ್ನಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.
3 ಡಿಸಿಎಂಗೆ ಡಿಮ್ಯಾಂಡ್?
ವೀರಶೈವ, ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಈ ಚುನಾವಣೆ ದೃಷ್ಟಿಯಿಂದ ಹೆಚ್ಚುವರಿಯಾಗಿ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಯಾಗಬೇಕಿದೆ. ವಿಧಾನಸಭೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದೆವು. ಅದರಂತೆ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅಗತ್ಯ ಇದೆ ಎಂದು ಕೆ.ಎನ್.ರಾಜಣ್ಣ ಹೈಕಮಾಂಡ್ಗೆ ಪತ್ರ ಬರೆಯಲು ನಿರ್ಧರಿಸಿದ್ದಾರಂತೆ.
ಎರಡು ತಿಂಗಳ ಹಿಂದೆ ಗೃಹ ಸಚಿವ ಪರಮೇಶ್ವರ್ ಕೂಡ ಆಗ್ರಹ ಮಾಡಿದ್ದರು. ಪರಮೇಶ್ವರ್ ಮಾತಿಗೆ ಸಚಿವ ಎಂ.ಬಿ.ಪಾಟೀಲ್ ಧ್ವನಿಗೂಡಿಸಿದ್ದರು. ಇತ್ತೀಚಿಗೆ ಬಿ.ಕೆ. ಹರಿಪ್ರಸಾದ್ರಿಂದಲೂ ಇದೇ ರೀತಿ ಒತ್ತಾಯ ಕೇಳಿಬಂದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ