ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ ಹಲವರಿಗೆ ಇವತ್ತು ಶಾಕ್!
ಈ ತಿಂಗಳು 25 ಸಾವಿರ ಫಲಾನುಭವಿಗಳಿಗೆ 2 ಸಾವಿರ ಜಮೆ ಡೌಟ್
ಪ್ರತಿ ತಿಂಗಳು 15 ರೊಳಗೆ ಗೃಹಲಕ್ಷ್ಮಿ ಹಣ ಫಲಾನುಭವಿಗೆ ಜಮೆ ಆಗಬೇಕು
ಬೆಂಗಳೂರು: ಪ್ರತಿ ಮನೆ ಯಜಮಾನಿಗೆ 2000 ರೂಪಾಯಿ ಕೊಡುವ ಗೃಹಲಕ್ಷ್ಮಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಚಾಲನೆ ನೀಡಿದೆ. ರಾಜ್ಯದ ಹಲವು ಗೃಹಲಕ್ಷ್ಮಿಯರ ಖಾತೆಗೆ 2000 ರೂಪಾಯಿ ಜಮೆಯೂ ಆಗಿದೆ. ಆದ್ರೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ 69 ಲಕ್ಷ ಫಲಾನುಭವಿಗಳಿಗೆ ಇನ್ನೂ ಹಣ ತಲುಪಿಲ್ಲ. ಈ ತಿಂಗಳು 25,412 ಮನೆ ಯಜಮಾನಿಗೆ 2000 ರೂಪಾಯಿ ಜಮೆ ಆಗೋದೇ ಇಲ್ಲ ಎನ್ನಲಾಗಿದೆ.
ರಾಜ್ಯದಲ್ಲಿ ಇನ್ನೂ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಮಹಿಳೆಯರು ಪರದಾಡುತ್ತಿದ್ದಾರೆ. ಇದರ ಮಧ್ಯೆ ಗೃಹಲಕ್ಷ್ಮಿ ಯೋಜನೆಯ ನೋಂದಣಿಯೇ ಇವತ್ತು ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ರಾಜ್ಯ ಸರ್ಕಾರವೇ ಗೃಹಲಕ್ಷ್ಮಿ ನೋಂದಣಿ ಸ್ಥಗಿತ ಮಾಡಿದ್ದು ಕೆಲ ಕಾಲ ಗೊಂದಲಕ್ಕೂ ಕಾರಣವಾಗಿತ್ತು. ಕೊನೆಗೆ ಗೊಂದಲಗಳು ಬಗೆಹರಿದ ಬಳಿಕ ಮತ್ತೆ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಶುರು ಮಾಡಲಾಗಿದೆ.
ಇದನ್ನೂ ಓದಿ: ದೇವೇಗೌಡರನ್ನ ರಹಸ್ಯವಾಗಿ ಭೇಟಿಯಾದ ಅಮಿತ್ ಶಾ; ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಕಾನಾ? ಏನೇನ್ ಮಾತುಕತೆ ಆಯ್ತು?
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಆಗಿದೆ ಅನ್ನೋ ಈ ವಿಚಾರಕ್ಕೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದರು. ನನಗೆ ಆಶ್ಚರ್ಯ ಆಯ್ತು. ಅದು ಯಾಕೆ ಹಾಗಾಯ್ತು ಅಂತ ಗೊತ್ತಾಗಲಿಲ್ಲ. ನಮ್ಮ ಸೆಕ್ರೆಟರಿ, ಡೈರೆಕ್ಟರ್ ಕರೆದು ಮಾತನಾಡಿದೆ. ಈಗ ಸ್ಲೋ ಆಗಿ ನೊಂದಣಿ ಆಗುತ್ತಿದೆ. ನಮ್ಮ ಇಲಾಖೆಯಿಂದಲೇ ಅಚಾತುರ್ಯ ಆಗಿದೆ. ಅದನ್ನು ಸರಿ ಮಾಡಿದ್ದೇವೆ. ಇದು ನಿರಂತರವಾಗಿ ನಡೆಯುವ ಯೋಜನೆ. ಸಂಬಂಧಿಸಿದ ಎಲ್ಲರಿಗೂ ನೋಟಿಸ್ ಜಾರಿ ಮಾಡಿದ್ದೇವೆ. ಇದು ಸಣ್ಣ ವಿಚಾರ ಅಲ್ಲ. ಯಾರು ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಾ ಇದ್ದಾರೋ ಅವರ ಮೇಲೆ ಕ್ರಮ ಆಗುತ್ತೆ. ಹೊಸದಾಗಿ ನೋಂದಣಿ ಆದವರಿಗೂ ಯೋಜನೆ ಲಾಭ ಸಿಗುತ್ತೆ. ನಿನ್ನೆ ರಾತ್ರಿ 1.8 ಕೋಟಿ ಅಕೌಂಟ್‌ಗೆ ಇಲ್ಲಿಯವರೆಗೆ ಹಣ ಜಮೆ ಆಗಿದೆ. ಬ್ಯಾಂಕ್‌ನಿಂದ ಮಾತ್ರ ಹಣ ಸ್ಲೋ ಆಗಿದೆ. ನಮ್ಮಿಂದ ಹಣ ಈಗಾಗಲೇ ವರ್ಗಾವಣೆ ಆಗಿದೆ. ಸರ್ಕಾರದಿಂದ ಯಾವುದೇ ತೊಂದರೆ ಆಗಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಇದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಹಣ ಎಲ್ಲರಿಗೂ ವರ್ಗಾವಣೆ ಆಗಲಿದೆ ಎಂದಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರದಿಂದ 4500 ಕೋಟಿ ರೂಪಾಯಿಗೆ ಬಿಡುಗಡೆಯಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೆ 1.13 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. ಈಗಾಗಲೇ 44.52 ಲಕ್ಷ ಮಂದಿ 2 ಸಾವಿರ ರೂಪಾಯಿಯನ್ನು ಪಡೆದಿದ್ದಾರೆ. 69.05 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿಲ್ಲ.
‘ಗೃಹಲಕ್ಷ್ಮಿ’ ಚೆಕ್ ಮಾಡೋದೇಗೆ?
ಡಿಬಿಡಿ ಕರ್ನಾಟಕ ಆ್ಯಪ್ ಮೂಲಕ ಡಿಬಿಡಿ ಸ್ಟೇಟಸ್ ಚೆಕ್ ಮಾಡ್ಕೊಳ್ಳಿ
ಮೊಬೈಲ್ ಆಪ್ ನಲ್ಲಿ ಡಿಬಿಡಿ ಕರ್ನಾಟಕ ಆಪ್ ಡೌನ್ ಲೋಡ್ ಮಾಡಿ
ನಿಮ್ಮ ಆಧಾರ್ ನಂಬರ್, ಅರ್ಜಿ ಸಂಖ್ಯೆ ಹಾಕಿದ್ರೆ ನಿಮ್ಮ ಮಾಹಿತಿ ಲಭ್ಯ
ಪ್ರತಿ ತಿಂಗಳು 2,100 ಕೋಟಿ ಹಣ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತಿದೆ. ಪ್ರತಿ ತಿಂಗಳು 15ರೊಳಗೆ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಆದ್ರೆ, ಅರ್ಜಿ ಸಲ್ಲಿಸಿದ್ದ ಮನೆಯೊಡತಿ ಮಾಹಿತಿ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ 29 ಸಾವಿರ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಗ್ಯಾರಂಟಿ ಹಣ ತಲುಪೋದು ಅನುಮಾನ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ