newsfirstkannada.com

ಗೃಹಲಕ್ಷ್ಮಿ ಯೋಜನೆಗೆ ಆರಂಭಿಕ ವಿಘ್ನ.. ಅರ್ಜಿ ಸಲ್ಲಿಕೆ ಸದ್ಯಕ್ಕಿಲ್ಲ, ಇದಕ್ಕೆಲ್ಲ ಕಾರಣ ಏನು ಗೊತ್ತಾ?

Share :

16-06-2023

  4-5 ದಿನ ಅರ್ಜಿ ಸಲ್ಲಿಕೆಗೆ ತಡವಾಗುತ್ತೆಂದು ಹೇಳಿದ ಲಕ್ಷ್ಮಿ ಹೆಬ್ಬಾಳ್ಕರ್

  ಅರ್ಜಿ ಸಲ್ಲಿಕೆ ಮಾಡುವುದಕ್ಕೆ ಯಾವುದೇ ಡೆಡ್​ಲೈನ್​ ಇರಲ್ಲ..!

  ವಿದ್ಯುತ್​ ದರ ಏರಿಕೆಗೆ ಸರ್ಕಾರದ ವಿರುದ್ಧ ಪ್ರತಿಭಟನೆ

ಶಕ್ತಿ ಸಕ್ಸಸ್​​ ಆಗಿದೆ. ಆದ್ರೆ, ಲಕ್ಷ್ಮೀ ಬರೋದಕ್ಕೆ ಕೆಲ ವಿಘ್ನಗಳು ಎದುರಾಗಿವೆ. ಆ್ಯಪ್​ ಅಭಿವೃದ್ಧಿ ಕಾರಣಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದೂಡಲಾಗಿದೆ. ಇತ್ತ, ಕರೆಂಟ್​ ಶಾಕ್​ನಿಂದ ಜನ ಬೆಚ್ಚಿಬಿದ್ದಿದ್ದು, ಆಕ್ರೋಶ ಕಿಚ್ಚು ಹೊತ್ತಿದೆ.

ಕರ್ನಾಟಕದ ಯಾವುದೇ ಮೂಲೆಗೆ ಹೋದ್ರೂ ಗ್ಯಾರಂಟಿಯದ್ದೆ ಚರ್ಚೆ. ಕಾಂಗ್ರೆಸ್​​​ ನೀಡಿದ್ದ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಆದ್ರೆ, ಗೃಹಲಕ್ಷ್ಮಿ ಯೋಜನೆ ಜಾರಿಗೆ ಕೆಲವು ಅಡೆತಡೆಗಳು ಎದುರಾಗಿವೆ. ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಾಕುವ ಯೋಜನೆಗೆ ಗ್ರಹಣ ಹಿಡಿದಿದೆ.

ಗೃಹಲಕ್ಷ್ಮಿ ಆ್ಯಪ್ ಅಭಿವೃದ್ಧಿ ಕಾರಣ ಕೊಟ್ಟ ಸಚಿವೆ ಲಕ್ಷ್ಮೀ

ಮಹಿಳಾ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಇವತ್ತು ಅರ್ಜಿ ಸಲ್ಲಿಕೆ ಆರಂಭ ಅಂತ ಹೇಳಲಾಗಿತ್ತು. ಆದ್ರೆ ಕೆಲ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ 4-5 ದಿನ ತಡವಾಗಲಿದೆ. ಈ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮಿ ಆ್ಯಪ್ ಅಭಿವೃದ್ಧಿ ಕಾರಣದಿಂದ ಅರ್ಜಿ ಸಲ್ಲಿಕೆಗೆ 4-5 ದಿನ ತಡ ಆಗಲಿದೆ ಅಂತ ಹೇಳಿದ್ದಾರೆ. ಇನ್ನು, ಅರ್ಜಿ ಸಲ್ಲಿಕೆಗೆ ಯಾವುದೇ ಡೆಡ್​ಲೈನ್​ ಇರಲ್ಲ. ವರ್ಷಪೂರ್ತಿ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.

‘4-6 ದಿನ ಸಮಯ ಕೇಳಿದ್ದಾರೆ’

ಇ- ಗವರ್​ನನ್ಸ್​ ಸಿಬ್ಬಂದಿ ಇನ್ನು 2 ದಿನ ಸಮಯ ಕೇಳಿದ್ದರು. ಆ ಮೇಲೆ ಅವರು 4 ರಿಂದ 6 ದಿನ ಟೈಮ್​ ಬೇಕು ಎಂದು ಕೇಳಿದ್ದಾರೆ. ಬಾಪೂಜಿ ಸೇವಾ ಕೇಂದ್ರವಿದೆ. ಇದು ಕೂಡ ಬಳಕೆ ಮಾಡಿಕೊಳ್ಳಿಯಂತ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ಇಟ್ಟಿಲ್ಲ. ಈ ಯೋಜನೆಗೆ ಬಗ್ಗೆ ಯಾರಿಗಾದ್ರೂ ಗೊಂದಲಗಳಿದ್ದರೆ, ಸಹಾಯವಾಣಿ ಕುಡ ತೆರೆದಿದ್ದೇವೆ. 1902 ನಂಬರ್​ಗೆ ಕಾಲ್ ಮಾಡಿ ತಮ್ಮ ಗೊಂದಲಗಳನ್ನು ಸರಿಪಡಿಸಿಕೊಳ್ಳಬಹುದು.

ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಏಕಾಏಕಿ 7 ಲಕ್ಷ ರೂಪಾಯಿ ಬಿಲ್​ ನೋಡಿ ಬೆಚ್ಚಿಬಿದ್ದ ಗ್ರಾಹಕ

ಮಂಗಳೂರಿನ ಓರ್ವ ವ್ಯಕ್ತಿಗೆ ನಿಜಕ್ಕೂ ಕರೆಂಟ್​ ಬಿಲ್​​​ ನೋಡಿ ಶಾಕ್​ ಹೊಡೆದಂತಾಗಿದೆ. ಉಳ್ಳಾಲ ಬೈಲುನಲ್ಲಿರುವ ಸದಾಶಿವ ಆಚಾರ್ಯರಿಗೆ 7 ಲಕ್ಷ ಕರೆಂಟ್ ಬಿಲ್​ ಕಂಡು ದಂಗಾಗಿದ್ದಾರೆ. ಮೀಟರ್ ರೀಡರ್ ಯಡವಟ್ಟಿನಿಂದ ಈ ರೀತಿ ಬಿಲ್​ ಬಂದಿದೆ. ಕೇಳಿದ್ದಕ್ಕೆ 99,338 ಯೂನಿಟ್​ ವಿದ್ಯುತ್ ಬಳಸಿದ್ದೀರಿ ಅಂತ ಮೀಟರ್ ರೀಡರ್ ಉಡಾಫೆ ಉತ್ತರ ನೀಡಿ ತೆರಳಿದ್ದಾರೆ. ತಕ್ಷಣ ಮೆಸ್ಕಾಂ ಉಪ ವಿಭಾಗದ ಕಚೇರಿಯನ್ನ ಆಚಾರ್ಯ ಸಂಪರ್ಕಿಸಿದ್ದಾರೆ. ಈ ವೇಳೆ, ಮೀಟರ್ ರೀಡರ್​ ಯಡವಟ್ಟನ್ನ ಮೆಸ್ಕಾಂ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ತಪ್ಪು ಸರಿಪಡಿಸಿ ಹೊಸದಾಗಿ 2,833 ರೂಪಾಯಿ ಬಿಲ್​ನೀಡಿದ್ದಾರೆ.

ಪ್ರತಿತಿಂಗಳು ಬಿಲ್​ ಕಟ್ಟುತ್ತೇವೆ. ಆದರೆ ಈ ತಿಂಗಳ ಬಿಲ್​ ಮಾತ್ರ 7 ಲಕ್ಷ 71 ಸಾವಿರ ಬಂದಿದೆ. ಇವರು ಎಂತಾ ಮೀಟರ್​ ರೀಡಿಂಗ್ ಮಾಡುತ್ತಾರೋ ಗೊತ್ತಿಲ್ಲ. ಮೆಸ್ಕಾಂಗೆ ಹೋಗಿ ನನ್ನ ಮಗ ಕಂಪ್ಲೇಟ್​ ಮಾಡಿದ್ದಾನೆ, ನಮ್ಮ ಬಿಲ್​ ನೋಡಿ ಅವರೇ ಶಾಕ್ ಆಗಿದ್ದಾರೆ. ಅಲ್ಲಿ ರೀಡರ್​ ಅನ್ನು ಕರೆಯುತ್ತೇವೆ. ಆದ್ರೆ ಅವರು ತಪ್ಪಿಸಿಕೊಂಡು ಹೋಗೇ ಬಿಟ್ಟ.

ಸದಾಶಿವ ಆಚಾರ್ಯ, ಉಳ್ಳಾಲದ ನಿವಾಸಿ

ಇತ್ತ, ವಿದ್ಯುತ್ ದರ ಏರಿಕೆ ಖಂಡಿಸಿ ವಿಜಯಪುರ ನಗರದಲ್ಲಿ ಮಹಿಳೆಯರು ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್​ ದರ ದುಪ್ಪಟ್ಟು, 4 ಪಟ್ಟು ಹೆಚ್ಚಿಗೆ ಬಂದಿದ್ದು, ಬಿಲ್ ತುಂಬಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂದಿದ್ದಾರೆ. ಈಗ ನೋಡಿದ್ರೆ ವಿದ್ಯುತ್ ಬಿಲ್​ನಿಂದ ಶಾಕ್ ಆಗಿದೆ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಫ್ರೀ ಕರೆಂಟ್ ಯೋಜನೆ ಘೋಷಣೆ ಮಾಡಿದ್ದೆ ತಡ ಜನರು ಫುಲ್ ಖುಷ್ ಆಗಿದ್ದರು. ಅದರ ಬೆನ್ನಲ್ಲೆ ಬಂದ ಕೊನೆ ತಿಂಗಳ ವಿದ್ಯುತ್ ಬಿಲ್ ನೋಡಿ ಜನ ಶಾಕ್ ಆಗಿದ್ದಾರೆ. ಆದ್ರೆ, ಹಲವು ನಗರಗಳಲ್ಲಿ ಇಂದಿಗೂ ಕಳೆದ ತಿಂಗಳ ವಿದ್ಯುತ್ ಬಿಲ್ ಮಾತ್ರ ಮನೆಗಳಿಗೆ ಬಂದಿಲ್ಲ. ಕಾರಣ ಜನರಿಗೆ ಬೆದರಿದ ಸಿಬ್ಬಂದಿಗಳು ಬಿಲ್ ನೀಡಲು ಹಿಂದೇಟು ಹಾಕ್ತಿದ್ದಾರೆ. ಇದು ಜನರಲ್ಲಿಯು ಒಂದು ರೀತಿ ಗೊಂದಲ ಸೃಷ್ಟಿಸುತ್ತಿದೆ. ಈ ತಿಂಗಳಿಂದಲೆ ನಮಗೆ ಉಚಿತ ವಿದ್ಯುತ್ ಇರಬೇಕು ಅಂತಾ ಕೆಲವರು ತಿಳ್ಕೊಂಡ್ರೆ, ಇಲಾಖೆಯೇ ಬಿಲ್​​ ತಡೆ ಹಿಡಿದ ಮಾಹಿತಿ ಸಿಗ್ತಿದೆ.

ಇದೆಲ್ಲವೂ ಕರೆಂಟ್​​ ಕಥೆಯಾದ್ರೆ, ಇತ್ತ ಶಕ್ತಿ ಯೋಜನೆ ಜಾರಿಯಾಗಿ ನಾರಿಮಣಿಯರೆಲ್ಲ ಖುಷಿ ಖುಷಿಯಾಗಿ ಸರ್ಕಾರಿ ಬಸ್​ ಹತ್ತುತ್ತಿದ್ದಾರೆ. ಆದ್ರೆ, ಈವರೆಗೆ ಇದೇ ಪ್ರಯಾಣಿಕರನ್ನ ಅವಲಂಬಿಸಿದ್ದ ಖಾಸಗಿ ಬಸ್​ ಮಾಲೀಕರು, ಕಂಡಕ್ಟರ್, ಡ್ರೈವರ್​, ಲೋಡರ್​ಗಳ ಬದುಕು ಬೀದಿಗೆ ಬಂದಿದೆ. ಪ್ರಯಾಣಿಕರೇ ಇಲ್ಲದೆ ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿದೆ.
ಗ್ಯಾರಂಟಿಗಳ ಆಟ, ಕೆಲವರಿಗೆ ಪ್ರಾಣಸಂಕಟ ತರಿಸಿದ್ರೆ, ಇನ್ನ ಕೆಲವರಿಗೆ ಸಂಕಷ್ಟಗಳಿಂದ ದೂರಾದ ನೆಮ್ಮದಿ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಲಕ್ಷ್ಮಿ ಯೋಜನೆಗೆ ಆರಂಭಿಕ ವಿಘ್ನ.. ಅರ್ಜಿ ಸಲ್ಲಿಕೆ ಸದ್ಯಕ್ಕಿಲ್ಲ, ಇದಕ್ಕೆಲ್ಲ ಕಾರಣ ಏನು ಗೊತ್ತಾ?

https://newsfirstlive.com/wp-content/uploads/2023/06/SIDDARAMAIAH_DKS.jpg

Load More