newsfirstkannada.com

Breaking News: ‘ಗೃಹ ಲಕ್ಷ್ಮೀ’ ಯೋಜನೆ ಅರ್ಜಿ ಸಲ್ಲಿಕೆಗೆ ಯಾವುದೇ ಕಾಲಮಿತಿ ಇರಲ್ಲ; ಯಾವಾಗಿಂದ ಅರ್ಜಿ ಸ್ವೀಕಾರ..?

Share :

15-07-2023

    ಇದು ‘ಗೃಹ ಲಕ್ಷ್ಮೀ’ ರಾಜ್ಯ ಸರ್ಕಾರದ ಮಹತ್ವದ ಯೋಜನೆ

    ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಬೇಕಾಗಿರುವ ರೂಲ್ಸ್​ ಏನು..?

    ಯೋಜನೆಯ ಲಾಭಕ್ಕಾಗಿ ಮಧ್ಯವರ್ತಿಗಳಿಗೆ ಹಣ ಕೊಟ್ರೆ ಹುಷಾರ್..!

ಬೆಂಗಳೂರು: ‘ಗೃಹಲಕ್ಷ್ಮೀ’ ಯೋಜನೆ ಜಾರಿ ಸಂಬಂಧ ಇವತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗೋಷ್ಟಿ ನಡೆಸಿ ಮಹತ್ವದ ವಿಚಾರಗಳನ್ನು ತಿಳಿಸಿದರು. ಈ ಯೋಜನೆಗೆ ಅರ್ಜಿ ಸ್ವೀಕಾರವು ಜುಲೈ 17 ಅಥವಾ 19ರಿಂದ ಆರಂಭವಾಗಲಿದೆ. ಈ ಯೋಜನೆಯನ್ನು ನಾವು ಕಾಂಗ್ರೆಸ್​ನ ರಾಷ್ಟ್ರೀಯ ನಾಯಕರಿಂದ ಉದ್ಘಾಟನೆ ಮಾಡಿಸಬೇಕು ಅಂದುಕೊಂಡಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳ ಮೂಲಕ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದೇವೆ. ಒಂದು ವೇಳೆ ಅವರು ಒಪ್ಪಿಕೊಂಡರೆ ಅರ್ಜಿ ಸ್ವೀಕಾರ ಜುಲೈ 19 ರಿಂದ ಆರಂಭವಾಗಲಿದೆ. ಇಲ್ಲದಿದ್ದರೆ, ಜುಲೈ 17 ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯಲು ಏನು ಮಾಡಬೇಕು..? 

  • ಈ ಯೋಜನೆಯ ಫಲಾನುಭವಿಗಳು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ
  • ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್‌ಗಳಲ್ಲಿ ಅರ್ಜಿ ಆಹ್ವಾನಕ್ಕೆ ಅವಕಾಶ
  • ಜುಲೈ 17 ಅಥವಾ 19 ರಿಂದ ಅರ್ಜಿ‌ ಆಹ್ವಾನಕ್ಕೆ ಅವಕಾಶ, ಯಾವುದೇ ಕಾಲಮಿತಿ ಇರುವುದಿಲ್ಲ
  • ಜುಲೈ 17ರಿಂದಲೋ 19 ರಿಂದಲೋ ಎಂದು ಇಂದು ಸಂಜೆ ವೇಳೆಗೆ ತಿಳಿಸಲಾಗುತ್ತದೆ
  • ಆಧಾರ್ ಕಾರ್ಡ್​ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿ ಅರ್ಜಿ‌ ಸಲ್ಲಿಕೆ ಮಾಡಬೇಕು
  • ಆ ಮೊಬೈಲ್ ನಂಬರ್‌ಗೆ ಅರ್ಜಿ‌ ಸಲ್ಲಿಕೆ ಮಾಡಲು ಸಮಯ ನಿಗಧಿಯನ್ನು ಮಾಡ್ತೇವೆ
  • ಅದೇ ಸಮಯಕ್ಕೆ ಅರ್ಜಿ ಸಲ್ಲಿಸುವ ಫಲಾನುಭವಿ ಅರ್ಜಿ ಸಲ್ಲಿಕೆಯ ಸೆಂಟರ್​ಗೆ ಬರಬೇಕು
  • ಒಂದು ವೇಳೆ ಆ ಸಮಯದಲ್ಲಿ ಆಗದಿದ್ದರೆ ಪ್ರತಿ ದಿನ ಸಂಜೆ 5 ಗಂಟೆಗೆ ಬರಬೇಕಾಗುತ್ತದೆ

  • ಹೆಚ್ಚಿನ ಮಾಹಿತಿಗಾಗಿ 8147500500 ಸಂಖ್ಯೆಗೆ ಎಸ್‌ಎಂಎಸ್ ಮಾಡಿ ತಿಳಿದುಕೊಳ್ಳಬಹುದು
  • 1902 ಸಹಾಯವಾಣಿ ತೆರೆಯಲಾಗಿದ್ದು, ಇದರ ಮೂಲಕವೂ ಮಾಹಿತಿ ಪಡೆಯಬಹುದು
  • ಈ ಯೋಜನೆಗಾಗಿ ಪ್ರತಿ ಗ್ರಾಮದಲ್ಲೂ ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡುತ್ತೇವೆ
  • ಪ್ರಜಾ ಪ್ರತಿನಿಧಿಗಳಿಗೆ ಅಥವಾ ಮಧ್ಯವರ್ತಿಗಳಿಗೆ ಯಾರೂ ಕೂಡ ಹಣ ಕೊಡುವಂತಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ‘ಗೃಹ ಲಕ್ಷ್ಮೀ’ ಯೋಜನೆ ಅರ್ಜಿ ಸಲ್ಲಿಕೆಗೆ ಯಾವುದೇ ಕಾಲಮಿತಿ ಇರಲ್ಲ; ಯಾವಾಗಿಂದ ಅರ್ಜಿ ಸ್ವೀಕಾರ..?

https://newsfirstlive.com/wp-content/uploads/2023/07/LAXMI_HEBLKAR.jpg

Load More