newsfirstkannada.com

ಬೆಳಗಾವಿ ಜಿಲ್ಲೆ ಇಬ್ಭಾಗ ಆಗೋದು ಪಕ್ಕಾನಾ?; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಸ್ಫೋಟಕ ಸುಳಿವು

Share :

Published June 6, 2023 at 11:49am

    ಅಖಂಡ ಬೆಳಗಾವಿ ಜಿಲ್ಲೆ ಒಂದಲ್ಲ ಎರಡಾಗಬೇಕಾ?

    ಬೆಳಗಾವಿ ಇಬ್ಭಾಗಕ್ಕೆ ಮನಸು ಮಾಡಿದ್ಯಾ ಸರ್ಕಾರ?

    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿಗೆ ಒಪ್ಪಿಗೆ ಸಿಗುತ್ತಾ?

ಬೆಳಗಾವಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಗಡಿ ಜಿಲ್ಲೆ ಬೆಳಗಾವಿ ಇಬ್ಭಾಗ ಆಗುತ್ತಾ ಅನ್ನೋ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಖುದ್ದು ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದು, ಕುಂದಾನಗರಿ ಬೆಳಗಾವಿಯ ರಾಜಕಾರಣ ಗರಿಗೆದರುವಂತೆ ಮಾಡಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಖಂಡ ಬೆಳಗಾವಿ ಜಿಲ್ಲೆ ಇಬ್ಭಾಗ ಆಗಬೇಕು ಅನ್ನೋ ಕೂಗು ಬಹಳ ಹಿಂದಿನಿಂದಲೂ ಇದೆ. ಅಭಿವೃದ್ಧಿ ತ್ವರಿತಗತಿಯಲ್ಲಿ ಆಗಬೇಕು ಅಂದ್ರೆ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು ಎಂದರು.

ಅಭಿವೃದ್ಧಿ ಆಗಬೇಕಂದ್ರೆ ಬೆಳಗಾವಿ ಇಬ್ಭಾಗ ಆಗಬೇಕು. ಅದು ಎಲ್ಲರ ಸಹಮತದಿಂದ ಜಿಲ್ಲಾ ವಿಭಜನೆ ಆಗಬೇಕು. ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ನಾಯಕರಾದ ಪ್ರಕಾಶ್ ಹುಕ್ಕೇರಿ, ಸತೀಶಣ್ಣ ನಮ್ಮಿಂದಷ್ಟೇ ಹೇಳಿಕೆಗಳು ಬಂದ್ರೆ ಅದು ಅಪ್ರಸ್ತುತವಾಗುತ್ತದೆ. ಎಲ್ಲರ ಮನಸ್ಸಿನಲ್ಲೂ ಜಿಲ್ಲೆಯ ಅಭಿವೃದ್ಧಿ ಆಗಬೇಕಿದೆ. ಹೀಗಾಗಿ ಜಿಲ್ಲೆಯ ಇಬ್ಭಾಗದ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹಂತ ಹಂತವಾಗಿ ಚರ್ಚಿಸಿ ಅಭಿವೃದ್ಧಿ ಪರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೆಳಗಾವಿ ಜಿಲ್ಲೆ ಇಬ್ಭಾಗ ಆಗೋದು ಪಕ್ಕಾನಾ?; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಸ್ಫೋಟಕ ಸುಳಿವು

https://newsfirstlive.com/wp-content/uploads/2023/06/Lakshmi-Hebbalkar.jpg

Load More