newsfirstkannada.com

National Education Policy ರದ್ದು: ಆತಂಕದಲ್ಲಿರುವ ಮಕ್ಕಳಿಗೆ, ಪೋಷಕರಿಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು..?

Share :

08-07-2023

    ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕಂಗಾಲ್

    ಹೊಸ ಶಿಕ್ಷಣ ನೀತಿ ಈ ವರ್ಷ ಜಾರಿಯಾಗಲ್ಲ -ಸಚಿವ ಮಧು ಬಂಗಾರಪ್ಪ

    ನಿನ್ನೆ ಬಜೆಟ್​​ನಲ್ಲಿ ಎನ್​ಇಪಿ ರದ್ದು ಮಾಡುವ ಬಗ್ಗೆ ಸಿದ್ದರಾಮಯ್ಯ ಮಾಹಿತಿ

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (NEP)ಯನ್ನು ರದ್ದು ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ, ಎನ್​ಇಪಿ ಅಡಿಯಲ್ಲಿ ಓದುತ್ತಿರುವ ಮಕ್ಕಳು ಹಾಗೂ ಅವರ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಇದೇ ವಿಚಾರಕ್ಕೆ ನ್ಯೂಸ್​​ಫಸ್ಟ್​ ಜೊತೆ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ. ಮಕ್ಕಳಿಗೆ ಸಹಕಾರ ಆಗುವ ವಿಚಾರವನ್ನು ನಾವು ಮಾಡುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಅನಗತ್ಯವಾಗಿ ಒತ್ತಡ ಹೇರಲಾಗುತ್ತಿತ್ತು ಎಂದರು.

ಏನೇ ಬದಲಾವಣೆ ಮಾಡೋದಿದ್ದರೂ, ಮಕ್ಕಳ ಭವಿಷ್ಯಕ್ಕೆ ಹಾನಿಯಾಗುವ ನಿರ್ಧಾರ ತೆಗೆದುಕೊಳ್ಳಲ್ಲ. ಮಕ್ಕಳ ಭವಿಷ್ಯವನ್ನು ಇಟ್ಟುಕೊಂಡೇ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ವರ್ಷ ಹೇಗೆ ಇದೆಯೋ, ಹಾಗೆಯೇ ಇರಲಿದೆ. ಮುಂದಿನ ವರ್ಷ ಮಕ್ಕಳಿಗೆ ಸಹಕಾರ ಆಗುವ ರೀತಿಯಲ್ಲಿ ನಾವು ಬದಲಾವಣೆ ಮಾಡುತ್ತೇವೆ ಅಂತಾ ತಿಳಿಸಿದರು.

ಇದನ್ನೂ ಓದಿ: ಮಕ್ಕಳ ಭವಿಷ್ಯದೊಂದಿಗೆ ರಾಜಕೀಯ; ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು; ವಿದ್ಯಾರ್ಥಿಗಳ ಪಾಡೇನು..?

ಎಲ್ಲಾ ವಿಚಾರಗಳನ್ನೂ ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ಪೋಷಕರು, ಮಕ್ಕಳ ಬ್ಯಾಗ್ ಹೊರೆ, ಟೀಚಿಂಗ್, ಎಕ್ಸಾಂ ಬಗ್ಗೆ ಚರ್ಚೆ ಮಾಡಬೇಕಿದೆ. ಇದೆಲ್ಲವನ್ನೂ ಇಟ್ಟುಕೊಂಡು ಬದಲಾವಣೆ ಮಾಡಬೇಕಿದೆ. ನಾನೀಗ ಈ ಬಗ್ಗೆ ಹೇಳಲೂ ಸಾಧ್ಯವಿಲ್ಲ. ತಜ್ಞರನ್ನು ಇಟ್ಟುಕೊಂಡು ಮಾಡುತ್ತೇನೆ. ನನಗೆ ಒಂದು ವರ್ಷ ಕಾಲಾವಕಾಶ ಇದೆ. ಒಂದು ವರ್ಷದಲ್ಲಿ ಕೂತು ಚರ್ಚೆ ಮಾಡಿ ಬದಲಾವಣೆ ಮಾಡುತ್ತೇವೆ ಎಂದರು. ಹೊಸ ನೀತಿಗೆ ತಜ್ಞರು ಬೇಕಾಗುತ್ತದೆ. ತಜ್ಞರು ತಂಡವು ಒಂದೊಂದು ಪಠ್ಯವನ್ನು ರೆಡಿ ಮಾಡುತ್ತಾರೆ. ಪಠ್ಯದ ಗುಣಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಸಿಎಂ ಮತ್ತು ನಮ್ಮ ನೇತೃತ್ವದಲ್ಲಿ ಟೀಂ ಕೆಲಸ ಮಾಡುತ್ತದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

National Education Policy ರದ್ದು: ಆತಂಕದಲ್ಲಿರುವ ಮಕ್ಕಳಿಗೆ, ಪೋಷಕರಿಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು..?

https://newsfirstlive.com/wp-content/uploads/2023/07/MADHU_BANGARAPPA.jpg

Load More