newsfirstkannada.com

ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ರಿಂದ ಕರ್ನಾಟಕದಲ್ಲಿ ಬೃಹತ್ ಹೂಡಿಕೆ; ಎಂ.ಬಿ ಪಾಟೀಲ್ ಹೇಳಿದ್ದೇನು?

Share :

Published June 18, 2024 at 10:14pm

  ಕರ್ನಾಟಕದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟರ್‌ ಮುತ್ತಯ್ಯ ಮುರಳೀಧರನ್

  ಕ್ರಿಕೆಟ್‌ಗೆ ನಿವೃತ್ತಿ ಬಳಿಕ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮುತ್ತಯ್ಯ

  ಬಂಡವಾಳ ಹೂಡಿಕೆ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಜೊತೆ ಮಹತ್ವದ ಚರ್ಚೆ

ಬೆಂಗಳೂರು: ವಿಶ್ವವಿಖ್ಯಾತ ಸ್ಪಿನ್ ಬೌಲರ್ ಶ್ರೀಲಂಕಾದ ಮಾಜಿ ಕ್ರಿಕೆಟರ್‌ ಮುತ್ತಯ್ಯ ಮುರಳೀಧರನ್ ಅವರು ತಮ್ಮ ಕ್ರಿಕೆಟ್ ಜರ್ನಿಗೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್‌ ಬಳಿಕ ಉದ್ಯಮದಲ್ಲಿ ಮುತ್ತಯ್ಯ ಅವರು ತೊಡಗಿಸಿಕೊಂಡಿದ್ದು, ಈಗಾಗಲೇ ತಮ್ಮ ದೇಶದಲ್ಲಿ ತಂಪು ಪಾನೀಯ ಉತ್ಪಾದನಾ ಘಟಕವನ್ನು ಹೊಂದಿದ್ದಾರೆ. ತಮ್ಮ ವಹಿವಾಟನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಮುರಳೀಧರನ್ ಅವರು ಇದೀಗ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: BREAKING: ದರ್ಶನ್ ಗ್ಯಾಂಗ್‌ ಬಿಡಿಸಲು ಶಾಸಕ, ಸಚಿವರಿಂದ ಭಾರೀ ಯತ್ನ; ಖಡಕ್ SPP ಬದಲಾಗ್ತಾರಾ? 

ಮುತ್ತಯ್ಯ ಮುರಳೀಧರನ್ ಅವರ ಈ ನಿರ್ಧಾರವನ್ನು ಸಚಿವ ಎಂ.ಪಾಟೀಲ್ ಅವರು ಸ್ವಾಗತ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಎಂ.ಬಿ ಪಾಟೀಲ್ ಅವರು ಮುತ್ತಯ್ಯ ಮುರಳೀಧರನ್ ಅವರು ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿರುವುದು ಸಂತೋಷದ ಸಂಗತಿ ಎಂದು ಮಹತ್ವದ ಚರ್ಚೆ ನಡೆಸಿದ್ದಾರೆ.

ಮುರಳೀಧರನ್ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದಾರೆ. ಆರಂಭದಲ್ಲಿ ರೂ. 250 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದ್ದರು. ಆದರೆ ರೂ. 1,000 ಕೋಟಿ ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ ರೂ. 1,400 ಕೋಟಿ ತಲುಪುವ ನಿರೀಕ್ಷೆಗಳಿವೆ. ಇದೇ ಸಂದರ್ಭದಲ್ಲಿ ಧಾರವಾಡದಲ್ಲಿ ಘಟಕ ಸ್ಥಾಪನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಸಣ್ಣ ಪುಟ್ಟ ಸಮನ್ವಯಕ್ಕೆ ಸಂಬಂಧಿಸಿದಂತೆ ಈದಿನ ಚರ್ಚೆಗಳು ನಡೆಯಿತು. ಅಗತ್ಯದ ನೆರವು ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿಗೆ ಸಿಲುಕಿ BA ವಿದ್ಯಾರ್ಥಿನಿ ಸಾವಿಗೆ ಶರಣು; ಕಾರಣವೇನು? 

ಮುತ್ತಯ್ಯ ಮುರಳೀಧರನ್ ಹಾಗೂ ಸಚಿವ ಎಂ.ಬಿ ಪಾಟೀಲ್ ಅವರ ಮಾತುಕತೆಯ ವೇಳೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್, ಆಯುಕ್ತರಾದ ಶ್ರೀ ಮತಿ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ರಿಂದ ಕರ್ನಾಟಕದಲ್ಲಿ ಬೃಹತ್ ಹೂಡಿಕೆ; ಎಂ.ಬಿ ಪಾಟೀಲ್ ಹೇಳಿದ್ದೇನು?

https://newsfirstlive.com/wp-content/uploads/2024/06/Muthaiah-muralidhar-MB-patil-1.jpg

Load More