newsfirstkannada.com

ಜುಲೈ 27ಕ್ಕೆ ಬಂದ್ ಆಗುತ್ತಾ ಬೆಂಗಳೂರು? ಕಾರಣವೇನು? ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಏನಂದ್ರು?

Share :

24-07-2023

    ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್​ಗಳಲ್ಲೇ ಜನ ಸಂಚಾರ!

    ಖಾಸಗಿ ಬಸ್, ಟ್ಯಾಕ್ಸಿ ಮತ್ತು ಆಟೋಗಳತ್ತ ತಲೆ ಹಾಕದ ಜನ

    ಸರ್ಕಾರ ವಿರುದ್ಧ ಬೀದಿಗಿಳಿದ ಟ್ಯಾಕ್ಸಿ ಮತ್ತು ಆಟೋ ಚಾಲಕರು

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಹಂತ ಹಂತವಾಗಿ ಐದು ಗ್ಯಾರಂಟಿಗಳ ಜಾರಿಗೆ ಮುಂದಾಗಿದೆ. ಈಗಾಗಲೇ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಶಕ್ತಿ ಸ್ಕೀಮ್​​ ಜಾರಿಯಾಗಿದ್ದು, ಸರ್ಕಾರಿ ಬಸ್​ಗಳಲ್ಲಿ ಹೆಣ್ಣುಮಕ್ಕಳ ಓಡಾಟ ಹೆಚ್ಚಾಗಿದೆ. ಫ್ರೀ ಬಸ್​​ಗಳಲ್ಲೇ ಜನ ಸಂಚಾರ ಮಾಡುತ್ತಿರೋ ಕಾರಣ ಖಾಸಗಿ ಬಸ್, ಟ್ಯಾಕ್ಸಿ ಮತ್ತು ಆಟೋಗೆ ಆದಾಯ ಕಡಿಮೆಯಾಗಿದೆ. ಹೀಗಾಗಿ 27ನೇ ತಾರೀಕು ಬಂದ್​ ಮಾಡಲು ಖಾಸಗಿ ಬಸ್, ಟ್ಯಾಕ್ಸಿ ಮತ್ತು ಆಟೋ ಸಂಘಟನೆಗಳು ಮುಂದಾಗಿದ್ದವು.

ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಬಸ್, ಟ್ಯಾಕ್ಸಿ ಮತ್ತು ಆಟೋ ಸಂಘಟನೆಗಳು ಜುಲೈ 27ನೇ ತಾರೀಕು ಬಂದ್​ಗೆ ಕರೆ ನೀಡಿದ್ದರು. ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಚಾಲಕ ಸಂಘಟನೆಗಳ ಮುಖಂಡರ ಸಭೆ ನಡೆಯಿತು.

ಸಭೆ ಬಳಿಕ ಮಾತಾಡಿದ ಸಚಿವ ರಾಮಲಿಂಗಾರೆಡ್ಡಿ, ಎಲ್ಲಾ ಸಂಘಟನೆ ಮುಖಂಡರ ಅಹವಾಲು ಆಲಿಸಿದ್ದೇವೆ. ಶಕ್ತಿ ಯೋಜನೆ ಜತೆಗೆ ಹಲವು ಸಮಸ್ಯೆಗಳನ್ನು ನಮ್ಮ ಬಳಿ ಹಂಚಿಕೊಂಡರು. ನಾನು ಒಬ್ಬನೇ ಈ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದಿಲ್ಲ. ಇಂದಿನ ಸಭೆ ಬಗ್ಗೆ ಸಚಿವ ಸಂಪುಟದ ಗಮನಕ್ಕೆ ತರುತ್ತೇನೆ ಎಂದರು.

ಬಂದ್​​ ಮಾಡಬೇಡಿ ಎಂದು ರಾಮಲಿಂಗಾರೆಡ್ಡಿ ಮನವಿ

ಯಾವುದೇ ಕಾರಣಕ್ಕೂ ಜುಲೈ 27ನೇ ತಾರೀಕು ಬಂದ್​​ ಮಾಡದಂತೆ ಮನವಿ ಮಾಡಿದ್ದೇವೆ. 31ನೇ ತಾರೀಕು ಎಲ್ಲರೊಂದಿಗೂ ಪ್ರತ್ಯೇಕ ಸಭೆಗಳನ್ನು ಕರೆದಿದ್ದೇವೆ. ಶಕ್ತಿ ಯೋಜನೆಯಿಂದ ತಮಗಾದ ನಷ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತಾಡಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜುಲೈ 27ಕ್ಕೆ ಬಂದ್ ಆಗುತ್ತಾ ಬೆಂಗಳೂರು? ಕಾರಣವೇನು? ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಏನಂದ್ರು?

https://newsfirstlive.com/wp-content/uploads/2023/07/Ramalinga-Reddy.jpg

Load More