ನಮ್ಮ ಸಿಸ್ಟಮ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದ ಸತೀಶ್
10 kg ಅಕ್ಕಿ ಕೊಡುವುದು ಇನ್ನು 1 ತಿಂಗಳು ತಡವಾಗಬಹುದು
ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬೆಳಗಾವಿ: ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕುವ ಸೇವಾ ಸಿಂಧು ವೆಬ್‌ಸೈಟ್ ಆರಂಭವಾದ ದಿನವೇ ಕೈ ಕೊಟ್ಟಿತ್ತು. ಸರ್ವರ್ ಡೌನ್ ಆಗಿದ್ದು ಸಾಕಷ್ಟು ಜನ ಅರ್ಜಿ ಹಾಕಲು ಪರದಾಡಿದ್ರು. ಈ ತಾಂತ್ರಿಕ ದೋಷಕ್ಕೆ ಕೇಂದ್ರ ಸರ್ಕಾರವೇ ಕಾರಣ. ನಮ್ಮ ಮೆಷಿನ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗಿಯಾದ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು. ನಮ್ಮ ಸರ್ಕಾರದ ಮೆಷಿನ್ ಹ್ಯಾಕ್ ಮಾಡಿ ಕೇಂದ್ರದವರು ಸ್ಟಾಪ್ ಮಾಡಿದ್ದಾರೆ. EVM ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಡಂ ಡಿಪಾರ್ಟ್‌ಮೆಂಟ್ ಕೂಡ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹಾಗಾಗಿ ಗ್ಯಾರಂಟಿ ಯೋಜನೆಗಳ ಜಾರಿ ತಡವಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ನಮ್ಮ ಸಿಸ್ಟಮ್‌ನ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಅದನ್ನ ಸರಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟೇ ಹ್ಯಾಕ್ ಮಾಡಿದ್ರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ. ಗ್ಯಾರಂಟಿ ಯೋಜನೆಗಳ ಜಾರಿ ಒಂದು ತಿಂಗಳು ತಡ ಆಗಬಹುದು ಅದಕ್ಕಿಂತ ಹೆಚ್ಚು ಆಗಲ್ಲ. ಗ್ಯಾರಂಟಿ ಯೋಜನೆಗೆ ಆನ್‌ಲೈನ್‌ನಲ್ಲಿ ಸಮಸ್ಯೆ ಆದ್ರೆ ಕೈಯಿಂದ ಅರ್ಜಿ ಸ್ವೀಕಾರ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಮ್ಮ ಸರ್ಕಾರದ ಮೆಷಿನ್ ಅನ್ನ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹೀಗಾಗಿ ಸರ್ವರ್ ಡೌನ್ ಆಗಿದೆ. EVM ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. #NewsFirstKannada #Newsfirstlive #KannadaNews #Annabhagya #Congressguaranteescheme#Siddaramaiah #KarnatakaCM… pic.twitter.com/jRZSstWajf
— NewsFirst Kannada (@NewsFirstKan) June 20, 2023