newsfirstkannada.com

ವರ್ಗಾವಣೆ ದಂಧೆಗೆ ಹೈ ಬ್ರೇಕ್‌.. PWD ಇಲಾಖೆ ಕ್ಲೀನ್‌ಗೆ ಸತೀಶ್ ಜಾರಕಿಹೊಳಿ ಮಾಸ್ಟರ್ ಪ್ಲಾನ್

Share :

15-07-2023

    ಪ್ರತಿಪಕ್ಷಗಳಿಗೆ ವರ್ಗಾವಣೆ ದಂಧೆಯ ಆರೋಪವೇ ಬ್ರಹ್ಮಾಸ್ತ್ರ!

    PWD ಇಲಾಖೆಯಲ್ಲಿ ಹಲವು ಬದಲಾವಣೆ ತಂದ ಸಚಿವರ ನಡೆ

    ತಮ್ಮ ಇಲಾಖೆ ಕ್ಲೀನ್​ಗೆ ಸತೀಶ್ ಜಾರಕಿಹೊಳಿ ಖಡಕ್ ಸೂಚನೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಮೇಲೆ ಪ್ರತಿಪಕ್ಷಗಳು ವರ್ಗಾವಣೆ ದಂಧೆಯ ಆರೋಪವನ್ನೇ ಬ್ರಹ್ಮಾಸ್ತ್ರವಾಗಿ ಬಳಸುತ್ತಿವೆ. ಕೆಲವು ಸಚಿವರ ಮೇಲೆ ‘ಪೆನ್​​ ಡ್ರೈವ್’ ಅಸ್ತ್ರ ಪ್ರಯೋಗಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಅವರು ಸದನದಲ್ಲಿ ಗಮನ ಸೆಳೆದಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಇಲಾಖೆ ಕ್ಲೀನ್‌ಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಸಚಿವರಾದ ಬಳಿಕ ಸತೀಶ್ ಜಾರಕಿಹೊಳಿ ಅವರು ತಮ್ಮ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಹಲವು ಬದಲಾವಣೆಯನ್ನು ತಂದಿದ್ದಾರೆ. ಲೋಕೋಪಯೋಗಿ ಇಲಾಖೆ ಕ್ಲೀನ್​ಗೆ ಮುಂದಾಗಿರೋ ಸತೀಶ್ ಜಾರಕಿಹೊಳಿ ಅವರು ಮೊದಲ ಹಂತದಲ್ಲಿ ವರ್ಗಾವಣೆ ದಂಧೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ‘ಅರ್ಜೆಂಟ್ ಏನಿದೆ ಬ್ರದರ್​..?’ -‘ಪೆನ್​ಡ್ರೈವ್ ಪ್ರಹಸನ’ದ ಕೌತುಕಕ್ಕೆ ಕುಮಾರಸ್ವಾಮಿ ಮತ್ತೊಂದು ಸ್ಟೇಟ್​ಮೆಂಟ್..!

ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ ತಡೆಗೆ ಆಲೋಚಿಸಿರುವ ಸತೀಶ್ ಜಾರಕಿಹೊಳಿ ಅವರು ಶಾಸಕರ ಶಿಫಾರಸ್ಸು, ಅವಶ್ಯಕತೆ ಆಧರಿಸಿ ವರ್ಗಾವಣೆ ಮಾಡಲಾಗುವುದು. ಮಧ್ಯವರ್ತಿ ಮೂಲಕ ಬರುವ ಅಧಿಕಾರಿಗಳಿಗೆ ನೋ ಎಂಟ್ರಿ ಎಂದಿದ್ದಾರೆ. ವರ್ಗಾವಣೆಗೆ ಹಣ ಪಡೆದ್ರೆ ಗಂಭೀರ ಪರಿಣಾಮದ ಎಚ್ಚರಿಕೆಯನ್ನು ತಮ್ಮ ಆಪ್ತ ಸಹಾಯಕರಿಗೆ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವರ್ಗಾವಣೆ ದಂಧೆಗೆ ಹೈ ಬ್ರೇಕ್‌.. PWD ಇಲಾಖೆ ಕ್ಲೀನ್‌ಗೆ ಸತೀಶ್ ಜಾರಕಿಹೊಳಿ ಮಾಸ್ಟರ್ ಪ್ಲಾನ್

https://newsfirstlive.com/wp-content/uploads/2023/06/SATISH_JARAKIHOLI.jpg

Load More