newsfirstkannada.com

EXCLUSIVE: ‘ನಮ್ಮ ಕೋಟೆ ಛಿದ್ರ ಮಾಡಲು ಆಗಲ್ಲ’- ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಡಿಕೆ ಮೇಲೆ ಸತೀಶ್ ಗುಡುಗು

Share :

20-10-2023

    ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ್ ಹಣಿಯಲು ಪ್ಲಾನ್ ಮಾಡಿದ್ಯಾರು?

    ಇದೆಲ್ಲಾ ಸಕ್ಕರೆ ಖಾಯಿಲೆ ಇದ್ದಂತೆ ಒಮ್ಮೆ ಬಂದರೆ ಕಂಪ್ಲೀಟ್ ಹೋಗೋದಿಲ್ಲ

    4 ತಿಂಗಳ ಬಳಿಕ ಬೆಳಗಾವಿ ಉಸ್ತುವಾರಿ ಸಚಿವ ವೈಲೆಂಟಾಗಲು ಕಾರಣವೇನು?

18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 11 ಮಂದಿ ಕಾಂಗ್ರೆಸ್​​ ಶಾಸಕರಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪದ ಜೊತೆಗೆ ಜಿಲ್ಲಾ ಉಸ್ತುವಾರಿಯಾಗಿರೋ ತಮ್ಮ ಮಾತಿಗೆ ಯಾವುದೇ ಕಿಮ್ಮತ್ತು ನೀಡದ್ದಕ್ಕೆ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ. ಕಾಂಪ್ರಮೈಸ್ ಆಗ್ತಿದ್ದೀನಿ ಅಂದ್ರು ನನ್ನ ಮೌನ ದೌರ್ಬಲ್ಯ ಅಲ್ಲ ಅನ್ನೋ ಸಂದೇಶ ನೀಡಿದ್ದು ಗಮನ ಸೆಳೆದಿದೆ.

ಬೆಳಗಾವಿಯಲ್ಲಿ ನಿಗಮ ಮಂಡಳಿ, ಕಾರ್ಯಾಧ್ಯಕ್ಷರ ನೇಮಕ, ವರ್ಗಾವಣೆ, ಲೋಕಸಭೆ ಚುನಾವಣೆಗೆ ಟಿಕೆಟ್ ಸೇರಿ ಹಲವು ವಿಚಾರಗಳಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡ್ತಿದ್ದಾರೆ ಅಂತ ಸಚಿವ ಸತೀಶ್ ಜಾರಕಿಹೊಳಿ ರೆಬೆಲ್ ಆಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರೋ ತಮ್ಮನ್ನು ಕಡೆಗಣಿಸಿ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಹೆಚ್ಚು ಮನ್ನಣೆ ನೀಡ್ತಿದ್ದಾರೆ ಅಂತ ಬೇಗುದಿ ಹೊರಹಾಕಿದ್ದಾರೆ. ಸೈಲೆಂಟ್ ಆಗಿದ್ದ ಸಚಿವ ಸತೀಶ್​ ಜಾರಕಿಹೊಳಿ ಕಳೆದ 4 ತಿಂಗಳಿಂದ ವೈಲೆಂಟ್ ಆಗಿದ್ಯಾಕೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.

ಸತೀಶ್ ಜಾರಕಿಹೊಳಿ ವೈಲೆಂಟಾಗಿದ್ದೇಕೆ?

1. ಬೆಳಗಾವಿ ವಿಚಾರದಲ್ಲಿ ಡಿಕೆಶಿ ಪದೇ ಪದೇ ಹಸ್ತಕ್ಷೇಪ
2. ಅಧಿಕಾರಿಗಳ ವರ್ಗಾವಣೆಯಲ್ಲಿ ಹೆಬ್ಬಾಳ್ಕರ್ ಹಸ್ತಕ್ಷೇಪ
3. ಜಿಲ್ಲೆಯಲ್ಲಿ ಜಾರಕಿಹೊಳಿ ಪ್ರಭಾವ ಕುಗ್ಗಿಸಲು ಪ್ಲಾನ್
4. ಹೆಬ್ಬಾಳ್ಕರ್ ಕುಟುಂಬವನ್ನ ಪ್ರಭಾವಿಯಾಗಿಸಲು ಡಿಕೆಶಿ ಯತ್ನ
5. ಹೆಬ್ಬಾಳ್ಕರ್ ಪುತ್ರ ಮೃಣಾಲ್​ಗೆ​​ ಎಂಪಿ ಟಿಕೆಟ್ ಕೊಡಿಸಲು ಲಾಬಿ
6. ಜಾರಕಿಹೊಳಿ ವಿರುದ್ಧ ವಿರೋಧಿಗಳನ್ನ ಎತ್ತಿಕಟ್ಟುತ್ತಿರುವ ಡಿಕೆಶಿ

ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ನ್ಯೂಸ್ ಫಸ್ಟ್​​ ಚಾನೆಲ್‌ಗೆ ಎಕ್ಸ್​​ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಅದರಲ್ಲಿ ನಮ್ಮ ಕೋಟೆಯನ್ನು ಯಾರು ಛಿದ್ರ ಮಾಡಲು ಆಗಲ್ಲ. ಪಕ್ಷದಲ್ಲಿ ಬಂಡಾಯ ಇಲ್ಲ, ಗುಂಪು ಇದೆ ಅಷ್ಟೇ. ಬೆಳಗಾವಿ ಕಾಂಗ್ರೆಸ್ ಪಕ್ಷದಲ್ಲೇ ನನ್ನದೇ ಆದ ಶಕ್ತಿ ಇದೆ. ನಾಯಕರ ಮುಸುಕಿನ ಗುದ್ದಾಟ ಸಕ್ಕರೆ ಖಾಯಿಲೆ ಇದ್ದಂತೆ. ಒಮ್ಮೆ ಬಂದರೆ ನಿಯಂತ್ರಣಕ್ಕೆ ತರಬಹುದು ಅಷ್ಟೇ. ಸಂಪೂರ್ಣವಾಗಿ ದೂರವಾಗಲ್ಲ ಎಂದಿದ್ದಾರೆ.

ಬೆಳಗಾವಿ ಭಿನ್ನಮತದ ಬಗ್ಗೆ ಎಚ್ಚೆತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಗೊಂದಲ ಉಂಟು ಮಾಡದಂತೆ ಸಂಪುಟ ಸಭೆಯಲ್ಲಿ ಸಚಿವರಿಗೆ ಕಿವಿಮಾತು ಹೇಳಿದ್ದಾರೆ.

ಸಚಿವರಿಗೆ ಸಿಎಂ ಸೂಚನೆ

1. ನೀವು ಸರ್ಕಾರದ ಭಾಗ, ಗೊಂದಲ ಸೃಷ್ಟಿಸಿದ್ರೆ ಹೇಗೆ?
2. ಸಚಿವರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ
3. ಲೋಕಸಭಾ ಚುನಾವಣೆ ಇದೆ, ತಯಾರಿ ಆಗಬೇಕಿದೆ
4. ಸರ್ಕಾರದಲ್ಲಿ ಗೊಂದಲ ಉಂಟಾದ್ರೆ ಜನತೆ ಕ್ಷಮಿಸಲ್ಲ
5. ಸಚಿವರಾದವರು ಶಾಸಕರ ಸಮಸ್ಯೆಗಳನ್ನ ಕೇಳಬೇಕು
6. ಜನರ ಅಹವಾಲುಗಳನ್ನ ಸ್ವೀಕರಿಸಿ, ಗೊಂದಲ ನಿವಾರಿಸಿ
7. ಸರ್ಕಾರದ ಇಮೇಜ್ ಹೆಚ್ಚಿಸುವ ಕೆಲಸ ಮಾಡಬೇಕು

ಬೆಳಗಾವಿ ಭಿನ್ನಮತ ತಾರಕಕ್ಕೇರಿದ್ದು ಲೋಕಸಭೆ ಚುನಾವಣೆ ಹೊತ್ತಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವ ಲಕ್ಷಣ ಗೋಚರಿಸುತ್ತಿದೆ. ಈ ವಿಚಾರದಲ್ಲಿ ಹೈಕಮಾಂಡ್​​​​​​​​​ ಎಂಟ್ರಿಯಾಗಿ ಭಿನ್ನಮತ ಶಮನ ಮಾಡುವ ಕೆಲಸ ಮಾಡುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

EXCLUSIVE: ‘ನಮ್ಮ ಕೋಟೆ ಛಿದ್ರ ಮಾಡಲು ಆಗಲ್ಲ’- ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಡಿಕೆ ಮೇಲೆ ಸತೀಶ್ ಗುಡುಗು

https://newsfirstlive.com/wp-content/uploads/2023/10/Satish-Jarkiholi-1.jpg

Load More