newsfirstkannada.com

ಪಂಚಮಸಾಲಿ ಜಗದ್ಗುರು ಪೀಠಕ್ಕೆ ಸಚಿವ S.S ಮಲ್ಲಿಕಾರ್ಜುನ ಭೇಟಿ; ವಚನಾನಂದ ಮಹಾಸ್ವಾಮೀಜಿಗಳಿಂದ ಆಶೀರ್ವಾದ

Share :

15-07-2023

  ಪಂಚಮಸಾಲಿ ಜಗದ್ಗುರು ಪೀಠಕ್ಕೆ ಸಚಿವ S.S ಮಲ್ಲಿಕಾರ್ಜುನ ಭೇಟಿ

  ‘ಮಾಡೆಲ್ ಮಲ್ಲಿಕಾರ್ಜುನ’ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು

  ದಾವಣಗೆರೆ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದ ಸ್ವಾಮೀಜಿ

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ಇಂದು ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ಕೊಟ್ಟಿದ್ರು. ತಮ್ಮ ಧರ್ಮಪತ್ನಿಯವರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರ ಜೊತೆಗೂಡಿ ಜಗದ್ಗುರು ಪೀಠಕ್ಕೆ ಆಗಮಿಸಿದ ಸಚಿವರು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಯ ಆಶೀರ್ವಾದ ಪಡೆದರು.

ತೋಟಗಾರಿಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರೂ ಆಗಿದ್ದಾರೆ. ಹೀಗಾಗಿ ಸಚಿವರು ದಾವಣಗೆರೆ ಸಮಗ್ರ ಅಭಿವೃದ್ಧಿ ಕುರಿತು ಮಾತನಾಡಿ ಪೀಠದ ಸಹಕಾರ ಕೋರಿದರು. ಇದೇ ವೇಳೆ ತುಂಗಾರತಿಯ ಪ್ರಗತಿ ಕುರಿತು ವಿವರಗಳನ್ನು ಪಡೆದುಕೊಂಡ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಅದಕ್ಕೆ ಅಗತ್ಯ ಬೆಂಬಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ, ಜಗದ್ಗುರು ಪೀಠಾಧಿಪತಿ ವಚನಾನಂದ ಸ್ವಾಮೀಜಿ, ಎಸ್.ಎಸ್ ಮಲ್ಲಿಕಾರ್ಜುನ ಅವರು ಈ ಹಿಂದೆ ರಾಜ್ಯ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದರು. ಆಗ ದಾವಣಗೆರೆಯನ್ನು ಅಭಿವೃದ್ಧಿಪಡಿಸಿದ ಬಗ್ಗೆ ಮತ್ತು ಅವರನ್ನು ‘ಮಾಡೆಲ್ ಮಲ್ಲಿಕಾರ್ಜುನ’ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು. ಇದನ್ನು ನಾವು ಸ್ಮರಿಸಿದಾಗ ಸಚಿವರು ಹರ್ಷ ವ್ಯಕ್ತಪಡಿಸಿದರು. ಈ ಬಾರಿಯ ಅವರ ಅಧಿಕಾರವಧಿಯಲ್ಲಿ ದಾವಣಗೆರೆ ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದು ಸ್ವಾಮೀಜಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪೀಠದ ಪ್ರಧಾನ ಧರ್ಮದರ್ಶಿ ಶ್ರೀ ಬಿ.ಸಿ ಉಮಾಪತಿಯವರು, ಪ್ರಕಾಶ ಪಾಟೀಲರು, ಚಂದ್ರಶೇಖರ್ ಪೂಜಾರ ಅವರು ದಾವಣಗೆರೆ ಜಿಲ್ಲಾ ಘಟಕ, ಮಹಿಳಾ ಘಟಕ ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪಂಚಮಸಾಲಿ ಜಗದ್ಗುರು ಪೀಠಕ್ಕೆ ಸಚಿವ S.S ಮಲ್ಲಿಕಾರ್ಜುನ ಭೇಟಿ; ವಚನಾನಂದ ಮಹಾಸ್ವಾಮೀಜಿಗಳಿಂದ ಆಶೀರ್ವಾದ

https://newsfirstlive.com/wp-content/uploads/2023/07/S-S-Malikarjun.jpg

Load More