newsfirstkannada.com

‘CM ಕೆಳಗಿಳಿಸೋದು ನಂಗೆ ಗೊತ್ತು’- ಬಿ.ಕೆ ಹರಿಪ್ರಸಾದ್ ಹೊತ್ತಿಸಿದ ಕಿಡಿಗೆ ಜಮೀರ್ ಕೊಟ್ಟ ತಿರುಗೇಟು ಏನು?

Share :

22-07-2023

  ‘ನನಗೆ ಸಿಎಂ ಮಾಡೋದು ಗೊತ್ತು ಕೆಳಗೆ ಇಳಿಸೋದು ಗೊತ್ತು’

  ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಬದಲಾವಣೆಯ ಚರ್ಚೆ ಮುನ್ನೆಲೆಗೆ

  ಬಿ.ಕೆ ಹರಿಪ್ರಸಾದ್‌ ಹೇಳಿಕೆಗೆ ಜಮೀರ್ ಅಹ್ಮದ್ ಖಾನ್ ಕಿಡಿ

ನನಗೆ ಸಿಎಂ ಮಾಡೋದು ಗೊತ್ತು ಕೆಳಗೆ ಇಳಿಸೋದು ಗೊತ್ತು. ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್‌ ನೀಡಿರೋ ಇದೊಂದೇ ಒಂದು ಮಾತು ಕೈ ಪಾಳಯದಲ್ಲಿ ಅಲ್ಲೋಲ, ಕಲ್ಲೋಲಕ್ಕೆ ಕಾರಣವಾಗಿದೆ. ನಾನು ಯಾರ ಬಳಿಯೂ ಭೀಕ್ಷೆ ಬೇಡಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ನಾನು ಬೇರೆ ರಾಜ್ಯಗಳ 5 ಸಿಎಂ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದೇನೆ. ಸಿಎಂ ಮಾಡೋದು ಚೆನ್ನಾಗಿ ಗೊತ್ತಿದೆ, ಕೆಳಗೆ ಇಳಿಸೋದು ಗೊತ್ತಿದೆ. ಹೀಗೆಂದು ಬೆಂಗಳೂರಲ್ಲಿ ನಡೆದ ಈಡಿಗ, ಬಿಲ್ಲವ, ದೀವರ ಸಭೆಯಲ್ಲಿ ಬಿ.ಕೆ ಹರಿಪ್ರಸಾದ್‌ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ.

ಹರಿಪ್ರಸಾದ್ ಕಿಡಿಗೆ ಜಮೀರ್ ತಿರುಗೇಟು

ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪರಮಾಪ್ತ, ಸಚಿವ ಜಮೀರ್ ಅಹ್ಮದ್ ಖಾನ್ ಗರಂ ಆಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವ್ರು, ಮುಖ್ಯಮಂತ್ರಿಯ ಆಯ್ಕೆ ನಾನು, ಹರಿಪ್ರಸಾದ್​ ಯಾರು ಮಾಡೋಕಾಗಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಆಯ್ಕೆ ಹೈಕಮಾಂಡ್​ ಮಾಡುತ್ತೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಸಿಎಂ ಆಯ್ಕೆ ಮಾಡ್ತಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತು -ಸಿದ್ದರಾಮಯ್ಯಗೆ ಬಿ.ಕೆ ಹರಿಪ್ರಸಾದ್ ಎಚ್ಚರಿಕೆ..!

ಕೃಷಿ ಸಚಿವ ಚಲುವರಾಯಸ್ವಾಮಿ ಕೂಡ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಹರಿಪ್ರಸಾದ್​ ಯಾವ ಕಾರಣಕ್ಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಇದು ಅನವಶ್ಯಕ, ಬಹುಶಃ ಹಾಗೆ ಹೇಳಿರೋಕೆ ಸಾಧ್ಯವಿಲ್ಲ. ನಮ್ಮ ಪಾರ್ಟಿಯಲ್ಲಿ ಆ ತರಹದ ಆಲೋಚನೆ‌ ಇಲ್ಲ. ಸಿಎಂ ಸಿದ್ದರಾಮಯ್ಯ ಬಗ್ಗೆ ಯಾವುದೇ ಅಪಸ್ವರ ಇಲ್ಲ. ಸಿಎಂ ಸದೃಢವಾಗಿದ್ದಾರೆ, ಸರ್ಕಾರವು ಸದೃಢವಾಗಿದೆ. ಐದು ಗ್ಯಾರಂಟಿ ಕೊಟ್ಟಿರುವುದೇ ನಮ್ಮ ಪಕ್ಷಕ್ಕೆ ಹೆಗ್ಗಳಿಕೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ಇನ್ನು, ಹರಿಪ್ರಸಾದ್ ಅವರ​ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ತಮ್ಮ ಹೇಳಿಕೆಗೆ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರೇ ಇವತ್ತು ಸ್ಪಷ್ಟನೆ ಕೊಟ್ಟಿದ್ದಾರೆ. ಸಭೆಯಲ್ಲಿ ಕ್ಯಾಮೆರಾಗಳು ಇರಲಿಲ್ಲ ಅಂತಾ ಮಾತಾಡಿದ್ದೇನೆ. ಕ್ಯಾಮೆರಾಗಳು ಇದ್ದಿದ್ದರೆ ಮಾತನಾಡುತ್ತಿರಲಿಲ್ಲ. ನಾನು ಹೇಳಿದ್ದು ನಿಜ, ಅದನ್ನ ಒಪ್ಪಿಕೊಳ್ಳುತ್ತೇನೆ. ಹೇಳಿದ ಮೇಲೆ‌ ನನ್ನ ಮಾತಿಗೆ ಬದ್ಧನಾಗಿರುತ್ತೇನೆ. ಕಾದು ನೋಡಿ,‌ ರಾಜಕಾರಣ ಏನೇನು ಆಗುತ್ತೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘CM ಕೆಳಗಿಳಿಸೋದು ನಂಗೆ ಗೊತ್ತು’- ಬಿ.ಕೆ ಹರಿಪ್ರಸಾದ್ ಹೊತ್ತಿಸಿದ ಕಿಡಿಗೆ ಜಮೀರ್ ಕೊಟ್ಟ ತಿರುಗೇಟು ಏನು?

https://newsfirstlive.com/wp-content/uploads/2023/07/Siddaramaiah-Zameer.jpg

Load More