Advertisment

ಗೋವಿಂದ ಮನೆಯಲ್ಲಿ 20 ದಿನ ಇದ್ದ ಖ್ಯಾತ ಮಿನಿಸ್ಟರ್ ಮಗಳು.. ಶಾಕಿಂಗ್ ವಿಚಾರ ಬಿಚ್ಚಿಟ್ಟ ಸುನೀತಾ; ಏನದು?

author-image
Gopal Kulkarni
Updated On
ಗೋವಿಂದ ಮನೆಯಲ್ಲಿ 20 ದಿನ ಇದ್ದ ಖ್ಯಾತ ಮಿನಿಸ್ಟರ್ ಮಗಳು.. ಶಾಕಿಂಗ್ ವಿಚಾರ ಬಿಚ್ಚಿಟ್ಟ ಸುನೀತಾ; ಏನದು?
Advertisment
  • ಬಾಲಿವುಡ್‌ ನಟ ಗೋವಿಂದ ಮನೆಯಲ್ಲಿ 20 ದಿನ ಇದ್ದಿದ್ದೇಕೆ ಮಿನಿಸ್ಟರ್ ಮಗಳು?
  • ಸಂದರ್ಶನವೊಂದರಲ್ಲಿ ನೆನಪುಗಳನ್ನು ಮೆಲುಕು ಹಾಕಿದ ಗೋವಿಂದ ಪತ್ನಿ ಸುನೀತಾ
  • ಗೋವಿಂದ ಮನೆಯಲ್ಲಿದ್ದ ಮಗಳನ್ನು ಕರೆದುಕೊಂಡು ಹೋಗಲು ಬಂದ ಮಹಾ ಸಚಿವರು

ಮುಂಬೈ: ಬಾಲಿವುಡ್​ ಅಂಗಳದಲ್ಲಿ ನಟ ಗೋವಿಂದ ಒಂದು ಕಾಲದಲ್ಲಿ ಅದ್ಭುತ ಸಿನಿಮಾಗಳನ್ನು ನೀಡಿದವರು. ಅವರ ವಿಶೇಷ ಮ್ಯಾನರಿಸಂ, ವಿಶೇಷ ಶೈಲಿಯ ಡಾನ್ಸ್​ನಿಂದಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ನಟ ಗೋವಿಂದ ದೊಡ್ಡ ಜನಪ್ರಿಯತೆ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು. ಈಗಲೂ ಕೂಡ ಗೋವಿಂದ ನಟನೆಯನ್ನು ಮೆಚ್ಚುವ ಅನೇಕರಿದ್ದಾರೆ. ಆದ್ರೆ ಆ ಒಂದು ಕಾಲಘಟ್ಟದಲ್ಲಿ ಗೋವಿಂದರ ಅಭಿಮಾನಿಗಳು ಯಾವ ಮಟ್ಟಿಗೆ ಅವರನ್ನು ಪ್ರೀತಿಸುತ್ತಿದ್ದ ಎಂಬುದನ್ನು ಗೋವಿಂದ ಪತ್ನಿ ಸುನೀತಾ ಹಳೆಯ ನೆನಪಿನ ಬುತ್ತಿಯನ್ನು ತೆರೆದಿಟ್ಟಿದ್ದಾರೆ.

Advertisment

ಇದನ್ನೂ ಓದಿ: Stop Hindi Diwas: ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್ 

ನಟ ಗೋವಿಂದ ಅವರಿಗೆ ಮಹಿಳಾ ಅಭಿಮಾನಿಗಳು ಹೆಚ್ಚು. ಹೀಗೆಯೇ ಅಭಿಮಾನಿಯೊಬ್ಬರು ನಟ ಗೋವಿಂದ ಮನೆಗೆ ಬಂದು ನಾನು ಮನೆಗೆಲಸ ಮಾಡುತ್ತೇನೆ ಎಂದು ಬಂದು ಅವರ ಮನೆ ಸೇರಿಕೊಳ್ಳುತ್ತಾರೆ. ಆ ಯುವತಿಯನ್ನು ನೋಡಿದ ಸುನಿತಾ ಅವರಿಗೆ ಏನೋ ಒಂದು ಅನುಮಾನ ಬರುತ್ತದೆ. ಹುಡುಗಿ ನೋಡಲು ಒಳ್ಳೆಯ ಮನೆತನದಿಂದ ಬಂದಂತಿದೆ. ಮನೆಗೆಲಸಕ್ಕೆ ಬರುತ್ತೇನೆ ಎಂದು ಮನೆಗೆ ಆಗಮಿಸಿದ ಆಕೆಗೆ ಅಸಲಿಗೆ ಮನೆಗೆಲಸ ಹೇಗೆ ಮಾಡುವುದು ಅಂತಲೇ ಗೊತ್ತಿರುವುದಿಲ್ಲ. ಆದರೂ ಅವರ ಜೊತೆ 20 ರಿಂದ 22 ದಿನಗಳ ಕಾಲ ಇದ್ದು ಹೋಗುತ್ತಾಳೆ. ಕೊನೆಗೆ ಗೊತ್ತಾಗುತ್ತದೆ, ಆ ಯುವತಿ ಮಿನಿಸ್ಟರ್​ ಒಬ್ಬರ ಪುತ್ರಿ ಹಾಗೂ ನಟ ಗೋವಿಂದ ಅವರ ಅಪ್ಪಟ ಅಭಿಮಾನಿಯೆಂದು.

publive-image

ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಜೋಕುಮಾರ ಸ್ವಾಮಿ..!

ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ 90ರ ದಶಕದಲ್ಲಿ ಗೋವಿಂದ ಮನೆಗೆ ಬಂದ ಯುವತಿಯ ನಡೆಯನ್ನು ಕಂಡು ಸುನೀತಾರಿಗೆ ಅನುಮಾನ ಬರಲು ಶುರುವಾಗುತ್ತದೆ. ನಿತ್ಯವೂ ತಡವಾಗಿ ಎದ್ದು ಗೋವಿಂದ ಬರುವವುದನ್ನೇ ಆ ಯುವತಿ ಕಾಯುತ್ತಿರುತ್ತಾಳೆ. ಆಗ ನನ್ನದು ಚಿಕ್ಕ ವಯಸ್ಸು ಹೀಗಾಗಿ ಏನೋ ಒಂದು ಅನುಮಾನ ಬಂದು ಆಕೆಯನ್ನು ಹಿಡಿದು ನಿಜ ಹೇಳು ಯಾರು ನೀನು ಅಂತ ಜೋರು ಮಾಡಿ ಕೇಳಿದಾಗ ಆ ಹುಡುಗಿ ಅಳುತ್ತಲೇ ತನ್ನ ಕುಟುಂಬದ ಮಾಹಿತಿಯನ್ನು ನೀಡಿ ನಾನು ಗೋವಿಂದ ಅವರ ಅಪ್ಪಟ ಅಭಿಮಾನಿ ಅವರಿಗಾಗಿ ಹೀಗೆ ಸುಳ್ಳು ಹೇಳಿ ಬಂದು ನಿಮ್ಮ ಮನೆ ಸೇರಿಕೊಂಡೆ ನಾನು ಮಿನಿಸ್ಟರ್ ಮಗಳು ಎಂದು ಹೇಳಿಕೊಳ್ಳುತ್ತಾರಂತೆ. ಕೊನೆಗೆ ಅವರ ತಂದೆ ನಾಲ್ಕು ಕಾರ್​ಗಳೊಂದಿಗೆ ನಮ್ಮ ಮನೆಗೆ ಬಂದು ತಮ್ಮ ಮಗಳನ್ನು ಕರೆದುಕೊಂಡು ಹೋದರು ಎಂದು ಸುನೀತಾ ಹೇಳಿದ್ದಾರೆ.

Advertisment

ಇದನ್ನೂ ಓದಿ:ಬ್ಲೌಸ್ ಧರಿಸದೇ ಸೀರೆಯುಟ್ಟ ಹಾಟ್​ ಬ್ಯೂಟಿ; ನಿಮಗೆ ಗೊತ್ತಾ ಯಾರು ಈ ಸುಂದರಿ!

ಸುನೀತಾ ಹಾಗೂ ಗೋವಿಂದ 1987ರಲ್ಲಿ ಮದುವೆಯಾಗಿದ್ದರು. ಗೋವಿಂದ ಸಿನಿಮಾಗೆ ಪದಾರ್ಪಣೆ ಮಾಡಿ ಕೇವಲ ಒಂದೇ ವರ್ಷ ಆಗಿತ್ತು. ಅವರು ತಮ್ಮ ಇಬ್ಬರ ಮದುವೆಯನ್ನೂ ಕೂಡ ಮೊದಲ ಮಗು ಆಗುವರೆಗೂ ರಹಸ್ಯವಾಗಿಯೇ ಇಟ್ಟಿದ್ದರು. ಈ ಎಲ್ಲಾ ನೆನಪುಗಳನ್ನು ಗೋವಿಂದ ಪತ್ನಿ ಸುನೀತಾ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment