newsfirstkannada.com

ಖಾಸಗಿ ಬಸ್ ಭೀಕರ ಅಪಘಾತ; ದುರ್ಘಟನಾ ಸ್ಥಳದಲ್ಲೇ ಐವರು ಸಾವು

Share :

28-10-2023

  ಅಪಘಾತದಲ್ಲಿ 26 ಪ್ರಯಾಣಿಕರಿಗೆ ಗಾಯ

  ಡ್ರೈವರ್​ನ ಓವರ್​​ಸ್ಪೀಡ್ ಅಪಘಾತಕ್ಕೆ ಕಾರಣ

  ತನಿಖೆ ಆರಂಭಿಸಿರುವ ಪೊಲೀಸ್ ಅಧಿಕಾರಿಗಳು​

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಖಾಸಗಿ ಬಸ್ ಭೀಕರ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಿರ್ಜಾಪುರ ಮಟ್ವಾರ್​ಗೆ ಬಸ್ ಹೋಗುತ್ತಿತ್ತು. ಮಿರ್ಜಾಪುರದಲ್ಲಿರುವ ಸಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ ಪಲ್ಟಿಯಾಗಿದೆ.

ಬಸ್ಸಿನಲ್ಲಿ ಒಟ್ಟು 31 ಮಂದಿ ಇದ್ದರು

ಬಸ್ಸಿನಲ್ಲಿ ಒಟ್ಟು 31 ಮಂದಿ ಪ್ರಯಾಣಿಸುತ್ತಿದ್ದರು. 26 ಮಂದಿ ಗಾಯಗೊಂಡಿದ್ದಾರೆ. ಪ್ರಯಾಣಿಕರು ನೀಡಿರುವ ಮಾಹಿತಿ ಪ್ರಕಾರ.. ಬಸ್​ ಡ್ರೈವರ್ ಸ್ಪೀಡ್​​ನಲ್ಲಿದ್ದ. ಏಕಾಏಕಿ ತಿರುವು ಬಂದ ಹಿನ್ನೆಲೆಯಲ್ಲಿ ನಿಯಂತ್ರಣ ಸಿಗದೇ ರಸ್ತೆಯಿಂದ ಆಚೆ ಬಂದು ಅಪಘಾತವಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖಾಸಗಿ ಬಸ್ ಭೀಕರ ಅಪಘಾತ; ದುರ್ಘಟನಾ ಸ್ಥಳದಲ್ಲೇ ಐವರು ಸಾವು

https://newsfirstlive.com/wp-content/uploads/2023/10/BUS_ACCIDENT-2.jpg

Load More