ಯುವ ವಿಜ್ಞಾನಿಯನ್ನು ಹಿಂಬಾಲಿಸಿದ ನಾಲ್ವರು ದುಷ್ಕರ್ಮಿಗಳು
ಮಧ್ಯರಾತ್ರಿ 12.45ಕ್ಕೆ ಮಾರಕಾಸ್ತ್ರಗಳಿಂದ ಕಾರಿನ ಗಾಡು ಪುಡಿ, ಪುಡಿ
ಕ್ವಿಡ್ ಕಾರಿನಲ್ಲಿ ಬರ್ತಿದ್ದ ವೇಳೆ ನಾಲ್ವರ ಅಪರಿಚಿತರಿಂದ ಅಟ್ಯಾಕ್
ಬೆಂಗಳೂರು: ಯುವ ವಿಜ್ಞಾನಿಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿರೋ ಘಟನೆ ಮಾದನಾಯಕನಹಳ್ಳಿ ಬಳಿ ನಡೆದಿದೆ. ನಾಲ್ವರು ಅಪರಿಚಿತರು ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಶುತೋಷ್ ಅವರಿದ್ದ ಕಾರನ್ನು ಹಿಂಬಾಲಿಸಿ ಗಾಜನ್ನು ಪುಡಿಗಟ್ಟಿದ್ದಾರೆ. ದುಷ್ಕರ್ಮಿಗಳಿಂದ ಪಾರಾದ ಅಶುತೋಷ್ ಸಿಂಗ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಸೇರಿಕೊಂಡಿದ್ದಾರೆ.
ಕಳೆದ ಆಗಸ್ಟ್ 24ರಂದು ಮಾದನಾಯಕನಹಳ್ಳಿ ರೌತನಹಳ್ಳಿ ಮುಖ್ಯರಸ್ತೆಯಲ್ಲಿ ಯುವ ವಿಜ್ಞಾನಿಯ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಕ್ವಿಡ್ ಕಾರಿನಲ್ಲಿ ಬರ್ತಿದ್ದ ವೇಳೆ ನಾಲ್ಕು ಜನ ಅಪರಿಚಿತರು ಯುವ ವಿಜ್ಞಾನಿಗೆ ಅಟ್ಯಾಕ್ ಮಾಡಿದ್ದಾರೆ. ಕಾರನ್ನು ಹಿಂಬಾಲಿಸಿ ಹಿಂದಿನ ಗ್ಲಾಸ್ ಹೊಡೆದು ಹಾಕಿದ್ದಾರೆ. ದುಷ್ಕರ್ಮಿಗಳಿಂದ ಎಸ್ಕೇಪ್ ಆಗಿರುವ ಅಶುತೋಷ್ ಸಿಂಗ್ ಅವರು ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಗಳನ್ನು ಮಾರಾಟ ಮಾಡಿ ಪ್ರಿಯಕರನೊಂದಿಗೆ ಓಡಿ ಹೋದ ತಾಯಿ.. ಮುಂದೇನಾಯ್ತು?
ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದರ ಹಿಂದಿನ ಕಾರಣ ಏನು ಅನ್ನೋದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಅಶುತೋಷ್ ಸಿಂಗ್ ತಮ್ಮ ಈ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಆಗಸ್ಟ್ 24ರ ಮಧ್ಯರಾತ್ರಿ 12.45ಕ್ಕೆ ಅಪರಿಚಿತರು ನನ್ನ ಕಾರನ್ನು ನಿಲ್ಲಿಸಲು ಯತ್ನಿಸಿದರು. ಮಾರಕಾಸ್ತ್ರಗಳಿಂದ ನನ್ನ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಕೂಡಲೇ ದುಷ್ಕರ್ಮಿಗಳ ಪತ್ತೆ ಹಚ್ಚಿ ಶಿಕ್ಷಿಸಬೇಕು. ಆದಷ್ಟು ಬೇಗ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಲು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ