newsfirstkannada.com

ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​​.. ಭಾರತೀಯ ಕ್ರಿಕೆಟ್​ ಫ್ಯಾನ್ಸ್​ ಕೊಟ್ರು ಸರಿಯಾದ ಗೂಸಾ!

Share :

20-11-2023

    ಮಿಚೆಷ್​ ಮಾರ್ಷ್ ನಡವಳಿಕೆಗೆ ಕ್ರಿಕೆಟ್​ ಫ್ಯಾನ್ಸ್​ ಬೇಸರ

    ಟ್ರೋಫಿ ಮೇಲೆ ಕಾಲಿಟ್ಟು ಉದ್ಧಟತನ ಮೆರೆದ ಮಿಚೆಷ್​ ಮಾರ್ಷ್

    ಟ್ರೋಫಿಗೆ ಕಿಂಚಿತ್ತಾದರು ಗೌರವ ಕೊಡಪ್ಪಾ ಎಂದ ಕ್ರಿಕೆಟ್​ ಫ್ಯಾನ್ಸ್​

ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಷ್​ ಮಾರ್ಷ್​ ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟು ಉದ್ಧಟತನ ಮೆರೆದಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದು, ಕ್ರಿಕೆಟ್​ ಫ್ಯಾನ್ಸ್​ ಕೆಂಡಾಮಂಡಲರಾಗಿದ್ದಾರೆ. ಮಾತ್ರವಲ್ಲದೆ ಕಾಮೆಂಟ್ಸ್​ ಬರೆಯುವ ಮೂಲಕ ತಂಡಕ್ಕೂ ಮತ್ತು ಆಟಗಾರ ಮಿಚೆಲ್​ ಮಾರ್ಷ್​ಗೆ ಸರಿಯಾದ ಗೂಸಾ ಕೊಟ್ಟಿದ್ದಾರೆ.

ವಿಶ್ವಕಪ್​ ಟ್ರೋಫಿ ಗೆದ್ದ ಸಂಭ್ರಮದಲ್ಲೇ ಮಿಚೆಲ್​ ಮಾರ್ಷ್​ ಟ್ರೋಫಿ ಮೇಲೆ ಕಾಲಿಟ್ಟ ಫೋಟೋ ವೈರಲ್​ ಆಗಿದೆ. ಇದನ್ನು ಕಂಡ ಕ್ರಿಕೆಟ್​ ಫ್ಯಾನ್ಸ್​ ‘ ಟ್ರೋಫಿ ಮೇಲೆ ಕಿಂಚಿತ್ತಾದರು ಗೌರವಿರಲಿ’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್​ ಬರೆದಿದ್ದಾರೆ.

ಮತ್ತೊಬ್ಬ ವ್ಯಕ್ತಿ ‘ಕೆಲವು ಹಂತಗಳನ್ನು ದಾಟಿ ಬಂದ ಆಸ್ಟ್ರೇಲಿಗರು ಇದು ತಪ್ಪು’ ಎಂದು ಕಾಮೆಂಟ್​ ಬರೆದಿದ್ದಾರೆ. ಮಗದೊಬ್ಬ ವ್ಯಕ್ತಿ ‘ಭವಿಷ್ಯದಲ್ಲಿ ಅವರು ಖಂಡಿತವಾಗಿಯೂ ಪಾವತಿಸುತ್ತಾರೆ’ ಎಂದು ಕಾಮೆಂಟ್​ ಬರೆದಿದ್ದಾರೆ.

ಇನ್ನು ಅತುಲ್​ ಎಂಬ ಟ್ವಿಟ್ಟಿಗ, ‘ಆತನನ್ನು ಕ್ರಿಕೆಟ್​ನಿಂದ ನಿಷೇಧ ಹೇರಬೇಕು’ ಎಂದರೆ, ಮುಕುಲ್​ ಮಾಥುರ್​ ಎಂಬಾತ ‘ಶೇಮ್​ ಆನ್​ ಯು ಮಿಚೆಲ್​.. ವಿಶ್ವದ ಅತ್ಯುತ್ತಮ ಪ್ರಶಸ್ತಿ ಮೇಲೆ ಗೌರವವಿರಲಿ’ ಎಂದು ಬರೆದಿದ್ದಾನೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​​.. ಭಾರತೀಯ ಕ್ರಿಕೆಟ್​ ಫ್ಯಾನ್ಸ್​ ಕೊಟ್ರು ಸರಿಯಾದ ಗೂಸಾ!

https://newsfirstlive.com/wp-content/uploads/2023/11/Mitchel-Marsch.jpg

Load More