ಮುಗ್ಧ ಮನಸ್ಸಿನ ರಾಶಿಯಾಗಿ ವೀಕ್ಷಕರ ಮನಸ್ಸು ಗೆದ್ದ ಈ ಚಲುವೆ
ಚಿಕ್ಕ ವಯಸ್ಸಿನಲ್ಲೇ ಕಿರುತೆರೆಗೆ ಎಂಟ್ರಿ ಕೊಟ್ಟು ವೈಷ್ಣವಿ ಕಮಾಲ್..!
ತಮಿಳಿನಿಂದ ತೆಲುಗು ವೀಕ್ಷಕರ ಮುಂದೆ ಬರಲು ನಟಿ ವೈಷ್ಣವಿ ಸಜ್ಜು
ಮಿಥುನ ರಾಶಿ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಇದೀಗ ಬಹುಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬೆಳ್ಳಿ ಬೊಂಬೆಯಾಗಿ ಮಿಂಚು ಹರಿಸುತ್ತಿದ್ದಾರೆ ಆಟೋ ರಾಣಿ. ಸದ್ಯ ಇದೀಗ ಮತ್ತೊಂದು ಹೊಸ ಆಫರ್ ವೈಷ್ಣವಿಗೆ ಒಲಿದು ಬಂದಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಮಿಥುನ ರಾಶಿ ಮೂಲಕ ನಟನೆಗೆ ಎಂಟ್ರಿ ಕೊಟ್ಟವರು ನಟಿ ವೈಷ್ಣವಿ. ಮನೆಯ ಜವಾಬ್ದಾರಿ ಹೊತ್ತ ಮುಗ್ಧ ಮನಸ್ಸಿನ ರಾಶಿಯಾಗಿ ವೀಕ್ಷಕರ ಮನಸ್ಸು ಗೆದ್ದರು ಈ ಚಲುವೆ.
ಬಳಿಕ ಮಿಥುನ ರಾಶಿ ತಮಿಳಿಗೆ ರಿಮೇಕ್ ಕೂಡ ಆಯ್ತು. ಅಲ್ಲಿಯೂ ವೈಷ್ಣವಿಗೆ ಅವಕಾಶ ಅರಸಿ ಬಂತು. ತಮಿಳು ಪ್ರೇಕ್ಷಕರು ಅಷ್ಟೇ ಪ್ರೀತಿಯಿಂದ ವೈಷ್ಣವಿಯನ್ನ ಸ್ವಾಗತಿಸಿದ್ದರು. ಇನ್ನು, ತಮಿಳಿನ ನಂತರ ನೆರವಾಗಿ ಮಲಿಯಾಳಂ ಕಿರುತೆರೆಯತ್ತ ಮುಖ ಮಾಡಿದ್ದರು ವೈಷ್ಣವಿ. ಕಣ್ಣಲ್ ಪೂವೂ ಎಂಬ ಧಾರಾವಾಹಿಯಲ್ಲಿ ನಾಯಕಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಥೇಟ್ ಮಲಯಾಳಿಯಂತೆ ಕಾಣುವ ಕನ್ನಡದ ಈ ಬ್ಯೂಟಿ, ಮಲಯಾಳಿ ಜನರ ಫೇವರೇಟ್ ನಟಿಯಾಗಿದ್ದಾರೆ. ಈ ಎಲ್ಲದರ ಜೊತೆಗೆ ತೆಲುಗು ವೀಕ್ಷಕರ ಮನೆಗೂ ಕಾಲಿಡುತ್ತಿದ್ದಾರೆ ವೈಷ್ಣವಿ.
ಹೌದು, ಇದೇ ಮೊದಲ ಬಾರಿಗೆ ತೆಲುಗು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ, ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯದಲ್ಲೇ ಪ್ರೊಮೋ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ಕಿರುತೆರೆಯಲ್ಲಿ ಬಹುಬೇಡಿಕೆಯ ನಟಿಯಾಗಿರುವ ವೈಷ್ಣವಿಗೆ ಮತ್ತಷ್ಟು ಒಳ್ಳೆಯ ಅವಕಾಶಗಳು ಅರಸಿ ಬರಲಿ. ನಮ್ಮ ಕಡೆಯಿಂದ ಅವರ ಮುಂದಿನ ಎಲ್ಲಾ ಪ್ರಾಜೆಕ್ಟ್ಗಳಿಗೂ ಆಲ್ ದಿ ಬೆಸ್ಟ್.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ