Advertisment

ಮಾಜಿ ಸಿಎಂ ಮಗನ ಆಪ್ತನ ಮೇಲೆ ಡೆಡ್ಲಿ ಅಟ್ಯಾಕ್​​.. ಲಾಂಗ್​ನಿಂದ ಕೊಚ್ಚಿ ಗ್ಯಾಂಗ್​​​ ಎಸ್ಕೇಪ್​​

author-image
Ganesh Nachikethu
Updated On
ಮಾಜಿ ಸಿಎಂ ಮಗನ ಆಪ್ತನ ಮೇಲೆ ಡೆಡ್ಲಿ ಅಟ್ಯಾಕ್​​.. ಲಾಂಗ್​ನಿಂದ ಕೊಚ್ಚಿ ಗ್ಯಾಂಗ್​​​ ಎಸ್ಕೇಪ್​​
Advertisment
  • ಬೆಂಗಳೂರಿನಲ್ಲಿ ತಮಿಳುನಾಡು ನಟೋರಿಯಸ್ ರೌಡಿ ಮೇಲೆ ಅಟ್ಯಾಕ್​​
  • ಮಾಜಿ ಸಿಎಂ ಕರುಣಾನಿಧಿ ಪುತ್ರ ಎಂ.ಕೆ ಅಳಗಿರಿ ಆಪ್ತನ ಮೇಲೆ ಹಲ್ಲೆ!
  • ಲಾಂಗ್​​ನಿಂದ ಕೊಚ್ಚಿ ಎಸ್ಕೇಪ್​​ ಆದ ಹಂತಕರು, ರೌಡಿ ಸ್ಥಿತಿ ಗಂಭೀರ

ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಪುತ್ರ ಎಂ.ಕೆ ಅಳಗಿರಿ ಆಪ್ತ ವಿಕೆ ಗುರುಸ್ವಾಮಿ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಬಾಣಸವಾಡಿಯ ಕಮ್ಮನಹಳ್ಳಿ ಸುಖಸಾಗರ್ ಹೊಟೇಲ್​ನಲ್ಲಿ ಟೀ ಕುಡಿಯುವಾಗ ಗುರುಸ್ವಾಮಿಗೆ ಲಾಂಗ್​ನಿಂದ ಹಲ್ಲೆ ನಡೆಸಲಾಗಿದೆ.

Advertisment

ಸದ್ಯ ಗುರುಸ್ವಾಮಿ ತಲೆ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದೆ. ಹೀಗಾಗಿ ಚಿಕಿತ್ಸೆಗಾಗಿ ಗುರುಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ತಮಿಳುನಾಡಿನಿಂದ ಕಾರಿನಲ್ಲೇ ಫಾಲೋ ಮಾಡಿಕೊಂಡು ಬಂದಿದ್ದ ಐವರು ಹಂತಕರು ಈ ಕೃತ್ಯ ಎಸಗಿದ್ದಾರೆ.
ವಿ.ಕೆ ಗುರುಸ್ವಾಮಿ ಮಧುರೈ ಮೂಲದವರು. ಮಧುರೈ ಕಾರ್ಪೊರೇಷನ್‌ ಮಾಜಿ ಅಧ್ಯಕ್ಷ ಆಗಿದ್ದರು. ಕೊಲೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿವಿಧ ಪ್ರಕರಣಗಳಲ್ಲಿ ಗುರುಸ್ವಾಮಿ ಆರೋಪಿ. ತಮಿಳುನಾಡಿನ ನಟೋರಿಯಸ್​ ರೌಡಿ.

ಲಿಟಿಗೇಷನ್ ಇರೋ ಸೈಟ್ ವಿಚಾರವಾಗಿ ಮಾತುಕತೆಗೆ ಬಂದಿದ್ದ. ಹೋಟೆಲ್​ವೊಂದರಲ್ಲಿ ರೂಮ್​ ಮಾಡಿಕೊಂಡು ಇದ್ದ. ಇಡೀ ದಿನ ಮನೆಯೊಂದು ಹುಡುಕಿ ಸೈಟ್​ ಬಗ್ಗೆ ಗುರುಸ್ವಾಮಿ ಮಾತಾಡುತ್ತಿದ್ದರು. ಬ್ರೋಕರ್​ ಜತೆ ಮಾತಾಡುವಾಗ ತಮಿಳುನಾಡು ರಿಜಿಸ್ಟ್ರೇಷನ್​ ಆಗಿರೋ ಕಾರಿನಲ್ಲಿ ಬಂದು ಅಟ್ಯಾಕ್​ ಮಾಡಿದ್ದಾರೆ. ಸದ್ಯ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment