newsfirstkannada.com

KMF ವ್ಯವಸ್ಥಾಪಕ ನಿರ್ದೇಶಕರಾಗಿ ಎಂ.ಕೆ ಜಗದೀಶ್ ನೇಮಕ; ಸದಾ ಜನರ ಸೇವೆಗೆ ಮಿಡಿಯುವ ಅಧಿಕಾರಿ

Share :

28-06-2023

    KMF ವ್ಯವಸ್ಥಾಪಕ ನಿರ್ದೇಶಕರಾಗಿ ಎಂ.ಕೆ ಜಗದೀಶ್ ನೇಮಕ

    ಸದಾ ಜನರ ಸೇವೆಗೆ ಮಿಡಿಯುವ ದಕ್ಷ, ಪ್ರಾಮಾಣಿಕ ಅಧಿಕಾರಿ

    ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸ್ಪಂದಿಸಿರೋ ಆಫೀಸರ್

ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ KMF ವ್ಯವಸ್ಥಾಪಕ ನಿರ್ದೇಶಕರಾಗಿ ಎಂ.ಕೆ ಜಗದೀಶ್ ನೇಮಕವಾಗಿದೆ. ಈ ಹಿಂದೆ ನಿರ್ದೇಶಕರಾಗಿದ್ದ ಸತೀಶ್ ಅವರ ಜಾಗಕ್ಕೆ ಎಂ.ಕೆ ಜಗದೀಶ್ ವರ್ಗಾವಣೆಗೊಂಡಿದ್ದಾರೆ.

ಪ್ರಸ್ತುತ ಕೆಎಎಸ್ ಅಧಿಕಾರಿಗಳ ಸಂಘದ ಉಪಾಧ್ಯಕ್ಷರಾಗಿಯೂ M.K ಜಗದೀಶ್ ಅವರು ಕೆಲಸ ಮಾಡುತ್ತಿದ್ದಾರೆ. ಸದಾ ಜನರ ಸೇವೆಗೆ ಮಿಡಿಯುವ ಅಧಿಕಾರಿ ಜಗದೀಶ್, ಬಹಳಷ್ಟು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸ್ಪಂದಿಸಿದ್ದಾರೆ. ಯಾರೇ ಕಷ್ಟವೆಂದು ಕೇಳಿಕೊಂಡು ಹೋದರೂ ಮಿಡಿಯುವ ಅಧಿಕಾರಿ ಜಗದೀಶ್ ಆಗಿದ್ದಾರೆ.

KMF ವ್ಯವಸ್ಥಾಪಕ ನಿರ್ದೇಶಕರಾಗಿ ಎಂ.ಕೆ ಜಗದೀಶ್ ಅವರು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಬಳಿ ಕೆಲಸ ನಿರ್ವಹಿಸಿದ್ದರು. ತಮ್ಮ ಕೆಲಸದ ಮೂಲಕ ದಕ್ಷತೆಯನ್ನ ತೋರಿಸಿರುವ ಜಗದೀಶ್ ಅವರು ಶಿಸ್ತು, ಪ್ರಾಮಾಣಿಕತೆಯನ್ನ ಮೈಗೂಡಿಸಿಕೊಂಡು ಕೆಲಸ ಮಾಡುವ ದಕ್ಷ ಅಧಿಕಾರಿ ಎಂದು ಕರೆಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

KMF ವ್ಯವಸ್ಥಾಪಕ ನಿರ್ದೇಶಕರಾಗಿ ಎಂ.ಕೆ ಜಗದೀಶ್ ನೇಮಕ; ಸದಾ ಜನರ ಸೇವೆಗೆ ಮಿಡಿಯುವ ಅಧಿಕಾರಿ

https://newsfirstlive.com/wp-content/uploads/2023/06/KMF-MD-Jagadeesh.jpg

Load More