newsfirstkannada.com

ಉದಯನಿಧಿ ಬೆಂಬಲಕ್ಕೆ ನಿಂತ ಎಂ.ಕೆ ಸ್ಟಾಲಿನ್​​​.. ಮಗನ ಹೇಳಿಕೆಯಿಂದ ಕೆಲವರಿಗೆ ಉರಿದಿದೆ ಅಂದ್ರು!

Share :

07-09-2023

    ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿದ್ದ ಉದಯನಿಧಿ

    ಉದಯನಿಧಿ ಬೆನ್ನಿಗೆ ನಿಂತ ಸಿಎಂ ಎಂ.ಕೆ ಸ್ಟಾಲಿನ್​ ಹೇಳಿದ್ದೇನು?

    ಬಿಜೆಪಿ ನಾಯಕರ ವಿರುದ್ಧ ತಮಿಳುನಾಡು ಸಿಎಂ ಕೆಂಡಾಮಂಡಲ!

ಚೆನ್ನೈ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಮಗ ಉದಯನಿಧಿ ಸ್ಟಾಲಿನ್ ​​​ಪರ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​​ ಸಖತ್​ ಬ್ಯಾಟ್​ ಬೀಸಿದ್ದಾರೆ. ಉದಯನಿಧಿ ಹೇಳಿಕೆ ಭಾರೀ ವಿವಾದಕ್ಕೀಡಾದ ಒಂದು ವಾರದ ಬಳಿಕ ಮಾತಾಡಿರೋ ಎಂ.ಕೆ ಸ್ಟಾಲಿನ್​​, ನನ್ನ ಮಗ ಮಾತಾಡಿದ್ದರಲ್ಲಿ ತಪ್ಪೇನಿದೆ? ಎಂದಿದ್ದಾರೆ.

ಉದಯನಿಧಿ ಸನಾತನ ಧರ್ಮದಲ್ಲಿ ಭೋದನೆ ಮಾಡೋ ತಾರತಮ್ಯದ ಬಗ್ಗೆ ಮಾತಾಡಿದ್ದಾರೆ. ದಲಿತ, ಹಿಂದುಳಿದ ವರ್ಗ ಮತ್ತು ಮಹಿಳೆಯರನ್ನು ಮೇಲು ಕೀಳು ಆಧಾರದಲ್ಲಿ ನೋಡುವ ಧರ್ಮದ ವಿರುದ್ಧ ಮಾತಾಡಿದ್ದಾರೆ. ಇದರರ್ಥ ಸನಾತನ ಧರ್ಮದಲ್ಲಿರೋ ಅಸಮಾನತೆ ಹೋಗಬೇಕು ಎನ್ನುವುದು ಬಿಟ್ಟರೆ ಯಾರಿಗೂ ಧಕ್ಕೆ ಮಾಡುವ ಉದ್ದೇಶವಿಲ್ಲ ಎಂದಿದ್ದಾರೆ ಸಿಎಂ ಸ್ಟಾಲಿನ್.

ನಾವು ಚಂದ್ರಯಾನ 3 ಲಾಂಚ್​​ ಮಾಡಿ ಸಕ್ಸಸ್​ ಆಗಿದ್ದೇವೆ. ಈಗಲೂ ಕೆಲವರು ಜಾತಿ ತಾರತಮ್ಯ ಮಾಡುತ್ತಾರೆ. ಧರ್ಮಶಾಸ್ತ್ರಗಳಲ್ಲಿನ ವರ್ಣಾಶ್ರಮ ಪದ್ಧತಿ ಮೇಲೆ ಭೇದಭಾವ ಮಾಡಲಾಗುತ್ತದೆ. ಮಾನವ ಜಗತ್ತಿನ ಹುಟ್ಟಿಗೆ ಕಾರಣವಾದ ಮಹಿಳೆ ಮೇಲೆಯೇ ದೌರ್ಜನ್ಯ ಎಸಗಲಾಗುತ್ತಿದೆ. ಇದರ ವಿರುದ್ಧ ಉದಯನಿಧಿ ಧ್ವನಿ ಎತ್ತಿದ್ದಾರೆ. ಇದು ಕೆಲವು ಬಿಜೆಪಿ ನಾಯಕರಿಗೆ ಸಿಟ್ಟು ತರಿಸಿದೆ ಎಂದರು.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾಲಿನ್​

ಇನ್ನು, ಸನಾತನ ಧರ್ಮದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಉದಯನಿಧಿಗೆ ಕೌಂಟರ್​ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದರು. ಹೀಗಾಗಿ ಮೋದಿಗೆ ತಿರುಗೇಟು ನೀಡಿರುವ ಸಿಎಂ ಎಂ.ಕೆ ಸ್ಟಾಲಿನ್​, ಪ್ರಧಾನಿ ತಮಿಳುನಾಡು ಇತಿಹಾಸದ ಬಗ್ಗೆ ಓದಲಿ. ಸನಾತನ ಧರ್ಮದಲ್ಲಿ ಆಗುತ್ತಿರೋ ಅನ್ಯಾಯದ ಅರಿವಿಲ್ಲದೆ ಮೋದಿ ಮಾತಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದಯನಿಧಿ ಬೆಂಬಲಕ್ಕೆ ನಿಂತ ಎಂ.ಕೆ ಸ್ಟಾಲಿನ್​​​.. ಮಗನ ಹೇಳಿಕೆಯಿಂದ ಕೆಲವರಿಗೆ ಉರಿದಿದೆ ಅಂದ್ರು!

https://newsfirstlive.com/wp-content/uploads/2023/07/MK-Stalin.jpg

Load More