newsfirstkannada.com

ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ.. ಈ ಬಗ್ಗೆ ಬಿಎಸ್​​ವೈ ಪುತ್ರಿ ಅರುಣಾ ದೇವಿ ಏನಂದ್ರು..?

Share :

10-11-2023

    ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಮಾಜಿ ಸಿಎಂ ಪುತ್ರ

    ಸಹೋದರ ಬಗ್ಗೆ ಅರುಣಾ ದೇವಿ ಅವರು ನ್ಯೂಸ್​ಫಸ್ಟ್​ಗೆ ಹೇಳಿದ್ದೇನು?

    ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕ ಹಿನ್ನೆಲೆ, ನಿವಾಸದಲ್ಲಿ ಸಂಭ್ರಮ

ಬೆಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಿಎಸ್​ವೈ ಅವರ ಪುತ್ರ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ವಿಜಯೇಂದ್ರ ಅವರು ನೇಮಕವಾದ ಹಿನ್ನೆಲೆಯಲ್ಲಿ ಬಿಎಸ್​ವೈ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲೇ ಅವರ ಸಹೋದರಿ ಅರುಣಾ ದೇವಿಯವರು ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ್ದಾರೆ.

ಅರುಣಾ ದೇವಿಯವರು ಮಾತನಾಡಿ, ಬಿ.ವೈ ವಿಜಯೇಂದ್ರ ಅವರಿಗೆ ಹೈಕಮಾಂಡ್ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ನಮ್ಮ ತಂದೆಯವರ ಜವಾಬ್ದಾರಿಯನ್ನು ನೋಡಿಕೊಂಡು ಬಂದಿರುವ ವಿಜಯೇಂದ್ರ, ಅವರ ತಂದೆಯಷ್ಟೇ ಯಶಸ್ವಿಯಾಗಿ ಕೆಲಸ ಮಾಡುತ್ತಾರೆ. ಮುಂಬರುವ ಲೋಕಸಭೆ ಎಲೆಕ್ಷನ್​ನಲ್ಲಿ ಎಲ್ಲರೊಂದಿಗೆ ಬೆರೆತು ಬಹುದೊಡ್ಡ ಗೆಲುವನ್ನು ಪಕ್ಷಕ್ಕೆ ತಂದು ಕೊಡುತ್ತಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲೇ ಜವಾಬ್ದಾರಿ ನೀಡಿರುವುದು ನಮಗೆ ಸಂತಸ ತಂದಿದೆ ಎಂದಿದ್ದಾರೆ.

ಯಾರು ನೇಮಕ ಆಗುತ್ತಾರೆ ಎಂದು ಖಂಡಿತವಾಗಿ ಗೊತ್ತಿರಲಿಲ್ಲ. ಮನೆ ಬಳಿ ವಾಕ್ ಮಾಡುವಾಗ ಈ ಸುದ್ದಿ ಕೇಳಿ ತುಂಬಾ ಖುಷಿಯಾಯಿತು. ಡಾಲರ್ಸ್ ಕಾಲೋನಿಯ​ ದವಳಗಿರಿ ಮನೆಯಲ್ಲಿ ಎಲ್ಲರೂ ಇದ್ದಾರೆ. ಜವಾಬ್ದಾರಿಯನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಅಪ್ಪ, ವಿಜಯೇಂದ್ರ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.

ಇದನ್ನು ಓದಿ: BREAKING: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ ವಿಜಯೇಂದ್ರ ನೇಮಕ

ರಾಜ್ಯದಲ್ಲಿ ಯಾರಾದ್ರೂ ಜನರಿಗೆ ಒಳ್ಳೆಯದು ಮಾಡಿದರೆ ಸಾಕು. ಆದ್ರೆ ಯಾರು ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಗೊತ್ತಿರಲಿಲ್ಲ. 6-7 ತಿಂಗಳ ಹಿಂದೆ ಈ ಬಗ್ಗೆ ಅಂದುಕೊಂಡಿದ್ದೇವು. ಆ ಮೇಲೆ ಇದರ ಬಗ್ಗೆ ಏನೆಂದು ಕೂಡ ಗೊತ್ತಿರಲಿಲ್ಲ. ಸಡನ್ ಆಗಿ ಈ ಸಂತಸದ ವಿಷ್ಯ ಕೇಳಿದಾಗ ತುಂಬಾ ಖುಷಿ ಎನಿಸಿತು. ಅಧಿಕಾರ ಅನ್ನುವುದಕ್ಕಿಂತ ಇದೊಂದು ಹಾಟ್​ ಸೀಟ್ ಆಗಿದೆ. ಅದನ್ನು ಸೂಕ್ತವಾಗಿ ನಿರ್ವಹಿಸಬೇಕು. ಅನುಭವ ಪಡೆದು ರಾಜಕೀಯದಲ್ಲಿ ಓಡಬೇಕು. ಈಗೀಗ ವಿಜಯೇಂದ್ರ ಅವರು ಎಲ್ಲರ ಜೊತೆ ಬೆರೆತು ಕೋಪ ಮಾಡಿಕೊಳ್ಳದೇ ಸಾಗುತ್ತಿದ್ದಾರೆ. ಅದೇ ಅವರಿಗೆ ಒಳ್ಳೆಯದು ಮಾಡುತ್ತದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ.. ಈ ಬಗ್ಗೆ ಬಿಎಸ್​​ವೈ ಪುತ್ರಿ ಅರುಣಾ ದೇವಿ ಏನಂದ್ರು..?

https://newsfirstlive.com/wp-content/uploads/2023/11/BY_VIJAYENDRA.jpg

Load More