newsfirstkannada.com

VIDEO: ನನ್ನ ತಂದೆ-ತಾಯಿಗೆ ಬಂದ ಸ್ಥಿತಿ ಯಾರಿಗೂ ಬರಬಾರದು; ಶಾಸಕ ಪ್ರದೀಪ್ ಈಶ್ವರ್​ ಭಾವುಕ

Share :

12-09-2023

    ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್​ ಆಂಬುಲೆನ್ಸ್ ಸೇವೆಗೆ ಚಾಲನೆ

    ಸ್ವಂತ ಖರ್ಚಿನಲ್ಲಿ ಆಂಬುಲೆನ್ಸ್​ಗಳನ್ನು ಖರೀದಿಸಿದ ಪ್ರದೀಪ್ ಈಶ್ವರ್

    ತಾಯಿ ಹುಟ್ಟುಹಬ್ಬದ ನಿಮಿತ್ತ ಜನತೆಗೆ 5 ಆಂಬುಲೆನ್ಸ್​ಗಳು ಸದಾ ಸೇವೆಗೆ

ಚಿಕ್ಕಬಳ್ಳಾಪುರ: ತನ್ನ ತಾಯಿಯ ಹುಟ್ಟುಹಬ್ಬದ ನೆನಪಿಗಾಗಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು 5 ಆಂಬುಲೆನ್ಸ್​​ಗಳ ಸೇವೆಗೆ ಚಾಲನೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬೋಗನಂದೀಶ್ವರ ದೇವಾಲಯದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ತನ್ನ ಬೆಂಬಲಿಗರೊಂದಿಗೆ ಪ್ರದೀಪ್ ಈಶ್ವರ್ ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನು ಓದಿ: ಈತ ಅಂತಿಥಾ ಹ್ಯಾಕರ್​​ ಅಲ್ಲ, ಬರೋಬ್ಬರಿ 4.16 ಕೋಟಿ ಮೌಲ್ಯದ ವಸ್ತುಗಳನ್ನು ಹ್ಯಾಕ್​ ಮಾಡಿದ್ದ ಆಸಾಮಿ! ಅರೆಸ್ಟ್ ಆಗಿದ್ದು ಹೇಗೆ ಗೊತ್ತಾ?

ಶಾಸಕ ಪ್ರದೀಪ್ ಈಶ್ವರ್ ಅವರು ಅಮ್ಮನ ಹೆಸರಿನಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಖರೀದಿಸಿರುವ 5 ಆಂಬುಲೆನ್ಸ್​​ಗಳನ್ನ ನಿಲ್ಲಿಸಿ ಪೂಜೆ ಸಲ್ಲಿಸುವ ಚಾಲನೆ ನೀಡಿದರು. ಈ ಕುರಿತು ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ತನ್ನ ತಂದೆ ತಾಯಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು. ಹಾಗಾಗಿ ಯಾರ ತಂದೆ ತಾಯಿಗಳಿಗೂ ಈ ರೀತಿ ಆಗಬಾರದು ಅಂತ ಸ್ವಂತ ಖರ್ಚಿನಲ್ಲಿ ಆಂಬುಲೆನ್ಸ್​​ಗಳನ್ನ ನೀಡುತ್ತಿದ್ದೇವೆ.

ಹೀಗೆ ಮಾತು ಮುಂದುವರೆಸಿದ ಶಾಸಕ ಪ್ರದೀಪ್ ಈಶ್ವರ್, ಆಂಬುಲೆನ್ಸ್ ಜೊತೆಗೆ ನಿರ್ವಹಣೆ ವೆಚ್ಚ ಎಲ್ಲವನ್ನೂ ತಾನೇ ಭರಿಸುತ್ತಿದ್ದೇನೆ. ತಿಂಗಳಿಗೆ 10 ಲಕ್ಷ ರೂಪಾಯಿ ಖರ್ಚು ಆಗುತ್ತದೆ. ದಿನದ 24 ಗಂಟೆ ನಮ್ಮ ಆಂಬುಲೆನ್ಸ್ ಸೇವೆ ಲಭ್ಯವಿದ್ದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆ 08024413333 ಸಂಖ್ಯೆಯ ಹೆಲ್ಪ್​ಲೈನ್​ಗೆ ಕರೆ ಮಾಡಿದರೆ ತಮ್ಮ ಸಿಬ್ಬಂದಿ ಕೂಡಲೇ ಸ್ಪಂದಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ರಾಜ್ಯದಲ್ಲಿ ಯಾವೊಬ್ಬ ಶಾಸಕರೂ ಪ್ರದೀಪ್ ಈಶ್ವರ್ ರೀತಿಯಲ್ಲಿ ಜನಸೇವೆಯ ಕೆಲಸ ಮಾಡಿಲ್ಲ, ಪ್ರದೀಪ್​ಗೆ ಮುಂದೆ ಉಜ್ವಲ ಭವಿಷ್ಯ ಇದೆ ಎಂದು ಹಾಡಿ ಹೊಗಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನನ್ನ ತಂದೆ-ತಾಯಿಗೆ ಬಂದ ಸ್ಥಿತಿ ಯಾರಿಗೂ ಬರಬಾರದು; ಶಾಸಕ ಪ್ರದೀಪ್ ಈಶ್ವರ್​ ಭಾವುಕ

https://newsfirstlive.com/wp-content/uploads/2023/09/pradeep-2.jpg

Load More