‘ದೋಸ್ತಿ ಮಾಡ್ತಿರೋ JDSನದ್ದು ಮತ್ಲಬಿ ರಾಜಕಾರಣ’
‘ನೀನೊಂದು ಬಗೆದರೆ ದೈವ ನಿನಗೆ ನೂರು ಬಗೆದೀತು’
‘ಅಂತಹ ಅವಶ್ಯಕತೆ ಭಾರತೀಯ ಜನತಾ ಪಕ್ಷಕ್ಕೆ ಇಲ್ಲ’
ರಾಜ್ಯದಲ್ಲಿ ಮೈತ್ರಿ ಪರ್ವ ಆರಂಭ ಆಗ್ತಿದೆ. ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ತೀರ್ಮಾನ ಮಾಡಲು ಬಿಜೆಪಿ ಕಟ್ಟಾಳು ಯಡಿಯೂರಪ್ಪ ದೆಹಲಿ ಯಾತ್ರೆ ಮಾಡಿದ್ದಾರೆ. ಡೆಲ್ಲಿಯಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ದೋಸ್ತಿಗೆ ಅಂತಿಮ ಮುದ್ರೆ ಒತ್ತಲು ಮುಂದಾಗಿದ್ದಾರೆ. ಮೈತ್ರಿ ಮಾತುಕತೆಗೆ ಬಿಜೆಪಿಯಲ್ಲೇ ಅಪಸ್ವರ ಎದ್ದಿದೆ. ವಿಧಾನಸಭಾ ಕದನದಲ್ಲಿ ದಳಪತಿ ವಿರುದ್ಧ ತೊಡೆ ತಟ್ಟಿದ್ದ ನಾಯಕನೇ ದೋಸ್ತಿಯೇ ಬೇಡ ಎಂಬ ಹಠಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.
ದಳದ ಜತೆ ಮೈತ್ರಿಗಾಗಿ ಬಿಜೆಪಿ ಹೈಕಮಾಂಡ್ ಆಸಕ್ತಿ ಹೊಂದಿದೆ. ಇತ್ತ ರಾಜ್ಯ ನಾಯಕರಲ್ಲೂ ಇದೇ ಅಭಿಪ್ರಾಯ ಇದೆ.. ಕಳೆದ ಬಾರಿ ಎದ್ದ ಅಲೆಯಲ್ಲಿ ತೇಲಿದ್ದ ಬಿಜೆಪಿ, ಈ ಬಾರಿ ಆ ನಿರೀಕ್ಷೆಯಲ್ಲಿ ಇದ್ದಂತಿಲ್ಲ. ಹೀಗಾಗಿ ಜೆಡಿಎಸ್ ಜೊತೆಗೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳಲು ಒಡಂಬಡಿಕೆ ಸಿದ್ಧಪಡಿಸ್ತಿದೆ. ಈ ಬೆನ್ನಲ್ಲೆ ರಾಜ್ಯ ಬಿಜೆಪಿ ಭೀಷ್ಮ, ಮಾಜಿ ಸಿಎಂ ಯಡಿಯೂರಪ್ಪ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದಾರೆ. ಆದ್ರೆ, ಲೋಕಸಭಾ ಚುನಾವಣೆಗೆ ದೋಸ್ತಿಯನ್ನೇ ಆಸ್ತಿ ಮಾಡಿಕೊಳ್ಳಲು ಮುಂದಾಗಿರೋ ಕಮಲಕ್ಕೆ ಸ್ವಪಕ್ಷದ ನಾಯಕನಿಂದ ಅಪಸ್ವರ ಕೇಳಿಬಂದಿದೆ.
ಜೆಡಿಎಸ್ ಜೊತೆ ‘ಮೈತ್ರಿ’ಗೆ ದೆಹಲಿಯಲ್ಲಿ ಬಿಎಸ್‌ವೈ ಸರ್ಕಸ್
ಪ್ರೀತಂಗೌಡ.. ವಿಧಾನಸಭಾ ಚುನಾವಣೆಯಲ್ಲಿ ದಳಪತಿಗಳ ವಿರುದ್ಧ ತೊಡೆತಟ್ಟಿದ್ದ ನಾಯಕ. ಜೆಡಿಎಸ್ ಕುಟುಂಬದ ವಿರುದ್ಧ ಸಿಂಗಲ್ ಆಗಿ ಸೆಟೆದುನಿಂತಿದ್ದ ಮಾಜಿ ಶಾಸಕ. ಆದ್ರೀಗ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ನಾಯಕರ ದೋಸ್ತಿಯ ಆಟ ಪ್ರೀತಂಗೌಡಗೆ ಹಿಡಿಸದಾಗಿದೆ. ಶತ್ರುಗಳ ಜೊತೆ ಮತ್ತೆ ದೋಸ್ತಿ ಮಾಡಿ ಪ್ರಚಾರ ಮಾಡೋದು ಹಾಸನದ ಕೇಸರಿ ಕಲಿಗೆ ಕುತ್ತಿಗೆಗೆ ಬಂದಿದೆ. ಹೀಗಾಗಿ ಮೈತ್ರಿಯ ಮಾತುಕತೆ ಬಗ್ಗೆ ಸಿಡಿದೆದ್ದಿದ್ದಾರೆ. ದಳದ ಜೊತೆಗಿನ ದೋಸ್ತಿಯ ಆಟಕ್ಕೆ ಅಪಸ್ವರದ ಮಾತಾಡಿದ್ದಾರೆ.
ನಿರ್ಧಾರ ತೆಗೆದುಕೊಳ್ಳುವಂತಹ ನಾಯಕರು ಯಾರೂ ಕೂಡ ಮೈತ್ರಿ ಬಗ್ಗೆ ಮಾತನ್ನಾಡಿಲ್ಲ. ಮೈತ್ರಿ ಎಂದು ಯಾರು ಹೇಳಿದ್ದಾರೆ ಅನ್ನೋದನ್ನು ಮೊದಲು ಗಮನಿಸಬೇಕು. ಯಾರಿಗೋ ಒಬ್ಬರಿಗೆ ಕಷ್ಟ ಇದೆ. ಅವರು ಮೈತ್ರಿ ಎಂದು ಮಾತನ್ನಾಡಿದ್ದಾರೆ. ಮೈತ್ರಿ ಆಗಬೇಕು ಎಂದು ಅವರೇ ಹೇಳಿದ್ದಾರೆ. ಅದಕ್ಕೆ ಕಾರಣ ನಮ್ಮ ಪಕ್ಷವನ್ನು ಉಳಿಸಿಕೊಳ್ಳಬೇಕು, ಕಾರ್ಯಕರ್ತರು ಉಳಿಸಿಕೊಳ್ಳಬೇಕು ಎಂದು ಅವರೇ ಪ್ರಸ್ತಾಪ ಮಾಡಿದ್ದಾರೆ. ಅವರ ಪಕ್ಷ, ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದರೆ ಅದು ಮತ್ಲಬಿ ರಾಜಕಾರಣ ಆಗುತ್ತದೆ. ಅಂತಹ ಅವಶ್ಯಕತೆ ಭಾರತೀಯ ಜನತಾ ಪಕ್ಷಕ್ಕೆ ಇಲ್ಲ-ಪ್ರೀತಂಗೌಡ, ಬಿಜೆಪಿ ಮಾಜಿ ಶಾಸಕ
ಕಾರ್ಯಕರ್ತರ ಉಳಿವಿಗಾಗಿ ಮೈತ್ರಿ ಅಂತ ಮಾತಿನ ಮಳೆ ಸುರಿಸಿದ ಹಾಸನ ಮಾಜಿ ಶಾಸಕ ಪ್ರೀತಂಗೌಡ, ಪಕ್ಷ ಉಳಿಸಿಕೊಳ್ಳಲು ದೋಸ್ತಿ ಮಾಡಿದ್ರೆ ಅದು ಮತ್ಲಬಿ ರಾಜಕಾರಣ ಅಂತ ಕಿಡಿಕಾರಿದ್ರು.. ಅಲ್ಲದೇ ಅವರ ಜೊತೆ ಕೈಜೋಡಿಸುವ ಪರಿಸ್ಥಿತಿ ನಮಗೆ ಬಂದಿಲ್ಲ ಅಂತ ಗುಡುಗಿದ್ರು.
ಹಾಸನದಲ್ಲಿ ಸೋಲಿಸಿದ ಹೆಚ್‌ಡಿಕೆ ಬಗ್ಗೆ ಪ್ರೀತಂ ಕಿಡಿ
ಮತ್ಲಬಿ ರಾಜಕಾರಣದ ಮಾತನ್ನಾಡಿದ್ದಷ್ಟೇ ಅಲ್ಲ. ಹಾಸನದಲ್ಲಿ ವಿಧಾನಸಭಾ ಚುನಾವಣೆ ವೇಳೆ ಗುಡುಗಿದ್ದ ದಳಪತಿಗಳ ವಿರುದ್ಧ ಪ್ರೀತಂಗೌಡ ಮುಲಾಜಿಲ್ಲದ ಮಾತುಗಳನ್ನಾಡಿದರು. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲನ್ನು ಎಕ್ಸಾಂಪಲ್ ಕೊಟ್ಟು ನೀನೊಂದು ಬಗೆದರೆ ದೈವ ನಿನಗೆ ನೂರು ಬಗೆದೀತು ಅಂತ ಮನದೊಳಗಿನ ಅಸಮಾಧಾನವನ್ನು ಹೊರಹಾಕಿದರು. ಒಟ್ಟಾರೆ ರಾಜ್ಯದಲ್ಲಿ ಮೈತ್ರಿಯ ಮಹಾ ಮಂಥನ ನಡೀತಿದೆ. ಈ ಹೊತ್ತಲ್ಲಿ ಕೇಸರಿ ಕಲಿಗಳಲ್ಲಿ ಅಸಮಾಧಾನದ ಹೊಗೆಯಲ್ಲಿ ಬೆಂಕಿಯೇ ಎದ್ದಿರೋದು ಕಾಣುತ್ತಿದೆ. ಅದರಲ್ಲೂ ದಳಪತಿ ಕಣ್ಣಿಟ್ಟಿರೋ ಹಾಸನ ಕ್ಷೇತ್ರದಲ್ಲಿ ದೋಸ್ತಿಗೆ ಅದ್ಯಾವ ರೀತಿಯಲ್ಲಿ ವರ್ಕೌಟ್ ಆಗುತ್ತೋ? ಲೆಟ್ಸ್ ವೇಯ್ಟ್ ಅಂಡ್ ವಾಚ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ