newsfirstkannada.com

×

ಪತ್ನಿಗೂ ಕಾಯಿಲೆ, ನನಗೂ ಸಮಸ್ಯೆ ಇದೆ ಸ್ವಾಮಿ -ಕಣ್ಣೀರು ಹಾಕುತ್ತ ಸೈಲ್ ಜಡ್ಜ್​ ಮುಂದೆ ಹೇಳಿದ್ದೇನು..?

Share :

Published October 25, 2024 at 2:20pm

Update October 25, 2024 at 2:46pm

    ಶಾಸಕ ಸತೀಶ್ ಕೃಷ್ಣ ಸೈಲ್ ಪರ ವಾದ ಮಾಡಿದ ಲಾಯರ್ ಯಾರು?

    ಪ್ರಕರಣದಲ್ಲಿ ವೈಯಕ್ತಿಕವಾಗಿ ಶಾಸಕ ಸತೀಶ್ ಸೈಲ್ ಪಾತ್ರ ಏನು ಇಲ್ಲ

    ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್​ನಲ್ಲಿ ಮನವಿ ಮಾಡಿದ್ದೇನು?

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ದೋಷಿ ಎಂದು ನ್ಯಾಯಾಲಯ ಆದೇಶ ಹೊರಸಿತ್ತು. ಸದ್ಯ ಇದೀಗ ಶಿಕ್ಷೆ ಪ್ರಮಾಣ ಕಡಿಮೆ ಮಾಡುವ ಕುರಿತು 82ನೇ ಸಿಸಿಹೆಚ್​ ಕೋರ್ಟ್​ನಲ್ಲಿ ವಿಚಾರಣೆ ಆರಂಭವಾಗಿದೆ.

82ನೇ ಸಿಸಿಹೆಚ್​ ಕೋರ್ಟ್​ನಲ್ಲಿ ಶಾಸಕ ಸತೀಶ್ ಕೃಷ್ಣ ಸೈಲ್ ಸೇರಿದಂತೆ ಆರೋಪಿಗಳ ಪರವಾಗಿ ಹಿರಿಯ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಆರಂಭಿಸಿದ್ದಾರೆ. ಸತೀಶ್ ಸೈಲ್​ಗೆ ಅನಾರೋಗ್ಯ ಸಮಸ್ಸೆಗಳಿವೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಲ್ ಸಹ ಇದೇ ಆಧಾರದ ಮೇಲೆ ಪಡೆದಿದ್ದರು. ವೈದ್ಯಕೀಯ ದಾಖಲೆಗಳನ್ನ ಸಲ್ಲಿಕೆ ಮಾಡಲಾಗಿದೆ. ಪ್ರಕರಣದಲ್ಲಿ ವೈಯಕ್ತಿಕವಾಗಿ ಸತೀಶ್ ಸೈಲ್ ಪಾತ್ರ ಏನು ಇಲ್ಲ. ಅದು ಕಂಪನಿಯ ಮೂಲಕ ಟ್ರಾನ್ಸ್​ಪೋರ್ಟ್ ಆಗಿದೆ. ಕಳ್ಳತನದಲ್ಲಿ ಆರೋಪಿಗಳದ್ದು ಎಷ್ಟು?. ಈ ಬಗ್ಗೆ ಸಿಬಿಐ ಸ್ಪಷ್ಟಪಡಿಸಿಲ್ಲ ಎಂದು ಕೋರ್ಟ್​ಗೆ ಹೇಳಿದರು.

ಇದನ್ನೂ ಓದಿ: ಬೇಲೆಕೇರಿ ಅದಿರು ಕೇಸ್​; ಕಾಂಗ್ರೆಸ್​ MLA ಸತೀಶ್ ಸೈಲ್ ಅರೆಸ್ಟ್​.. ಇಂದು ಕೋರ್ಟ್​​ನಿಂದ ಶಿಕ್ಷೆ ಪ್ರಕಟ 

ಇನ್ನು ಸಿಬಿಐ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ ಅವರು ವಾದ ಮಾಡುತ್ತಿದ್ದು ಆರೋಪಿಗಳಿಗೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನು ವಿಧಿಸಬೇಕು ಎಂದು ಮನವಿ ಮಾಡಿದರು. 3,100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆ ಮಾಡಲಾಗಿದೆ. ಹೀಗಾಗಿ ಆರೋಪಿಗಳಿಗೆ ಗರಿಷ್ಠ ದಂಡ ವಿಧಿಸಬೇಕು ಎಂದು ಹೇಳಿದರು.

ಬಳಿಕ ಶಿಕ್ಷೆ ಕಡಿಮೆ ಮಾಡಲು ಏನಾದರೂ ಕಾರಣ ಇದೆಯಾ ಎಂದು ಆರೋಪಿ ಮಹೇಶ್ ಬಿಳಿಯೆ ಅವರಿಗೆ ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದರು. ಇದಾದ ಮೇಲೆ ನೀವೆನಾದರು ಹೇಳುವುದು ಇದೆಯಾ ಎಂದು ಶಾಸಕ ಸತೀಶ್ ಕೃಷ್ಣ ಸೈಲ್​ಗೆ ಜಡ್ಜ್​ ಪ್ರಶ್ನೆ ಮಾಡಿದರು. ಆಗ ಸತೀಶ್ ಸೈಲ್ ಅವರು, ಕಣ್ಣಲ್ಲಿ ನೀರು ತುಂಬಿಕೊಂಡಿದೆ. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬಳು ಬೆಂಗಳೂರಲ್ಲಿದ್ದು ಮತ್ತೊಬ್ಬರು ವಿಜಯನಗರದಲ್ಲಿ ಇದ್ದಾರೆ. ಪತ್ನಿಯೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಾನು ಕ್ರೋನಿಕಲ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಹೀಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಸ್ವಾಮಿ ಎಂದು ಭಾವುಕವಾಗಿ ಮನವಿ ಮಾಡಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ನಿಗೂ ಕಾಯಿಲೆ, ನನಗೂ ಸಮಸ್ಯೆ ಇದೆ ಸ್ವಾಮಿ -ಕಣ್ಣೀರು ಹಾಕುತ್ತ ಸೈಲ್ ಜಡ್ಜ್​ ಮುಂದೆ ಹೇಳಿದ್ದೇನು..?

https://newsfirstlive.com/wp-content/uploads/2024/10/SATISH_SAIL-1.jpg

Load More