newsfirstkannada.com

×

ದುಡ್ಡು ಕೊಡಿ, ಇಲ್ಲ ಸಿನಿಮಾ ಮಾಡಿ ಎಂದು ಕೇಳೋದು ತಪ್ಪಾ?- ಸುದೀಪ್​​ ವಿರುದ್ಧ MN ಕುಮಾರ್​​​ ಕಿಡಿ

Share :

Published July 8, 2023 at 4:45pm

    ನಿರ್ಮಾಪಕ ಎಂ.ಎನ್​​ ಕುಮಾರ್​​ಗೆ ನಟ ಸುದೀಪ್​​ ನೋಟಿಸ್​​

    ಸಿನಿಮಾ ಮಾಡಿ ಎಂದು ಕೇಳುವುದು ತಪ್ಪೇ? ಎಂದ ಕುಮಾರ್​​

    ನಟ ಸುದೀಪ್​​ ವಿರುದ್ಧ ನಿರ್ಮಾಪಕ ಎಂ.ಎನ್​​ ಕುಮಾರ್ ಕಿಡಿ

ಬೆಂಗಳೂರು: 8 ವರ್ಷದ ಹಿಂದೆ ಸಿನಿಮಾ ಮಾಡಿಕೊಡುವುದಾಗಿ ಹಣ ಪಡೆದಿದ್ದ ನಟ ಕಿಚ್ಚ ಸುದೀಪ್ ಈಗಲೂ ಸತಾಯಿಸುತ್ತಲೇ ಇದ್ದಾರೆ ಎಂದು ನಿರ್ಮಾಪಕ ಎಂ ಎನ್ ಕುಮಾರ್ ಆರೋಪ ಮಾಡಿದ್ದರು. ಹೀಗೆ ಆರೋಪ ಮಾಡಿದ ಬೆನ್ನಲ್ಲೇ ಎಂ.ಎನ್ ಕುಮಾರ್‌ಗೆ ಕಿಚ್ಚ ಸುದೀಪ್ ತಮ್ಮ ವಕೀಲರ ಮೂಲಕ ನೋಟಿಸ್​​ ನೀಡಿದ್ದಾರೆ. ಎಂ.ಎನ್ ಕುಮಾರ್ ಮಾಡಿರುವ ಎಲ್ಲ ಆರೋಪಗಳು ಆಧಾರರಹಿತ. ನನ್ನ ಮೇಲೆ ಮಾಡಿದ ಆರೋಪಗಳನ್ನು ಸಾಬೀತುಪಡಿಸಲಿ. ಇಲ್ಲವಾದರೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಣ ನೀಡಲಿ ಎಂದು ಸುದೀಪ್​​ ನೋಟಿಸ್​​ ಕೊಟ್ಟಿದ್ದಾರೆ.

ಇನ್ನು, ಸುದೀಪ್​​ ನೋಟಿಸ್​ ನೀಡಿದ ಬೆನ್ನಲ್ಲೇ ನಿರ್ಮಾಪಕರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಎಂ.ಎನ್​​ ಕುಮಾರ್​​, ನಾನು ಮಾಧ್ಯಮಗಳ ಮೂಲಕ ನ್ಯಾಯ ಕೇಳಿದ್ದೇನೆ. ಸಿನಿಮಾ ಇಂಡಸ್ಟ್ರೀಯಲ್ಲಿ ಒಬ್ಬ ನಿರ್ಮಾಪಕ ಬಹಳ ಮುಖ್ಯ. ಹಣ ಕೊಟ್ಟು ಏಳೆಂಟು ವರ್ಷಗಳಾಗಿದೆ, ಬೇರೆ ಎಲ್ಲರಿಗೂ ಸಿನಿಮಾ ಮಾಡಿ ಕೊಡುತ್ತಿದ್ದೀರಿ. ನಮಗೆ ಸಿನಿಮಾ ಮಾಡಿಕೊಡಿ ಎಂದು ಕೇಳೋದು ತಪ್ಪೇ? ಎಂದು ಪ್ರಶ್ನಿಸಿದರು.

ನನಗೆ ವಾಟ್ಸಾಪ್​​​ ಮೂಲಕ ನೋಟಿಸ್​​ ನೀಡಲಾಗಿದೆ. ಪೋಸ್ಟ್​ ಮೂಲಕ ನನಗೆ ನೋಟಿಸ್​ ಬಂದರೆ ನಿರ್ಮಾಪಕರ ಸಂಘದ ಗಮನಕ್ಕೆ ತರುತ್ತೇನೆ. ಸುದೀಪ್​​ ಈಗಾಗಲೇ 45 ಸಿನಿಮಾ ಮಾಡಿದ್ದಾರೆ. ಈಗ 45 ಸಿನಿಮಾಗಳ ದಾಖಲೆ ಸುದೀಪ್​​ ಬಳಿ ಇದೆಯೇ? ಸಿನಿಮಾ ಅನ್ನೋದು ನಂಬಿಕೆ ಮೇಲೆ ಆಗುವುದು. ನನ್ನ ಬಳಿ ದಾಖಲೆ ಕೇಳುವುದು ಎಷ್ಟು ಸರಿ ಎಂದರು.

ನಂದ ಕಿಶೋರ್​ ಪ್ರಮಾಣ ಮಾಡಲಿ ಎಂದ ಕುಮಾರ್​​

ನಾನು ಸುದೀಪ್​​ಗೆ ಹಣ ನೀಡಿಲ್ಲ, ಟೈಟಲ್​ ರಿಜಿಸ್ಟರ್​ ಮಾಡಿಸಿಲ್ಲ ಎಂಬ ಬಗ್ಗೆ ನಂದ ಕಿಶೋರ್​ ಬಂದು ಪ್ರಮಾಣ ಮಾಡಲಿ. ಕಾನೂನು ಎಲ್ಲರಿಗೂ ಒಂದೇ. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ತಲೆ ಬಾಗುತ್ತೇನೆ ಎಂದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ದುಡ್ಡು ಕೊಡಿ, ಇಲ್ಲ ಸಿನಿಮಾ ಮಾಡಿ ಎಂದು ಕೇಳೋದು ತಪ್ಪಾ?- ಸುದೀಪ್​​ ವಿರುದ್ಧ MN ಕುಮಾರ್​​​ ಕಿಡಿ

https://newsfirstlive.com/wp-content/uploads/2023/07/Sudeep.jpg

Load More