newsfirstkannada.com

Video: ಕರ್ತವ್ಯ ನಿರತ ಪೊಲೀಸ್​ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ; ನಡುರೋಡಲ್ಲಿ ನಡೆದಿದ್ದೇನು?

Share :

31-10-2023

    ಯುವಕರ ಗುಂಪೊಂದು ಪೊಲೀಸ್​ ಅಧಿಕಾರಿ ಹಲ್ಲೆ ನಡೆಸಿದ್ದೇಕೆ..?

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಬಿದ್ದು ಒದ್ದಾಡಿದ ವಿಡಿಯೋ

    ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಸಿಬ್ಬಂದಿ

ಲಕ್ನೋ: ಪೊಲೀಸ್​ ಅಧಿಕಾರಿಗಳು ಅಂದ್ರೆ ಸಮಾಜದ ಶಾಂತಿ, ಸುರಕ್ಷತೆಯನ್ನು ಕಾಪಾಡುವ ಆರಕ್ಷಕರು. ತಮ್ಮ ಕುಟುಂಬ, ಸಂಸಾರ ಬಿಟ್ಟು ಸಾರ್ವಜನಿಕ ಸೇವೆ ಮಾಡುತ್ತಾರೆ. ಆದರೆ ಅದೇ ಕರ್ತವ್ಯ ಮಾಡುತ್ತಿದ್ದ ಪೊಲೀಸ್​ ಅಧಿಕಾರಿಯ ಮೇಲೆ ಉತ್ತರಪ್ರದೇಶದ ಮಹೋಬಾದಲ್ಲಿ ಯುವಕರ ಗುಂಪೊಂದು ದಾಳಿ ಮಾಡಿದೆ. ಪೊಲೀಸ್ ಓಡಿ ಹೋದರೂ ಬಿಡದೇ ಹಿಗ್ಗಾಮುಗ್ಗ ಥಳಿಸಲಾಗಿದೆ.

ಪೊಲೀಸ್​ ಅಧಿಕಾರಿಯೊಬ್ಬರಿಗೆ ಕಾಲಿನಿಂದ ಒದ್ದು, ಕೋಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಯುವಕರ ದಾಳಿಯಿಂದ ತಪ್ಪಿಸಿಕೊಂಡು ಪೊಲೀಸ್​ ಅಧಿಕಾರಿ ಓಡಿ ಹೋಗುತ್ತಿದ್ದರು ಕೂಡ ಬೆಂಬಿಡದ ಯುವಕರು ಅಟ್ಟಾಡಿಸಿಕೊಂಡು ಹೋಗಿದ್ದಾರೆ.

ಅಸಲಿಗೆ ಆಗಿದ್ದೇನು..?

ವೇಗವಾಗಿ ಬಂದ ಬಸ್‌ಯೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಬಸ್​​ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ತೆರಳಿದ್ದರು. ಜನರು ಪೊಲೀಸ್ ಸಿಬ್ಬಂದಿಯನ್ನು ಸುಖಾ ಸುಮ್ಮನೆ ಗುರಿಯಾಗಿಸಿಕೊಂಡು ಲಾಠಿಯಿಂದ ಥಳಿಸಿದ್ದಾರೆ. ಇದೇ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಯುವಕರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕರ್ತವ್ಯ ನಿರತ ಪೊಲೀಸ್​ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ; ನಡುರೋಡಲ್ಲಿ ನಡೆದಿದ್ದೇನು?

https://newsfirstlive.com/wp-content/uploads/2023/10/lucknow-1.jpg

Load More