ಮಕ್ಕಳ ಮೊಬೈಲ್ ಗೀಳು ಕಡಿಮೆ ಮಾಡಲು ಸರ್ಕಾರದಿಂದ ಪ್ಲಾನ್
ಎಲ್ಲ ಜಿಲ್ಲೆಗಳಲ್ಲಿಯೂ ಮಕ್ಕಳ ಮೊಬೈಲ್ ಗೀಳಿನ ಬಗ್ಗೆ ಅಧ್ಯಯನ
ಸಮಗ್ರ ಅಧ್ಯಯನದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಕ್ಕಳು ಊಟ ಮಾಡದೇ, ಹೇಳಿದ ಮಾತನ್ನು ಕೇಳದೇ ಹಠ ಮಾಡುತ್ತಾ ಇರುತ್ತಾರೆ. ಹೀಗಾಗಿ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ತುಂಟಾಟ ಮಾಡೋ ಮಕ್ಕಳನ್ನ ದಾರಿಗೆ ತರಬೇಕಿದೆ. ಚಂದಮಾಮನ ಕಥೆ ಹೇಳಿದರೆ ಸಾಕು ಅನ್ನೋ ಕಾಲ ಇತ್ತು. ಆದ್ರೆ ಈಗ ಮಕ್ಕಳನ್ನ ಸಮಾಧಾನ ಮಾಡೋಕೆ ತಾಯಂದಿರು ಕಂಡುಕೊಂಡ ಅಸ್ತ್ರ ಮೊಬೈಲ್. ಮಕ್ಕಳು ಊಟ ಮಾಡುವಾಗಲೂ ಮೊಬೈಲ್, ಆಟ ಆಡುವಾಗಲೂ ಮೊಬೈಲ್ ಇದರಿಂದ ತಾಯಂದಿರಿಗೆ ಕಿರಿಕಿರಿ ಉಂಟಾಗಿದೆ. ಬಟ್ ಪೋಷಕರಿಗೆ ಸದ್ಯ ಇದೇ ದೊಡ್ಡ ಟ್ರಬಲ್ ಆಗಿದೆ. ಮಕ್ಕಳನ್ನ ಸಮಾಧಾನ ಮಾಡಲು ಯಾವ ತಂದೆ ತಾಯಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟಿದ್ರೋ, ಅದೇ ಪೋಷಕರು ಈಗ, ಮೊಬೈಲ್ಗಳಿಂದ ಮಕ್ಕಳನ್ನ ಬಿಡಿಸೋದು ಹೇಗಪ್ಪಾ ಅಂತ ತಲೆ ಮೇಲೆ ಕೈ ಹೊತ್ತು ಕೂರುವಂತೆ ಆಗಿ ಬಿಟ್ಟಿದೆ.
ಮನೋರೋಗಿಗಳ ಬಳಿ, ವೈದ್ಯರ ಬಳಿ ಪೋಷಕರು ಅಲೆದು ಅಲೆದು ಹೈರಾಣಾಗಿದ್ದಾರೆ. ಹೀಗಾಗಿ, ಮೊಬೈಲ್ ಗೀಳು ಹಾಗೂ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಅಧ್ಯಯನಕ್ಕೆ ಮುಂದಾಗಿದೆ. ಮೊಬೈಲ್ ಗೀಳು ಹಾಗೂ ಕ್ರಮಗಳ ಕುರಿತು ಅಧ್ಯಯನ್ನಕ್ಕೆ ತಜ್ಞರ ಸಮಿತಿಯನ್ನೂ ಮಕ್ಕಳ ಹಕ್ಕುಗಳ ಆಯೋಗ ರಚಿಸಿದೆ. ಶಿಕ್ಷಣ ಇಲಾಖೆ, ಮಕ್ಕಳ ಹಕ್ಕುಗಳ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ವಿಭಾಗ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ 9 ವಿಭಾಗಗಳ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಈ ಸಮಿತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಕ್ಕಳ ಮೊಬೈಲ್ ಗೀಳಿನ ಬಗ್ಗೆ ಅಧ್ಯಯನ ನಡೆಸಲಿದೆ. 3 ತಿಂಗಳಲ್ಲಿ ಸಮಗ್ರ ಅಧ್ಯಯನದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಜೊತೆಗೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೂ ಕೂಡ ಮಕ್ಕಳು ಇದರಿಂದ ತುತ್ತಾಗುತ್ತಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡ ಸರ್ಕಾರ ಮಕ್ಕಳ ಮೊಬೈಲ್ ಗೀಳು ಕಡಿಮೆ ಮಾಡಲು ಈ ಪ್ಲಾನ್ ಮಾಡಿದೆ. ಒಟ್ಟಿನಲ್ಲಿ ಮಕ್ಕಳು ಹಠ ಮಾಡ್ತಾರೆ ಅನ್ನೋ ಕಾರಣಕ್ಕೆ ಮೊಬೈಲ್ ಕೈಯಲ್ಲಿಕೊಟ್ಟು ಸಮಾಧಾನ ಮಾಡಲು ಮುಂದಾಗುವ ಎಲ್ಲಾ ಪೋಷಕರು, ಇನ್ನು ಮುಂದೆಯಾದ್ರೂ ಎಚ್ಚರಿಕೆ ವಹಿಸಿ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ