newsfirstkannada.com

ಸಾರ್ವಜನಿಕರೇ ಹುಷಾರ್​​​.. ಮೊಬೈಲ್​​ ಕಳ್ಳತನದಲ್ಲಿ ಕರ್ನಾಟಕವೇ ನಂ. 1

Share :

10-09-2023

    ಬೇರೆ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲೇ ಮೊಬೈಲ್‌ ಕಳ್ಳತನ ಜಾಸ್ತಿ

    ಕರ್ನಾಟಕದಲ್ಲಿ ಅತಿ ಹೆಚ್ಚು ಮೊಬೈಲ್ ಕಳ್ಳತನ ಬಗ್ಗೆ ಉಲ್ಲೇಖ!

    ಅತೀ ಹೆಚ್ಚು ಕಳ್ಳರು ಮೊಬೈಲ್ ಕಳ್ಳತನ ಮಾಡಿರೋ ರಾಜ್ಯಗಳಾವುವು?

ಬೆಂಗಳೂರು: ದೇಶದಲ್ಲಿ ಇತ್ತೀಚೆಗೆ ಮೊಬೈಲ್ ಕಳ್ಳತನ ಮಾಡೋದು ಜಾಸ್ತಿ ಆಗಿದೆ. ಮೊದ ಮೊದಲು ಒಂಟಿ ಮಹಿಳೆಯರನ್ನ ಅಡ್ಡಗಟ್ಟಿ ಸರಗಳ್ಳತನ ಮಾಡೋದು ಜಾಸ್ತಿ ಇತ್ತು. ಸರಗಳ್ಳನ ಕೇಸ್​ಗಳು ಜಾಸ್ತಿಯಾಗ್ತಿದ್ದಂತೆ ಎಚ್ಚೆತ್ತುಕೊಂಡ ಮಹಿಳೆಯರು ಹೊರಗಡೆ ಬಂದಾಗ ಬೆಲೆಬಾಳುವ ಒಡವೆಗಳನ್ನ ಹಾಕೋದು ಕಮ್ಮಿ ಮಾಡಿದ್ದರು.

ಇದರ ಪರಿಣಾಮ ಈಗ ಮೊಬೈಲ್ ಕಳ್ಳತನ ಜಾಸ್ತಿ ಆಗಿದೆ. ಆಧುನಿಕ ಜಗತ್ತಿನಲ್ಲಿ ಈಗ ಮೊಬೈಲ್ ಬಳಸದ ವ್ಯಕ್ತಿಗಳೇ ಸಿಗಲ್ಲ. ಹಳ್ಳಿಯಿಂದ ಡೆಲ್ಲಿವರೆಗೂ ಅಧಿಕಾರಿಯಿಂದ ಕುರಿ ಕಾಯೋನವರೆಗೂ ಸ್ಮಾರ್ಟ್​ ಫೋನ್ ಇಟ್ಟೇ ಇರ್ತಾರೆ. ಸಿಟಿ ಪ್ರದೇಶಗಳಲ್ಲಿರೋ, ಒಳ್ಳೆ ಕೆಲಸಗಳಲ್ಲಿರೋರು ಅಥವಾ ದಿನನಿತ್ಯ ಟೆಕ್ನಾಲಜಿ ಬಳಸೋರೋ ದುಬಾರಿ ಫೋನ್​​ನನ್ನು ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಮೊಬೈಲ್ ಕಳ್ಳತನ ಮಾಡಿದ್ರೆ ಲಾಭ ಗ್ಯಾರಂಟಿ ಅನ್ನೋದನ್ನ ಬಿಸಿನೆಸ್​ ಮಾಡ್ಕೊಂಡಿರೋರು ಈಗ ಇಂಥಾ ಕೆಲಸಗಳಿಗೆ ಇಳಿದಿದ್ದಾರೆ.

ಮೊಬೈಲ್ ಕಳ್ಳತನದಲ್ಲಿ ಕರ್ನಾಟಕವೇ ನಂಬರ್ 1!
CEIR ವರದಿಯಲ್ಲಿ ಬಯಲಾಯ್ತು ಅಚ್ಚರಿ ಸಂಗತಿ!

ದೇಶಾದ್ಯಂತ ಮೊಬೈಲ್ ಕಳ್ಳತನ ಹೆಚ್ಚಾಗಿದೆ. ಅದರಲ್ಲೂ ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಕರ್ನಾಟಕವೇ ನಂಬರ್ 1 ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಕೇಂದ್ರದ ಸಿಟಿಜನ್ ಸೆಂಟ್ರಿಕ್ ಪೋರ್ಟಲ್ ಡಿಪಾರ್ಟ್ಮೆಂಟ್ ಆಫ್ ಟೆಲಿ ಕಮ್ಯೂನಿಕೇಷನ್ ವರದಿ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಅತಿ ಹೆಚ್ಚು ಮೊಬೈಲ್ ಕಳ್ಳತನ ಆಗಿರುವ ಬಗ್ಗೆ ಉಲ್ಲೇಖ ಮಾಡಿದೆ. ಕಳೆದ ಒಂದು ತಿಂಗಳಲ್ಲಿ ಯಾವ ರಾಜ್ಯದಲ್ಲಿ ಹೆಚ್ಚು ಮೊಬೈಲ್ ಕಳ್ಳತನ ಕೇಸ್​ಗಳು ದಾಖಲಾಗಿದೆ.

ಹೆಚ್ಚು ಮೊಬೈಲ್ ಕಳ್ಳತನ ಆದ ರಾಜ್ಯಗಳು

  1. ಕರ್ನಾಟಕ – 1,13,811
  2. ಮಹಾರಾಷ್ಟ್ರ -1,09,704
  3. ಹರಿಯಾಣ – 7,107
  4. ಕೇರಳ – 5,513
  5. ಮಧ್ಯಪ್ರದೇಶ – 4,410
  6. ಕೊಲ್ಕತ್ತಾ – 2,858
  7. ಜಾರ್ಖಂಡ್ – 2,277
  8. ಹಿಮಾಚಲ ಪ್ರದೇಶ – 1,291
  9. ಜಮ್ಮು ಮತ್ತು ಕಾಶ್ಮೀರ – 1,160
  10. ಮೇಘಾಲಯ – 538

ಇದು CEIR ಬಿಡುಗಡೆ ಮಾಡಿರುವ ಮಾಸಿಕ ವರದಿ. ಒಂದು ತಿಂಗಳಲ್ಲಿ ಒಂದು ಲಕ್ಷದ ಹದಿಮೂರು ಸಾವಿರದ ಎಂಟುನೂರ ಹನ್ನೊಂದು ಮೊಬೈಲ್ ಕಳವು ಆಗಿದೆ. ಈ ಪೈಕಿ 18, 090 ಮೊಬೈಲ್‌ಗಳನ್ನ ಟ್ರೇಸ್‌ ಮಾಡಲಾಗಿದೆ. ಆದ್ರೆ ಇದರಲ್ಲಿ ರಿಕವರಿ ಆಗಿರೋದು 10,649 ಮೊಬೈಲ್​ಗಳು ಮಾತ್ರ. ಕಳೆದ ತಿಂಗಳು 18 ಸಾವಿರಕ್ಕೂ ಹೆಚ್ಚು ಮೊಬೈಲ್ ಕಳವು ಆಗಿರುವುದಕ್ಕೆ ಶಕ್ತಿ ಯೋಜನೆಯೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಫ್ರೀ ಬಸ್​ ಯೋಜನೆಯಡಿ ಮಹಿಳೆಯರ ಸಂಚಾರ ಜಾಸ್ತಿ ಆಗಿದ್ದು, ಸೀಟಿಗಾಗಿ ಪುರುಷರು ಹರಸಾಹಸ ಮಾಡಬೇಕಿದೆ. ಪುರುಷರು ಸೀಟಿಗಾಗಿ ಕಾಳಗ ಮಾಡ್ತಿದ್ರೆ ಆ ಕಡೆ ಕಳ್ಳರು ತಮ್ಮ ಕೈ ಚಳಕ ತೋರಿಸ್ತಿದ್ದಾರೆ ಎನ್ನಲಾಗಿದೆ. ಆದರೆ ಇದೊಂದೇ ಕಾರಣ ಅಂತ ಹೇಳಲು ಸಾಧ್ಯವಿಲ್ಲ ಬಿಡಿ.

ಮೊಬೈಲ್ ಕಳ್ಳತನ ಕೇಸ್​ಗಳಲ್ಲಿ ರಿಕವರಿ ಸಾಧ್ಯತೆ ಬಹಳ ಕಡಿಮೆ. ದೇಶದಲ್ಲಿ ಕೇವಲ 2 ಪರ್ಸೆಂಟ್​ ಕಳವಾಗಿರುವ ಮೊಬೈಲ್ ರಿಕವರಿ ಆಗಿರುವ ದಾಖಲೆ ಇದೆ. ಯಾಕೆ ರಿವಕರಿ ಮಾಡೋಕೆ ಆಗ್ತಿಲ್ಲ ಅಂತ ನೋಡಿದ್ರೆ ಸಾಕಷ್ಟು ಕಾರಣಗಳು ಸಿಗ್ತಿವೆ. ಸಾಮಾನ್ಯವಾಗಿ ಮೊಬೈಲ್ ಕದ್ದವರು ಅದನ್ನ ಬೇರೆ ಬೇರೆ ರಾಜ್ಯಗಳಿಗೆ ಸೇಲ್ ಮಾಡಿಬಿಡ್ತಾರೆ. ಸರಿ ಬೇರೆ ರಾಜ್ಯಕ್ಕೆ ಹೋಗಿ ಮೊಬೈಲ್ ರಿವಕರಿ ಮಾಡೋಣ ಅಂತ ನೋಡಿದ್ರೆ ಪೊಲೀಸರಿಗೆ ಪ್ರಯಾಣದ ಖರ್ಚೆ ದೊಡ್ದಾಗುತ್ತೆ. ಹಾಗಾಗಿ ಪೊಲೀಸ್ ಇಲಾಖೆ ಕೂಡ ಮೊಬೈಲ್ ಕಳ್ಳತನ ಕೇಸ್​ಗಳನ್ನ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಇದೆ. ತುಂಬಾ ಸಿರೀಯಸ್​ ಕೇಸ್​, ಮೊಬೈಲ್ ಬೇಕೇ ಬೇಕು ಅಂದಾಗ ಮಾತ್ರ ಇಷ್ಟು ರಿಸ್ಕ್​ ತೆಗೆದುಕೊಳ್ತಾರೆ. ಕರ್ನಾಟಕದ ಹಲವು ಹತ್ತು ಒಳ್ಳೆ ವಿಚಾರಕ್ಕೆ ನಂಬರ್ 1 ಎನಿಸಿಕೊಂಡಿದೆ. ಆದರೆ ಮೊಬೈಲ್ ಕಳ್ಳತನದಲ್ಲೂ ಮೊದಲ ಸ್ಥಾನದಲ್ಲಿರುವುದು ಬೇಸರದ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾರ್ವಜನಿಕರೇ ಹುಷಾರ್​​​.. ಮೊಬೈಲ್​​ ಕಳ್ಳತನದಲ್ಲಿ ಕರ್ನಾಟಕವೇ ನಂ. 1

https://newsfirstlive.com/wp-content/uploads/2023/09/phone.jpg

Load More