newsfirstkannada.com

×

ದುರ್ಗಾ ಪೂಜಾ ಪೆಂಡಾಲ್​ಗೆ ಅರೆ ಬೆತ್ತಲೆಯಾಗಿ ಬಂದ ಮಾಡೆಲ್​​ಗಳು; ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆ

Share :

Published October 11, 2024 at 7:22pm

Update October 11, 2024 at 7:36pm

    ದುರ್ಗಾ ಪೂಜಾ ಪೆಂಡಾಲ್​ಗೆ ಬೋಲ್ಡ್ ಔಟ್​ಫಿಟ್​ನಲ್ಲಿ ಬಂದ ಮಾಡೆಲ್​ಗಳು

    ಮಾಡೆಲ್​ಗಳ ಬಟ್ಟೆ ಕಂಡ ನೆಟ್ಟಿಗರು ಕೆಂಡಾಮಂಡಲ, ತಹರೇವಾರಿ ಪ್ರತಿಕ್ರಿಯೆ

    ತಮ್ಮ ನಡೆಯನ್ನು ಸಮರ್ಥಿಸಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ ಸನ್ನತಿ

ನಾವು ಆಧುನಿಕತೆಯನ್ನು ಎಷ್ಟೇ ಅಪ್ಪಿಕೊಂಡರು, ಜಾಗತೀಕರಣವನ್ನು ಎಷ್ಟೇ ಪೂಜಿಸಿದರು. ದೇವರು, ದೇವಾಲಯ, ಭಕ್ತಿ ಪೂಜೆ ಅಂತ ಬಂದಾಗ ಪಕ್ಕಾ ಸಾಂಪ್ರದಾಯಸ್ಥರಾಗಿ ಬಿಡುತ್ತೇವೆ. ಇಂತಹ ಜಾಗಗಳಲ್ಲಿ ಹೆಚ್ಚು ಸಭ್ಯತೆಯನ್ನು ಬಯಸುತ್ತೇವೆ. ಸಭ್ಯತೆಯ ಗೆರೆ ದಾಟಿದಾಗ ಆ ವಿಷಯಗಳು ದೊಡ್ಡದಾಗಿ ಸದ್ದು ಮಾಡುತ್ತವೆ. ಅದು ಯಾರೇ ಆಗಿರಲಿ ದೇವರು ದೇವಾಲಯಗಳು ಎಂಬ ವಿಷಯ ಬಂದಾಗ ಹೀಗೆಯೇ ಇರಬೇಕು, ಹೀಗೆಯೇ ಬರಬೇಕು ಎಂಬ ಅಘೋಷಿತ ಒಂದು ನಿಯಮ ನಮ್ಮ ದೇಶದಲ್ಲಿ ಜಾರಿಯಲ್ಲಿದೆ. ಈಗ ಕೊಲ್ಕತ್ತಾದಲ್ಲಿ ಇಬ್ಬರು ಮಾಡೆಲ್​ಗಳು ಹಾಗೂ ಅವರ ಸ್ನೇಹಿತೆ ದುರ್ಗಾ ಪೆಂಡಾಲ್​ಗೆ ಸಭ್ಯತೆ ಎನಿಸಲಾರದಂತಹ ಬಟ್ಟೆ ತೊಟ್ಟುಕೊಂಡು ಬಂದಿದ್ದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಇದನ್ನೂ ಓದಿ: 9 ದಿನಗಳ ಕಾಲ ಕಠಿಣ ವ್ರತ ಕೈಗೊಂಡ ಬಾಬಾ; ಕುತ್ತಿಗೆವರೆಗೂ ತಮ್ಮನ್ನು ತಾವು ಹೂತುಕೊಂಡು ಉಪವಾಸ

ಹೆಮೋಶ್ರೀ ಭಾಂದ್ರಾ ಹಾಗೂ ಸನ್ನತಿ ಮಿತ್ರಿ ಈ ಇಬ್ಬರು ಮಾಜಿ ಮಿಸ್ ಕೊಲ್ಕತ್ತಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು. ಈ ಇಬ್ಬರು ತಮ್ಮ ಸ್ನೇಹಿತೆಯೊಂದಿಗೆ ದುರ್ಗಾ ಪೂಜಾ ಪೆಂಡಾಲ್​ಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಈ ವೇಳೆ ಅಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಅವರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದ್ರೆ ಅವರು ಧರಿಸಿದ ಬಟ್ಟೆಯ ಬಗ್ಗೆ ವ್ಯಂಗ್ಯ ಮಿಶ್ರಿತ ಹಾಗೂ ಆಕ್ರೋಶಭರಿತ ಕಾಮೆಂಟ್​ಗಳು ಹರಿದಾಡುತ್ತಿವೆ. ಇಂತಹ ಬಟ್ಟೆಗಳನ್ನು ಧರಿಸಿಕೊಂಡು ಧಾರ್ಮಿಕ ಕ್ಷೇತ್ರಗಳಲ್ಲಿ ಬರುವುದು ಸಭ್ಯತೆಯ ಲಕ್ಷಣವಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Big breaking: ರತನ್ ಟಾಟಾ ಅವರ ಉತ್ತರಾಧಿಕಾರಿ ನೇಮಿಸಿದ ಟಾಟಾ ಟ್ರಸ್ಟ್.. ಯಾರು ಇವರು?

View this post on Instagram

A post shared by Sannati Mitra🕊️ (@sannati__)

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬೇಸರ ವ್ಯಕ್ತಪಡಿಸಿರುವ ಸನ್ನತಿ ಮಿತ್ರಾ ಇದೊಂದು ವಿಚಿತ್ರವಾದ ವಿರೋಧ. ಈ ರೀತಿಯಾಗುತ್ತದೆ ಎಂದೂ ನಾನು ಊಹಿಸಿರಲಿಲ್ಲ. ಹೆಣ್ಣುಮಕ್ಕಳಾಗಿ ನಮ್ಮ ದೇಹವನ್ನು ಯಾವತ್ತಿಗೂ ಕೆಟ್ಟದಾಗಿಯೇ ಚಿತ್ರಿಸಲಾಗುತ್ತದೆ. ಏನೇ ಆದರೂ ಜೀವನ ಸದಾ ಹೊಸ ಅನುಭವ ಹಾಗೂ ಹೊಸ ಉದಾಹರಣೆಗಳನ್ನು ನೀಡುತ್ತಲೇ ಇರುತ್ತದೆ ಎಂದ ಹೇಳಿಕೊಂಡಿದ್ದಾರೆ.
ಸನ್ನತಿ ಮಾಡಿರುವ ಪೋಸ್ಟ್​ಗೂ ಕೂಡ ಸಾಕಷ್ಟು ವಿರೋಧ ವ್ಯಕ್ತವಾಗಿವೆ. ಪವಿತ್ರವಾದ ಜಾಗದಲ್ಲಿ ಇವರ ಧಿರಿಸು ನೋಡಿ ನನಗೆ ನಾಚಿಕೆಯಾಗುತ್ತಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ. ನಿಮ್ಮ ಅರೆಬೆತ್ತಲೆ ಆತ್ಮ ಕೇವಲ ದೊಡ್ಡ ದೊಡ್ಡ ಶೂ ಮತ್ತು ಸ್ಯಾಂಡಲ್​ಗಳನ್ನು ಹಾಕಿಕೊಂಡಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಜನಪ್ರಿಯತೆಗಾಗಿ ಇನ್ನೂ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುರ್ಗಾ ಪೂಜಾ ಪೆಂಡಾಲ್​ಗೆ ಅರೆ ಬೆತ್ತಲೆಯಾಗಿ ಬಂದ ಮಾಡೆಲ್​​ಗಳು; ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆ

https://newsfirstlive.com/wp-content/uploads/2024/10/MODELS-IN-DURGA-PENDAL.jpg

Load More